ವಿದ್ಯೆ ಇಲ್ಲದವರು ಇಲ್ಲಿ ಪ್ರಾರ್ಥಿಸಿದರೆ ವಿಧ್ಯಾಪ್ರಾಪ್ತಿಯಾಗುತ್ತದೆ!

0
6988

ಈ ಕ್ಷೇತ್ರ ಸಾಧಾರಣ 1400 ವರ್ಷ ಪುರಾತನವಾಗಿದೆ. ಮಹಿಷ ಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿ ತುಂಬಾ ವಿರಳ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರಥಮ.

ಇತಿಹಾಸದಲ್ಲಿ ಮಹಿಷಮರ್ದಿನಿ ಎಂಬ ಶಕ್ತಿಯನ್ನು ಬ್ರಾಹ್ಮಣರ ಮನೆಯಲ್ಲಿ ಪೂಜೆ ಮಾಡುತ್ತಾರೆ. ಕಾಲಗಟ್ಟದಲ್ಲಿ ಅವರಿಗೆ ಪೂಜೆ ಮಾಡಲು ಆಗದಿದ್ದಕ್ಕೆ ಈಗ ಇರುವ ಕ್ಷೇತ್ರದ ಉತ್ತರ ಭಾಗದಲ್ಲಿ ಭಂಡಾರ ಮನೆ ಇದೆ. ಆ ಮನೆಯಲ್ಲಿ ಮಹಿಷಮರ್ದಿನಿಯನ್ನು ಪೂಜೆ ಮಾಡುತ್ತಿದ್ದರು. ಕಾಲಕ್ರಮೇಣ ಆ ಮಹಿಷಮರ್ದಿನಿ ದೇವತೆಯನ್ನು ತಂದು ಈಗ ಇರುವ ಸಾನಿಧ್ಯದಲ್ಲಿ ಇಡಲಾಯಿತು. ಕಾಲಾಕ್ರಮೇಣ ಮಾರಿಯಮ್ಮ ಎಂಬ ಶಕ್ತಿಯು ಗರ್ಭಗುಡಿಯಲ್ಲಿ ಐಕ್ಯವಾಯಿತು.

ಆದುದರಿಂದ ಗರ್ಭಗುಡಿಯಲ್ಲಿ ಎರಡು ಶಕ್ತಿಗಳನ್ನು ಪೂಜಿಸಲ್ಪಟ್ಟಿತು ಆದರೆ ಮಹಿಷಮರ್ದಿನಿಗೆ ಪಾಣಿ ಪೀಠ ಇತ್ತು. ಮಾರಿಯಮ್ಮನಿಗೆ ಯಾವುದೇ ಪಾಣಿಪೀಠ ಇರಲಿಲ್ಲ, ಆ ಶಿಲೆ ಮಹಿಷಮರ್ದಿನಿಗೆ ಒರಗಿ ಕೊಂಡಿತ್ತು ಮಾರಿಯಮ್ಮನ ನೇರದೃಷ್ಟಿಗೆ ರಾಶಿಕಟ್ಟೆ ಇದೆ, ಅದಕ್ಕೂ ನೇರವಾಗಿ ರಣಕಂಬ ಇದೆ ಅದಕ್ಕೂ ನೇರವಾಗಿ ಮಹಾತಂಗಿ ಕಟ್ಟೆಯಿದೆ, ಇವಗಳ ಮಧ್ಯದಲ್ಲಿ ಎರಡು ಪಾದುಕೆಯ ಚಿಹ್ನೆ ಇದೆ, ಶಿಷ್ಯರು ಮಾರಿ ದೇವರನ್ನು ಉಂಟು ಮಾಡಿ ಅವರ ಪಾರಿಚಾರಿಕೆ ಕೆಲಸಕ್ಕಾಗಿ ಮಹಾತಂಗಿ, ಮಾಯರಾಣ ಮತ್ತು ಧೂತ ಎಂಬ ಈ ಮೂರು ಶಕ್ತಿಗಳನ್ನು ಹೊರಗಿನಿಂದ ಕ್ಷೇತ್ರ ರಕ್ಷಣೆಗೆ ಇಟ್ಟುಕೊಂಡಿದ್ದರು. ಹಾಗೆಯೇ ಕ್ಷೇತ್ರದ ಹೊರ ಆವರಣ 6ನೇ ದಿಕ್ಕಿನಲ್ಲಿ ದೇವರ ಕ್ಷೇತ್ರ ಪಾಲಕನಾಗಿ ರಾಜ ಗುಳಿಗನ ವಾಸ ಸ್ಥಳ ಇದೆ ಹಾಗೆಯೇ ಕ್ಷೇತ್ರದ ನೈರುತ್ಯ ದಿಕ್ಕಿನಲ್ಲಿ ಅಶ್ವತ್ತ ಕಟ್ಟೆಯಿದೆ, ಆ ಕಟ್ಟೆಯಲ್ಲಿ ಯಕ್ಷಣಿಯನ್ನು ಪ್ರತಿಷ್ಟಾಪನೆ ಮಾಡಿದ್ದಾರೆ ತದನಂತರ ಭಂಡಾರ ಮನೆಯಲ್ಲಿ ಇರುವ ಮಹಿಷಮರ್ದಿನಿಯನ್ನು ಕ್ಷೇತ್ರಕ್ಕೆ ತಂದರು.

