ಸ್ನೇಹಿತರೆ ಈಗಾಗಲೇ ಕೊರೊನ ದೇಶದ ಉಳಿದ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ, ನಮ್ಮ ಪಕ್ಕದ ತಮಿಳಿನಾಡು ಹಾಗು ಗುಜರಾತ್ ಗಳಲ್ಲಿ ನನ್ನ ಅಟ್ಟಹಾಸ ನೆಡೆಸುತ್ತಲೇ ಇದೆ, ಆದರೆ ಕರ್ನಾಕಟ ಇವುಗಳಿಗೆ ಹೋಲಿಕೆ ಮಾಡಿದಾಗೆ ಸಮಾದಾನಕರವಾಗಿತ್ತು ಆದರೆ ಈಗ ಕರ್ನಾಟಕದಲ್ಲು ಅತಿ ವೇಗವಾಗಿ ಕರೋನ ಹಬ್ಬುತ್ತಿದೆ, ಅದಕ್ಕಾಗಿ ರಾಜ್ಯಸರ್ಕಾರ ಕೆಲವು ಕಟ್ಟು ನಿಟ್ಟಾದ ಕ್ರಮ ಜರುಗಿಸಲು ಮುಂದಾಗಿದೆ ಅದರಲ್ಲಿ ಒಂದು ಮಾಸ್ಕ್ ಇಲ್ಲದೆ ಮನೆಯಿಂದ ಯಾರು ಹೊರಬರಬಾರದು ಎಂದು, ಮಾಸ್ಕ್ ಇಲ್ಲದೆ ರಸ್ತೆಗೆ ಬಂದವರಿಗೆ ದಂಡ ವಿಧಿಸಲು ಮುಂದಾಗಿದೆ.
ನೆನ್ನೆ ಒಂದೇ ದಿನ ಒಟ್ಟು 82,200 ರೂಪಾಯಿ ದಂಡ ವಸೂಲಿ ಮಾಡಿದೆ, ಅಷ್ಟೇ ಅಲ್ಲ ರಾಯಚೂರಿನಲ್ಲಿ ಒಂದೇ ದಿನ 501 ಬೈಕ್ ಸವಾರಿಗೆ ದಂಡ ವಿಧಿಸಲಾಗಿದೆ, ಅಷ್ಟೇ ಅಲ್ಲದೆ ರಾಯಚೂರಿನಲ್ಲಿ 6, ಸಿಂಧೂರಿನಲ್ಲಿ ನಾಲ್ವರು ಅಂಗಡಿ ಮಾಲೀಕರು ಮತ್ತು ಲಿಂಗಸೂರಿನ ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ, ಜೂನ್ 25 ರಂದು 74,400 ರೂಪಾಯಿಗಳ ದಂಡ ವಸೂಲಿ ಮಾಡಿದರೆ ಜೂನ್ 24 ರಂದು 70,100 ರೂಪಾಯಿಗಳ ದಂಡ ವಸೂಲು ಮಾಡಲಾಗಿದೆ, ಆದ್ದರಿಂದ ಮನೆಯಿಂದ ಹೊರಗೆ ಹೋಗಬೇಕಾದರೆ ಮರೆಯದೆ ಮಾಸ್ಕ್ ಧರಿಸಿ, ನಿಮ್ಮ ಹಣವನ್ನು ಕಾಪಾಡುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಈ ಮಾಸ್ಕ್.