ವಾಯುವಿಗೆ ಎಲ್ಲವನ್ನೂ ಮೀರಿಹೋಗುವ ಶಕ್ತಿ ಇದೆ. ಇದನ್ನೂ ಮೀರಿ ಹೋಗುವ ಶಕ್ತಿ ಮನಸ್ಸಿಗಿದೆ. ಇದನ್ನೇ ಮನೋವೇಗ ಎನ್ನುವರು. ಈ ಮನೋವೇಗ ಉಳ್ಳವನೇ ಆಂಜನೇಯ. ಆದ್ದರಿಂದ ಇವನನ್ನು ಋಷಿಮುನಿಗಳು ‘ಮನೋವೇಗ ಗಮನ’ಎಂದು ವರ್ಣಿಸಿರುವರು, ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ತಿಳಿದು ಅದಕ್ಕೆ ಸ್ಪಂದಿಸಿ, ನಮ್ಮನ್ನು ಭವಸಾಗರದಿಂದ ದಾಟಿಸುವ ಶಕ್ತಿ ಈ ಆಂಜನೇಯನಿಗಿದೆ.
ಹನುಮಂತ ವಜ್ರಕಾಯದವನು, ಈತನಿಗೆ ರಾಮನಾಮದ ರಕ್ಷಾಕವಚ ಇರುವುದರಿಂದ ಯಾವ ದುಷ್ಟಶಕ್ತಿಯೂ ಅವನ ಹತ್ತಿರ ಬರುವುದಿಲ್ಲ. ಈ ಮಂತ್ರದ ಬಲದಿಂದ ಶನಿಪ್ರಭಾವವು ಮುಟ್ಟಲಾಗಲಿಲ್ಲ. ಎಲ್ಲಿ ನಿನ್ನನ್ನು ಆರಾಧಿಸುವರೋ ಅಲ್ಲಿ ನಾನು ಅವರನ್ನು ಪೀಡಿಸುವುದಿಲ್ಲ ಎಂದು ಶನಿದೇವ ಹೇಳಿರುವನು, ಆದ್ದರಿಂದ ಸಾಡೇಸಾತ್ ಶನಿ, ಪಂಚಮಶನಿ, ಅಷ್ಟಮಶನಿ, ಜಾತಕದಲ್ಲಿ ಶನಿದೋಷ ಇರುವವರು ಆಂಜನೇಯನನ್ನು ನಿರಂತರವಾಗಿ ಆರಾಧಿಸಿದರೆ ದೋಷಗಳಿಂದ ಮುಕ್ತಿ ಹೊಂದಬಹುದು.
ಹಾಗೆ ಆಂಜನೇಯನಿಗೆ ಈ ರೀತಿ ಪೂಜೆ ಸಲ್ಲಿಸಿದರೆ, ಅಂಜನೇಯ ಬಹು ಬೇಗ ಪ್ರಸನ್ನನಾಗಿ ನಿಮ್ಮ ಹಾಗು ನಿಮ್ಮ ಕುಟುಂಬಕ್ಕೆ ಯಾವುದೇ ರೀತಿಯ ದುಷ್ಟಶಕ್ತಿಗಳು ತಾಗದೆ, ಆರೋಗ್ಯ ಸಮಸ್ಯೆಗಳು ದೂರವಾಗಿ ಎಲ್ಲರಿಗೂ ಸಂತೋಷವನ್ನು ಕರುಣಿಸುತ್ತಾನೆ.
ಪ್ರತಿ ಮಂಗಳವಾರದಂದು ಮುಂಜಾನೆ ಬೇಗ ಎದ್ದು ತಲೆ ಸ್ನಾನ ಮಾಡಿ, ದೇವರ ಕೋಣೆ ಸುಚಿಯಾಗಿಸಿ. ಮೊದಲಿಗೆ ವಿಜ್ಞ ನಿವಾರಕ ವಿನಾಯಕನನ್ನು ಸ್ಮರಿಸಬೇಕು ನಂತರ ಸೀತಾ ರಾಮ ಸಮೇತವಾಗಿ ಇರುವ ಫೋಟೋಗೆ ಕುಂಕುಮ ಬೊಟ್ಟು ಇಡಬೇಕು. ಆಂಜನೇಯನಿಗೆ 11 ಕೆಂಪು ಬಣ್ಣದ ಹೂವನ್ನು ಸಮರ್ಪಿಸಬೇಕು, ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು. ನಂತರ ಸ್ವಾಮಿಗೆ ಹನುಮಾನ್ ಚಾಲಿಸವನ್ನು ಪಠಿಸುತ್ತ ಬಿಲ್ವ ಪಾತ್ರೆಯನ್ನು ಸಮರ್ಪಿಸಬೇಕು.
ಶ್ರೀರಾಮ ರಾಮ ರಾಮೇತಿ, ರಮೇ ರಾಮ ಮನೋರಮೇ, ಸಹಸ್ರ ನಾಮ ತತ್ತುಲ್ಯಂ, ರಾಮ ನಾಮ ವರಾನನೇ.
ಈ ಮಂತ್ರವನ್ನು ಪಠಿಸಿದ ನಂತರ, ನೈವೇದ್ಯವಾಗಿ ಬಾಳೆಹಣ್ಣನ್ನು ಇಡಬೇಕು. ಕೊನೆಯಲ್ಲಿ ಆರತಿ ಮಾಡಬೇಕು. ಹೀಗೆ 11 ವಾರಗಳು ಬಿಲ್ವಪತ್ರೆಯಿಂದ ಪೂಜೆ ಸಲ್ಲಿಸ್ದರೆ, ನಿಮ್ಮ ದಾರಿದ್ಯ, ರೋಗ, ಅಶಾಂತಿ, ದುಡ್ಡಿನ ಸಮಸ್ಯೆ ಎಲ್ಲ ದೂರ ಹೋಗಿ ನಿಮ್ಮ ಜೀವನದಲ್ಲಿ ಚೇತರಿಕೆಯಾಗುತ್ತದೆ.