ಮನೆಯಲ್ಲಿ ಕೆಲಸ ಮಾಡುವ ಹೆಂಗಸರಿಗೆ ಆಗಲಿ ಅಥವಾ ಆಫೀಸಿನಲ್ಲಿ ಕೂತು ಕೆಲಸ ಮಾಡುವ ಗಂಡಸರಿಗೆ ಆಗಲಿ ಕಾಡುವ ಬಹುದೊಡ್ಡ ಸಮಸ್ಯೆಯೆಂದರೆ ಅದು ಹೊಟ್ಟೆಯ ಸುತ್ತಲಿನ ಬೊಜ್ಜುತನ, ನೆನಪಿರಲಿ ದೇಹದ ಯಾವ ಭಾಗದಲ್ಲಾದರೂ ಬೊಜ್ಜು ಬಂದರೆ ಕರಗಿಸಬಹುದು ಆದರೆ ಹೊಟ್ಟೆಯ ಸುತ್ತಲೂ ಮೂಳೆಗಳ ಪ್ರಮಾಣ ಕಡಿಮೆ ಇರುವುದರಿಂದ ಇಲ್ಲಿನ ಬೊಜ್ಜು ಕರಗಿಸುವುದು ಬಹಳ ಕಷ್ಟ.
ಪ್ರತಿನಿತ್ಯದ ನಿಮ್ಮ ವ್ಯಾಯಾಮದ ಜೊತೆಯಲ್ಲಿ ಇಂದು ನಾವು ನಿಮಗೆ ತಿಳಿಸುವ ಒಂದು ಪೇಯವನ್ನು ಮನೆಯಲ್ಲಿಯೇ ತಯಾರಿಸಿ ಪ್ರತಿ ದಿನ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ, ಹೊಟ್ಟೆ ಸುತ್ತಲಿನ ಕೊಬ್ಬನ್ನು ಕರಗಿಸುವ ನಿಮ್ಮ ಪ್ರಯತ್ನಕ್ಕೆ ಆನೆ ಬಲ ಬರುತ್ತದೆ, ಹಾಗಾದರೆ ಆ ಪಾನೀಯ ಯಾವುದು ತಯಾರಿಸುವುದು ಹೇಗೆ ತಿಳಿಯಲು ಮುಂದೆ ಓದಿ.
ಬೇಕಾಗಿರುವ ಪದಾರ್ಥ : 250ml ನೀರು, 2 ಟೀ ಚಮಚ ಜೇನುತುಪ್ಪ, ಚಕ್ಕೆ ಪುಡಿ 1 ಟೀಚಮಚ.
ಮಾಡುವ ರೀತಿ : ಪಾತ್ರೆಯಲ್ಲಿ ನೀರು ಹಾಕಿ 3 ರಿಂದ 4 ನಿಮಿಷ ಕುದಿಸಿ ನಂತರ ಅದಕ್ಕೆ ಚೆಕ್ಕೆ ಪುಡಿ 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಸ್ಟವ್ ಅನ್ನು ಆಫ್ ಮಾಡಿ ಪಾತ್ರೆ ಕೆಳಗಿಳಿಸಿ, ನೀರು ತಣ್ಣಗಾದ ಮೇಲೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ.
ಈ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ದೇಹದ ಕೊಬ್ಬು ಅತಿ ಬೇಗ ಕರಗಲು ಸಹಾಯ ಮಾಡುತ್ತದೆ, ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ವೀಡಿಯೋ ಲಿಂಕನ್ನ ಕೊಟ್ಟಿದ್ದು ಒಮ್ಮೆ ಸಂಪೂರ್ಣವಾಗಿ ನೋಡಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.