ನಂತರ ಭಂಡಾರಮನೆಯಲ್ಲಿ ಯಲ್ಲಮ್ಮನನ್ನು ಪ್ರತಿಷ್ಟಾಪನೆ ಮಾಡಲಾಯಿತು. ಅಲ್ಲಿಯ ಕ್ಷೇತ್ರ ಪಾಲನೆಗಾಗಿ ನಾಗ ಬನವು ಹಾಗೂ ಪಂಜುರ್ಲಿಯನ್ನು ಪ್ರತಿಷ್ಟಾಪನೆ ಮಾಡಲಾಯಿತು. ಆ ಕ್ಷೇತ್ರದ ವೈಶಿಷ್ಟ್ಯವೆಂದರೆ ತ್ರಿಗುಣತ್ಮಿಕ ಗುಣವುಳ್ಳ ಮಾರಿಯಮ್ಮ ಮಹಿಷ ಮರ್ದಿನಿ ಸಾನಿಧ್ಯದಲ್ಲಿ ದೊಡ್ಡ ರೋಗಗಳಿಗೆ ಅರಶಿಣ ಪ್ರಸಾದವನ್ನು ಕ್ಷೇತ್ರದಲ್ಲಿ ಪಾರ್ಥಿಸಿಕೊಂಡು ಹೋಗಿ ರೋಗ ಇರುವ ದೇಹಕ್ಕೆ ಹಚ್ಚಿದರೆ ಒಮ್ಮೆಗೆ ಅದು ತಡೆಯಾಗಿ ಉಪಶಮನಗೊಳ್ಳುತ್ತದೆ. ತದನಂತರ 14 ದಿನಗಳ ನಂತರ ಆ ವ್ಯಕ್ತಿಯನ್ನು ಮಂಟಪದಲ್ಲಿ ಕುಳ್ಳಿರಿಸಿ ತೀರ್ಥ ಪ್ರೋಕ್ಷಣೆ ಮಾಡಿದರೆ ಸಂಪೂರ್ಣ ಗುಣಮುಖರಾಗುತ್ತಾರೆ. ಇದು ಮಾರಿಯಮ್ಮನ ಮಹಿಮೆ, ಮಹಿಷಮರ್ದಿನಿ ದ್ವಿಗುಣ ಶಕ್ತಿವುಳ್ಳವರು ಅದರಲ್ಲಿ ಅವಳ ಗುಣಗಳು ವಿದ್ಯಾಯಿಣಿ ಸ್ವಯಂ ಸ್ವರೂಪಿಣಿ ವಿದ್ಯೆ ಇಲ್ಲದವರು ಇಲ್ಲಿ ಪ್ರಾರ್ಥಿಸಿದರೆ ವಿದ್ಯೆ ಬರುವುದು. ಹಾಗೆಯೇ ವಿವಾಹ ಆಗದವರು ಇಲ್ಲಿ ಪ್ರಾರ್ಥಿಸಿದರೆ ಬಹುಬೇಗ ವಿವಾಹವಾಗುವ ಪ್ರತೀತಿ ಇದೆ, ಇದರ ಗರ್ಭಗುಡಿಯ ಮುಖದಲ್ಲಿ 1 ¼ ಕೆಜಿ ಸೇರಿರುವ ಪಂಚಾಲೋಹ ಮುಕುಟವಿದೆ, ಋಷಿಮುನಿಗಳ ಪಾದುಕದ ವಿಶೇಷವಾಗಿ ತಾಯಿಯ ಸಾನಿಧ್ಯದಲ್ಲಿ 9 ತೆಂಗಿನಕಾಯಿ ಇಟ್ಟು ಪ್ರಾರ್ಥಿಸಿ ಋಷಿಮುನಿಗಳ ಪಾದುಕೆ ಹತ್ತಿರ ಇಟ್ಟು ಅಲ್ಲಿ ದೀಪ ಸ್ಥಂಭಕ್ಕೆ ದೀಪ ಉರಿಸಿದ ದಂಪತಿಗಳು ಅರ್ಚಕರ ಸಹಿತ ಪ್ರಾರ್ಥಿಸಿದರೆ ಮಕ್ಕಳು ಆಗುವುದೆಂದು ಪ್ರತೀತಿ ಇದೆ.

ರಣಕಂಭ : ರಣಕಂಭವು ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿದ ಸ್ಥಳ ಸುಮಾರು 40 ವರ್ಷಗಳ ಈಚೆಗೆ ಕೋಣಬಲಿ ಕೊಡುವ ಪದ್ಧತಿ ನಿಂತು ಹೋಯಿತು. ಆದರೆ ಯಾವ ಕೋನ ಬಲಿ ಬರಬೇಕೆಂಬುದು ದೇವತೆಗೆ ಇತ್ತೋ ಆ ಕೋಣ ಕಟ್ಟಿಯಿಂದ ಹಗ್ಗವನ್ನು ಕಡಿದು ಆ ರಣ ಕಂಬಕ್ಕೆ ಬಂದು ತಲೆ ಕೊಟ್ಟದ್ದು ಪ್ರತೀತಿ ