ಬಿಗ್ ಬಾಸ್ ಮನೆಗೆ ಹೋಗುವುದಕ್ಕಿಂತ ಮೊದಲು ಚೈತ್ರ ಮಾಡಿದ ಕೆಲಸ ನೋಡಿ

0
2642

ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೋಟೂರು ಎರಡನೇ ಬಾರಿಗೆ ಬಿಗ್ಬಾಸ್ ಮನೆಯೊಳಗೆ ಹೋಗಿದ್ದಾರೆ. ಕಳೆದ ವಾರ ಎಲಿಮಿನೆಟ್ ಆಗಿ ಹೊರಗೆ ಬಂದಿದ್ದರು. ಪ್ರೇಕ್ಷಕರು ಈಕೆಯನ್ನು ನಿರಾಕರಿಸಿದರೂ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಹೋಗಿರುವುದು ಬಿಗ್ ಬಾಸ್ ಅಭಿಮಾನಿಗಳಿಗಷ್ಟೇ ಅಲ್ಲ ಅಲ್ಲಿ ಇರುವ ಒಳಗಿನ ಸ್ಪರ್ಧಿಗಳಿಗೂ ಒಂತರಹ ಇರುಸು ಮುರುಸಾಗಿದೆ. ಈ ಮೊದಲು ಆರ್ ಜೆ ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ನಾಯಕಿ ನಟಿ ರಕ್ಷಾ ಸೋಮಶೇಖರ್ ಹೋದರು. ಈಗ ಮೂರನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಚೈತ್ರ ಎಂಟ್ರಿಯಾದರು. ಚೈತ್ರ ಕೋಟೂರು ಕನ್ನಡದ ಪ್ರತಿಭಾನ್ವಿತ ಲೇಖಕಿಯಾಗಿ ಹೆಸರು ಮಾಡಿದ್ದಾರೆ.

ಬಿಗ್ಬಾಸ್ ಮನೆಯೊಳಗೆ ಕೆಲವೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಚೈತ್ರ ಕೋಟೂರು ದಲಿತರಿಗೆ ಅವಮಾನ ಮಾಡಿದರು ಎಂದು ದಲಿತ ಸಂಘಟನೆಗಳು ಬಿಗ್ಬಾಸ್ ಮನೆಯ ಹೊರಗೆ ಪ್ರತಿಭಟನೆಗಳನ್ನು ಮಾಡಿದರು. ಕಡೆಗೆ ಪ್ರೇಕ್ಷಕರಿಂದ ಕಡಿಮೆ ಓಟ್ ಪಡೆದು ಹೊರಗೆ ಬಂದರು.

ಬಿಗ್ಬಾಸ್’ನಿಂದ ಹೊರಗೆ ಬಂದು ಚೈತ್ರ ಏನು ಮಾಡಿದರು ಗೊತ್ತೇ ? ಆಕೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ಮೊಬೈಲ್ ನಂಬರ್ ಹಾಕಿ ನಾನು ಈ ನಂಬರ್’ನ ವಾಟ್ಸಪ್’ನಲ್ಲಿ ಸಿಗುತ್ತೇನೆ ಎಂದು ನವೆಂಬರ್ 25 ರಂದು ಪೋಸ್ಟ್ ಮಾಡಿದರು. ಅವರ ಜೊತೆ ಮಾತಾಡುವ ಅವಕಾಶ ಸಿಗುತ್ತೆ ನೂರಾರು ಜನರು ಆ ನಂಬರ್ ಸೇವ್ ಮಾಡಿಕೊಂಡು ಅವರು ನಮಗೆ ಮೆಸೇಜ್ ಮಾಡುತ್ತಾರೆ ಎಂದು ವಾಟ್ಸಪ್ ಓಪನ್ ಮಾಡಿಕೊಂಡು ನೋಡಿದ್ದೇ ಬಂತು.ಚೈತ್ರಾರಿಂದ ಯಾವುದೇ ರಿಪ್ಲೈ ಬರಲಿಲ್ಲ. ಆ ನಂಬರ್’ಗೆ ಕಾಲ್ ಮಾಡಿದರೆ ಅದು ಸ್ವಿಚ್ ಆಫ್ ಆಗಿದೆ. ಯಾವಾಗಲಾದರೂ ಕಾಲ್ ಬರುತ್ತೆ ಅಥವಾ ವಾಟ್ಸಪ್ ಮೆಸೇಜ್ ಬರುತ್ತೆ ಎಂದು ಕಾದಿದ್ದೇ ಬಂತು, ಚೈತ್ರಾಳಿಂದ ಮತ್ತೊಂದು ಶಾಕ್ ಬಂತು. ಚೈತ್ರಾ ಕೊಟೂರು ಬಿಗ್ಬಾಸ್ ಮನೆಯೊಳಗೆ ವೈಲ್ಡಗ ಕಾರ್ಡ್ ಎಂಟ್ರಿ ಕೊಟ್ಟರು.

ನಾಳೆಯಿಂದ ನಾನು ಈ ನಂಬರ್’ನಲ್ಲಿ ಸಿಗುತ್ತೇನೆ ಎಂದು ಪೋಸ್ಟ್ ಮಾಡಿದ ಚೈತ್ರ ಅಭಿಮಾನಿಗಳಿಗೆ ಕಾಗೆ ಹಾರಿಸಿದ್ದಾರೆ. ಬಹುಶಃ ಅವರು ಬೇರೆ ಉದ್ದೇಶದಿಂದ ಆ ನಂಬರ್ ಕೊಟ್ಟಿರುವ ಸಾಧ್ಯತೆ ಇದೆ. ಹೇಗೋ ಬಿಗ್ಬಾಸ್ ಮನೆಯೊಳಗೆ ಹೋಗಿದ್ದಾರೆ. ಆ ನಂಬರನ್ನು ಅವರ ಹಿತೈಷಿಗಳು ಬಳಸಿ ವಾಟ್ಸಪ್ ಗ್ರೂಪ್ ಮಾಡಿ ಆಕೆಯನ್ನು ಬಿಗ್ಬಾಸ್ ಮನೆಯೊಳಗೆ ಸೇವ್ ಮಾಡಲು ಗ್ರೂಪಿನವರಿಗೆ ಮೆಸೇಜ್ ಮಾಡುವಂತೆ ಹೇಳಬಹುದು. ನೊಡೋಣ ಆಕೆಯ ಪ್ಲಾನ್ ಏನಿರಬಹುದು ಎಂದು !

LEAVE A REPLY

Please enter your comment!
Please enter your name here