ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳಾದ ಆರ್ಯಾಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ, ಸಡಗರದಿಂದ ಮಾಡಿದ್ದಾರೆ. ಬೆಂಗಳೂರು ನಗರದ ಫನ್ ವರ್ಲ್ಡ್’ನಲ್ಲಿ ಅಪಾರ ಅಭಿಮಾನಿಗಳ ಮಧ್ಯೆ ಸೆಲೆಬ್ರೇಷನ್ ಮಾಡಿದ್ದಾರೆ.
ಈ ಸಡಗರವನ್ನು ನೋಡಲು ಪುನೀತ್ ರಾಜ್‍ಕುಮಾರ್, ದರ್ಶನ್, ಅನಿರುದ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಗಣ್ಯರು ಬಂದಿದ್ದರು. ನಟ ಯಶ್ ಒಬ್ಬ ಖ್ಯಾತ ನಟನಿರಬಹುದು. ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರಬಹುದು. ಆದರೆ ಅವರು ಮಗಳಿಗೆ ಪ್ರೀತಿಯ ಅಪ್ಪ. ಮಗಳಿಗಾಗಿ ರಾಧಿಕಾ ಪಂಡಿತ್ ಮತ್ತು ಯಶ್ ಆಟದ ಸಾಮಾನುಗಳನ್ನು ತರಲು ಶಾಪಿಂಗ್ ಮಾಡಿದ್ದರು. ಮಕ್ಕಳ ಜೊತೆ ಯಶ್ ಚಿಕ್ಕ ಮಕ್ಕಳಂತೆ ಆಡುತ್ತಾರೆ.
ತಮ್ಮ ಮಗಳ ಹುಟ್ಟಿದ ಹಬ್ಬದ ದಿನ ರಾಕಿಂಗ್ ಸ್ಟಾರ್ ತಾನು ಸ್ಟಾರ್ ಎಂಬುದನ್ನು ಮರೆತು ಖುಷಿಯಿಂದ ಫನ್ ವರ್ಲ್ಡ್ ನಲ್ಲಿ ಆಟ ಆಡಿದ್ದಾರೆ. ಮೆರ್ರಿ ಗ್ರೌಂಡ್ ಹಾರ್ಸ್ ಏರಿ ಸವಾರಿ ಮಾಡಿದ್ದಾರೆ. ಎಷ್ಟು ದೊಡ್ಡ ನಟನಾಗಿದ್ದರೂ ಅವರು ಮಗಳಿಗಾಗಿ ಕುದುರೆ ಏರಿ ಆಟವಾಡಿದ್ದು ಅಭಿಮಾನಿಗಳಿಗೆ ಸಕ್ಕತ್ ಖುಷಿ ನೀಡಿದೆ.