ಅತಿಸಾರ ಹಾಗು ಆಮಶಂಕೆ ಸಮಸ್ಯೆಗೆ ಅತ್ಯಂತ ಸುಲಭ ಮನೆಮದ್ದುಗಳು..!!

0
2461

ಅಳಲೇಕಾಯಿ ಸಿಪ್ಪೆಯನ್ನು ಮತ್ತು ಸಮಪ್ರಮಾಣ ಜೀರಿಗೆಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದು, ಚೂರ್ಣ ಮಾಡಿ ಒಂದು ಸಲಕ್ಕೆ 1.25 ಗ್ರಾಂ ನಷ್ಟು ದಿನಕ್ಕೆ ಮೂರು ಬಾರಿ, 3 – 4 ದಿನ ಮಜ್ಜಿಗೆಯಲ್ಲಿ ಸೇವಿಸಿದರೆ ಅತೀಸಾರ ಪರಿಹಾರವಾಗುತ್ತದೆ.

ಅತ್ತಿಯ ಹಾಲು 6 ರಿಂದ 12 ಗ್ರಾಂ ಜೊತೆಗೆ ಅಷ್ಟೇ ತೂಕ ಸಕ್ಕರೆ ಸೇರಿಸಿ ನಿತ್ಯ ಎರಡು ಹೊತ್ತು ಸೇವಿಸಿದರೆ ಅತೀಸಾರ ಕಡಿಮೆಯಾಗುತ್ತದೆ.

ಬಲಿತ ಹುಣಸೆ ಮರದ ಒಳ ಚಕ್ಕೆಯನ್ನು ತೆಯ್ದಾಗ ಬರುವ ಗಂಧವನ್ನು 0.625 ಗ್ರಾಮ್ ನಷ್ಟು ನೀರಿನಲ್ಲಿ ಅಥವಾ ಕಳೆದ ಮಜ್ಜಿಗೆಯಲ್ಲಿ ಕಲಸಿ ಪ್ರತಿ 4 ಗಂಟೆಗೊಮ್ಮೆ ಕುಡಿದರೆ ಅತಿಸಾರ, ಆಮಶಂಕೆ ಕಡಿಮೆಯಾಗುತ್ತದೆ.

ಕಾಡು ತುಳಸಿ ಎಲೆಯ ಕಷಾಯದ 14 ಮಿ. ಲೀ ನಲ್ಲಿ 0.375 ಗ್ರಾಂ ಜಾಕಾಯಿ ಚೂರ್ಣವನ್ನು ಸೇರಿಸಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಅತಿಸಾರ, ಆಮಶಂಕೆ ಯನ್ನು ನಿವಾರಿಸಿಕೊಳ್ಳಬಹುದು.

ಚೆನ್ನಾಗಿ ಬಲಿತ ತೆಂಗಿನಕಾಯಿ ಹಾಲು 30 ಗ್ರಾಂನಲ್ಲಿ 1.5 ರಿಂದ 3 ಗ್ರಾಂ ನಷ್ಟು ತೂಕ ವಸ್ತ್ರ ಗಾಳಿತ ಅಳಲೇಕಾಯಿ ಚೂರ್ಣ ಬೆರೆಸಿ ದಿನಕ್ಕೆರಡು ಬಾರಿ, ಮೂರು ನಾಲ್ಕು ದಿನ ಕುಡಿಯುವುದರಿಂದ ಅತಿಸಾರ ನಿವಾರಣೆಯಾಗುತ್ತದೆ.

ಅತಿಸಾರ ಹಾಗೂ ಆಮಶಂಕೆ ನಿವಾರಣೆಯ ಬಗ್ಗೆ ತಿಳಿಸಿದಂತೆ ಅತ್ಯುತ್ತಮ ಮನೆಮದ್ದಿನ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here