ಬಿಗ್’ಬಾಸ್ ನಲ್ಲಿ ಜೈಜಗದೀಶ್ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರ!

0
3414

ಬಿಗ್’ಬಾಸ್ ಕಿರುತೆರೆ ರಿಯಾಲಿಟಿ ಶೋಗಳಲ್ಲೇ ಅತ್ಯಂತ ವಿವಾದಾತ್ಮಕ ಮತ್ತು ದೊಡ್ಡ ಮನರಂಜನಾತ್ಮಕ ಶೋ. ಈ ಶೋ ಒಂದು ವಿಶಿಷ್ಟ ರೀತಿಯ ಟಾಸ್ಕ್’ಗಳಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಜನಪ್ರಿಯ ನಾಯಕನಟ, ನಟಿಯರು, ಕಿರುತೆರೆಯ ನಟಿಯರು, ಹಾಗೂ ವಿವಿಧ ರಂಗಗಳಲ್ಲಿ ಹೆಸರು ಮಾಡಿರುವ ಜನರು ಈ ಶೋನಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ಅವರ ನಿಜ ರೂಪವನ್ನು ನಾವು ನೋಡಬಹುದಾಗಿದೆ. ಸುಮಾರು ನೂರು ದಿನಗಳ ಕಾಲ ಈ ಮನೆಯೊಳಗೆ ಅವರಿವರ ಜೊತೆ ಟಾಸ್ಕ್ ನಲ್ಲಿ ಗೆದ್ದು ಕೊನೆಗೆ ಯಾರು ಉಳಿಯುತ್ತಾರೋ ಅವರು 50 ಲಕ್ಷ ರೂಪಾಯಿಗಳನ್ನು ಗೆಲ್ಲುತ್ತಾರೆ.

ಬಿಗ್ಬಾಸ್ ಮನೆಯೊಳಗೆ ಹೋಗಲು ಹಾತೊರೆಯುವವರು ಕೇವಲ 50 ಲಕ್ಷ ರೂಪಾಯಿ ಆಸೆಗೆ ಮಾತ್ರ ಹೋಗುವುದಿಲ್ಲ. ಆ ಶೋನ ಮೂಲಕ ಜನರಲ್ಲಿ ಅಭಿಮಾನ ಮಾಡಿಸಿಕೊಂಡು ಸಿನಿಮಾ ರಂಗದಲ್ಲಿ ಛಾಪು ಮೂಡಿಸಲು ಕಾಯುತ್ತಾರೆ.

ಈ ಸಲ ಬಿಗ್ಬಾಸ್ ಮನೆಯೊಳಗೆ ಕುರಿ ಪ್ರತಾಪ್, ಜೈ ಜಗದೀಶ್, ಭೂಮಿಕಾ ಶೆಟ್ಟಿ, ವಾಸುಕಿ ವೈಭವ್ ಮುಂತಾದ ಘಟಾನುಘಟಿಗಳೇ ಹೋಗಿದ್ದರು. ಆದರೆ ಇದರಲ್ಲಿ ಯಾರು ಗೆಲ್ಲಬಹುದು ಎಂದು ಕುತೂಹಲ ವೀಕ್ಷಕರಿಗೆ ಇತ್ತು.ಹೆಚ್ಚು ಜನರು ಜನಪ್ರಿಯ ನಟ ಜೈ ಜಗದೀಶ್ ಮತ್ತು ಕುರಿ ಪ್ರತಾಪ್ ನಡುವೆ ಸ್ಪರ್ಧೆ ಇರುತ್ತದೆ ಎಂದು ಊಹಿಸಿದ್ದರು. ಆದರೆ ಅವರ ಊಹಾಪೋಹಗಳನ್ನು ಮೀರಿ ಜೈಜಗದೀಶ್ ಆರನೇ ವಾರಕ್ಕೇ ಹೊರಬಿದ್ದರು.

ಜೈ ಜಗದೀಶ್ ಎಲ್ಲಾ ಸ್ಪರ್ಧಿಗಳಿಗಿಂತ ಚೆನ್ನಾಗಿಯೇ ಆಡುತ್ತಿದ್ದರು. ಅವರಿಲ್ಲದ ಶೋ ಸ್ವಲ್ಪ ಸಪ್ಪೆ ಎನ್ನಿಸುತ್ತಿದೆ. ಅವರ ಸಿನಿ ಜೀವನದ ಸಿಹಿ ಕಹಿ ಘಟನೆಗಳು, ಅವರ ಎರಡನೇ ಹೆಂಡತಿಯ ಬಗ್ಗೆ , ಮಗಳ ಕಾಳಜಿಯ ಬಗ್ಗೆ ಬಹಳ ವಿವರವಾಗಿ ಹೇಳಿ ಪ್ರೇಕ್ಷಕರಿಂದ ಸಹಾನುಭೂತಿ ಪಡೆದುಕೊಂಡಿದ್ದರು.

ಇನ್ನು ಬಿಗ್ಬಾಸ್ ಮನೆಯೊಳಗೆ ಹೋಗಿದ್ದ ಜೈ ಜಗದೀಶ್ ಅವರ ಸಂಭಾವನೆ ಎಷ್ಟಿರಬಹುದು ? ಒಬ್ಬ ದೊಡ್ಡ ನಟ , ನಿರ್ಮಾಪಕ ಒಂದು ಬಿಗ್ಬಾಸ್ ಶೋನಲ್ಲಿ ಇರಲು ಎಷ್ಟು ತೆಗೆದುಕೊಂಡಿರಬಹುದು ಎಂದು ಹೇಳುತ್ತೇವೆ ಕೇಳಿ. ಎಲ್ಲಾ ಸ್ಪರ್ಧಿಗಳಿಗಿಂತ ಜೈ ಜಗದೀಶ್ ಸಂಭಾವನೆ ಸ್ವಲ್ಪ ಹೆಚ್ಚಿಗೆಯೇ ಇದೆ.

ಜೈ ಜಗದೀಶ್ ಐದು ವಾರ ಇದ್ದರು. ಒಂದು ವಾರಕ್ಕೆ ಅವರ ಸಂಭಾವನೆ 50 ಸಾವಿರ ರೂಪಾಯಿ. 5 ವಾರಕ್ಕೆ ಒಟ್ಟು 2 ಲಕ್ಷದ 50 ಸಾವಿರ ರೂಪಾಯಿಗಳು.ಬಿಗ್ಬಾಸ್ ನಲ್ಲಿ ಅವರ ಸಂಭಾವನೆ ಮುಖ್ಯವಲ್ಲ. ಅವರ ಇನ್ನೊಂದು ಜೀವನವನ್ನು ಅದು ತೋರಿಸಿದೆ. ಜೈಜಗದೀಶ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

LEAVE A REPLY

Please enter your comment!
Please enter your name here