ಎಚ್ಚರ ಉಪವಾಸದ ಹೆಸರಿನಲ್ಲಿ ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದೀರಾ..!?

0
2338

ತಿಂಗಳಿಗೆ ಅಥವಾ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಮಾನ್ಯವಾಗಿ ಯಾರು ಉಪವಾಸ ಮಾಡುವುದಿಲ್ಲ, ಬದಲಿಗೆ ತಮ್ಮ ಇಷ್ಟ ದೇವರಿಗೆ ಒಂದು ದಿನವನ್ನು ಅರ್ಪಣೆ ಮಾಡಿ, ತಮ್ಮ ಇಷ್ಟದ ಬೇಡಿಕೆಗಳನ್ನು ನೆರವೇರಿಸುವಂತೆ ಕೋರಿಕೆಯನ್ನು ದೇವರ ಮುಂದೆ ಸಲ್ಲಿಸಿರುತ್ತಾರೆ, ಅಂತವರು ಉಪವಾಸದ ಬಗ್ಗೆ ಒಮ್ಮೆ ಸರಿಯಾಗಿ ತಿಳಿದುಕೊಂಡರೆ ಇನ್ನೂ ಉತ್ತಮ ಎಂಬುದು ನಮ್ಮ ಅನಿಸಿಕೆ, ಆದ್ದರಿಂದ ಉಪವಾಸ ಎನ್ನುವುದರ ನಿಜವಾದ ಅರ್ಥ ಎಂದು ತಿಳಿಸುತ್ತೇವೆ.

ಉಪವಾಸ ಎಂದರೆ ದೇವರ ಬಳಿ ವಾಸಿಸುವುದು, ಸದಾ ಮಾನಸಿಕ ಧ್ಯಾನ, ಸ್ತುತಿ ಸ್ತೋತ್ರ ಪಾರಾಯಣ, ಪೂಜೆ ಹಾಗೂ ಸಾಷ್ಟಾಂಗ ನಮನ ಗಳಿಂದ ದೇವರೇ ಬೇಕು, ದೇವರೇ ಸಾಕು ಎಂಬ ಧೈರ್ಯ ವಿಭವದ ಪರಾಕಾಷ್ಠೆಯಿಂದ ದೇವರಲ್ಲಿ ಮನಸ್ಸನ್ನು ನೆಟ್ಟಿರುವುದು ಎಂದರ್ಥ.

ಯಥಾರ್ಥ ವಾಗಿ ನಾಮಸ್ಮರಣೆಯಲ್ಲಿ ಮುಳುಗಿದ ಮನಕ್ಕೆ ಆಹಾರದ ಗೊಡವೆಯೇ ಇರದು, ಆಹಾರ ಸೇವನೆಯಿಂದ ನಿದ್ರೆ, ಆಹಾರ ಸೇವನೆಯಿಂದ ನಿದ್ರೆ, ಮಲ ಮೂತ್ರ ವಿಸರ್ಜನೆ ತೊಡಕು ಕಾಣಿಸಿ ನಾಮಸ್ಮರಣೆ ಗೂ ಭಂಗ ಬರುತ್ತದೆ, ಆದ್ದರಿಂದಲೇ ಉಪವಾಸ ಎಂದರೆ ಆಹಾರ ಸೇವಿಸುತ್ತಿರುವುದು ಎಂದಾಯಿತು, ಆದರೆ ಚಪಲತೆ ಇನ್ನು ತಡೆಯಲಾರದ ಅವರು ಅಕ್ಕಿಯಿಂದ ಅನ್ನ, ತಿಂಡಿ ಎಲ್ಲ ಮುಸುರೆ, ಅದರ ಹೊರತಾದ ಅವಲಕ್ಕಿ, ಗೋಧಿ, ರವೆ ಇತ್ಯಾದಿ ಮುಸುರೆ ಅಲ್ಲ ಪ್ರಸಾದ ಎಂದು ಉಪವಾಸದ ದಿನ ಅವುಗಳನ್ನು ಸೇವಿಸಿದರೆ ದೋಷ ಇಲ್ಲ ಎಂಬ ಅನುಕೂಲ ಶಾಸ್ತ್ರ ಹುಟ್ಟಿಸಿಕೊಂಡಿದ್ದಾರೆ.

ಅಂತೂ ಉಪವಾಸ ಸಾರ್ಥಕವಾಗುವುದು ಮುಸುರೆ ಇನ್ನು ಇನ್ನು ಏನನ್ನು ತಿನ್ನುವುದರಿಂದಲೂ ಅಥವಾ ತಿನ್ನದಿರುವುದುರಿಂದಲೂ ಅಲ್ಲ, ಮನಸ್ಸನ್ನು ಭಗವತ್ ಅರ್ಪಿತ ವಾಗಿ ಮಣಿದು ಮರೆಯುವುದ ರಿಂದಲೇ, ಭಗವಂತನ ನಾಮದ ಹಸಿವೆ ಹೆಚ್ಚು ಅದೇ ಆಹಾರ ವಾದಾಗ ಹೊಟ್ಟೆಯ ಹಸಿವು ಪರಿವೆಯೂ ಇರದ, ತಿಂಡಿಯ ಗೊಡವೆಯೂ ಇರದು ಎಂಬುದು ನಿಶ್ಚಲ ಸತ್ಯ.

LEAVE A REPLY

Please enter your comment!
Please enter your name here