ಕಲಿಯುಗದ ಅಜಾತಶತ್ರು ಹಾಗೂ ಚಿರಂಜೀವಿ ಆಂಜನೇಯ ಪ್ರೀತಿಯ ವಾರ ಅದು ಮಂಗಳವಾರ, ಮಂಗಳವಾರ ಹನುಮಂತನ ಪೂಜೆ ಮಾಡುವುದು ಶ್ರೇಷ್ಠ ಕರ ಹಾಗೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ವರ್ಷದ 5ನೇ ತಿಂಗಳು ಶಿವ ಪೂಜೆಗೆ ವಿಶೇಷ ಕಾಲ, ಹನುಮಂತನನ್ನು ಭಗವಂತನ ಹನ್ನೊಂದನೇ ಅವತಾರವೆಂದು ನಂಬಲಾಗಿದೆ.
ಮಂಗಳವಾರದಂದು ಹನುಮಂತನಿಗೆ ಮಾಡುವ ಪೂಜೆ ಯಿಂದ ಸಿಗುವ ಲಾಭವೇನು ಎಂದರೆ, ಶೌರ್ಯ, ಧೈರ್ಯ, ಬುದ್ಧಿವಂತಿಕೆ, ಶ,ಕ್ತಿ ಪವಿತ್ರತೆ ಪ್ರಾಪ್ತಿಯಾಗಿ ನೋವು, ಕಷ್ಟಗಳು ದೂರವಾಗುತ್ತದೆ, ಹಾಗಾಗಿ ಪ್ರತಿ ಮಂಗಳವಾರ ನಿಮ್ಮ ಹತ್ತಿರದ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ಕೊಟ್ಟು ದರ್ಶನ ಪಡೆಯುವುದು ಉತ್ತಮ.
ಮಾನಸಿಕ ಹಿಂಸೆ, ತೊಳಲಾಟ, ಏನು ಅರಿಯದಂತಹ ಕಷ್ಟಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಪ್ರತಿ ಮಂಗಳವಾರ ಸಂಜೆ ಐದು ಗಂಟೆಯ ನಂತರ ಹನುಮಂತನಿಗೆ ಮಲ್ಲಿಗೆಯ ಎಣ್ಣೆ ಬಳಸಿ ದೀಪ ಹಚ್ಚಿ, ಶ್ರದ್ಧೆ ಹಾಗೂ ಭಕ್ತಿಯಿಂದ ಹನುಮನನ್ನು ಕಷ್ಟ ನೀಗಿಸುವಂತೆ ಬೇಡಿಕೊಳ್ಳಿ ನಿಮ್ಮ ಈ ರೀತಿಯ ಎಲ್ಲಾ ಸಮಸ್ಯೆಗಳು ಅತಿ ಬೇಗ ಕಳೆದು ಹೋಗುವುದು.
ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತಿದ್ದರೆ, ಭಗವಂತನಿಗೆ ಧನಪ್ರಾಪ್ತಿ ಕೊಡುವಂತೆ ಹರಕೆ ಹೊತ್ತುಕೊಂಡು ಸ್ವತಹ ನಿಮ್ಮ ಕೈಯಾರೆ ಗುಲಾಬಿ ಹೂವನ್ನು ಬಳಸಿ ಮಾಲೆಯನ್ನು ತಯಾರಿಸಿ ಅದನ್ನು ನಿಮ್ಮ ಹತ್ತಿರದ ಹನುಮಂತನ ದೇವಾಲಯ ದ ಹನುಮನ ವಿಗ್ರಹಕ್ಕೆ ಅರ್ಪಣೆ ಮಾಡಿ, ನಿಮ್ಮ ಸಕಲ ಕಾರ್ಯಗಳಿಗೆ ಯಶಸ್ಸನ್ನು ಹನುಮನು ನೀಡುತ್ತಾನೆ, ನೀವು ಕೊಟ್ಟ ಗುಲಾಬಿ ಮಾಲೆಯಲ್ಲಿ ಒಂದು ಹೂವನ್ನು ಮಾತ್ರ ಮನೆಗೆ ತನ್ನಿ ಮನೆಗೆ ತರುವಾಗ ಹಿಂದಿರುಗಿ ನೋಡಬೇಡಿ, ಮನೆಗೆ ತಂದ ಒಂದು ಹೂವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಹಣ ಮಾಡುವ ಸ್ಥಳದಲ್ಲಿ ಇಟ್ಟು ಬಿಡಿ.
ವೀಳ್ಯದೆಲೆ ಯ ಸೇವೆಯು ಹನುಮನಿಗೆ ಬಹಳ ಪ್ರಿಯ, ಪ್ರತಿ ಮಂಗಳವಾರ ವೀಳ್ಯದೆಲೆಯ ಹಾರವನ್ನು ಹನುಮನ ಮೂರ್ತಿಗೆ ಅರ್ಥನೇ ಮಾಡುವುದರಿಂದಲೂ ಶುಭ ಪ್ರಾಪ್ತಿಯಾಗುತ್ತದೆ ಅಥವಾ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಬೆಲ್ಲ ಮತ್ತು ಕಡಲೆ ಇಟ್ಟು ಕೊಂಡು ಸೇವೆ ಮಾಡಿ.