ಹಸಿ ಬಟಾಣಿ ತಿಂದರೆ ಎಷ್ಟೆಲ್ಲಾ ಕಾಯಿಲೆಯಿಂದ ಮುಕ್ತಿ ಸಿಗುತ್ತೆ ಅಂತ ನಿಮಗೆ ಗೊತ್ತಾ..?

0
5129

ಅಡುಗೆಗೆ ಬಟಾಣಿಯನ್ನು ಬಳುಸುತ್ತೇವೆ ಕಾರಣ ರುಚಿಯನ್ನು ನೀಡುತ್ತದೆ, ಅದೇ ರೀತಿಯಲ್ಲಿ ಹಸಿ ಬಟಾಣಿಯಿಂದ ಸಿಗುವಂತ ಲಾಭದಾಯಕ ಅಂಶಗಳು ಯಾವುವು ಅನ್ನೋದನ್ನ ನಿಮಗೆ ತಿಳಿಸುತ್ತೇವೆ ನೋಡಿ.

ಹಸಿ ಬಟಾಣಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜ್ವರ, ನಗಡಿ ಹಾಗು ಕೆಮ್ಮಿನ ಸಮಸ್ಯೆಗಳಿಂದ ನಿಮ್ಮನ್ನು ಕಾಯುತ್ತದೆ.

ಹಸಿ ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ, ಇವು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ, ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.

ಅತ್ಯಂತ ಪೌಷ್ಟಿಕಾಂಶಭರಿತ ದ್ವಿದಳ ತರಕಾರಿಗಳಲ್ಲೊಂದಾಗಿರುವ ಹಸಿ ಬಟಾಣಿ ಆರೋಗ್ಯಕ್ಕೆ ಲಾಭಕಾರಿಯಾದ ಫೈಟೊ ನ್ಯೂಟ್ರಿಯಂಟ್‌ಗಳು, ಖನಿಜಗಳು, ವಿಟಾಮಿನ್ ಗಳು ಮತ್ತು ಆ್ಯಂಟಿ ಆಕ್ಸಿಡಂಟ್‌ಗಳನ್ನು ಹೇರಳವಾಗಿ ಹೊಂದಿದೆ.

ಸಂಧಿವಾತದ ಪರಿಣಾಮವಾಗಿ ಮೂಳೆಸಂದುಗಳಲ್ಲಿ ನೋವು ಅನುಭವಿಸುತ್ತಿರುವ ರೋಗಿಗಳಿಗೆ ಹಸಿ ಬಟಾಣಿ ಔಷಧಿಯಂತೆ ಕೆಲಸ ಮಾಡುತ್ತದೆ.

ಹಸಿ ಬಟಾಣಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ ಹಾಗೂ ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸಿ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಹಸಿ ಬಟಾಣಿ ಬೀನ್ಸ್‌ಗೆ ಹೋಲಿಸಿದರೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ, ಪ್ರತಿ 100 ಗ್ರಾಂ ಹಸಿ ಬಟಾಣಿ ಕೇವಲ 81 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ, ಕೊಲೆಸ್ಟರಾಲ್ ಇದರಲ್ಲಿಲ್ಲ, ಜೊತೆಗೆ ಇದು ಪ್ರೋಟಿನ್, ವಿಟಾಮಿನ್ ಗಳು ಹಾಗೂ ಕರಗಬಲ್ಲ ಮತ್ತು ಕರಗದ ನಾರಿನಂಶಗಳ ಉತ್ತಮ ಮೂಲವಾಗಿದೆ.

100 ಗ್ರಾಂ ಹಸಿ ಬಟಾಣಿ ನಮ್ಮ ಶರೀರದ ದೈನಂದಿನ ಅಗತ್ಯದ ಶೇ. 16ರಷ್ಟು ಫೊಲೇಟ್‌ಗಳನ್ನು ಒದಗಿಸುತ್ತದೆ, ಫೊಲೇಟ್ ಶರೀರದೊಳಗೆ ಡಿಎನ್‌ಎ ಸಂಶ್ಲೇಷಣೆಗೆ ಅಗತ್ಯವಾಗಿರುವ ಬಿ ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳಲ್ಲೊಂದಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here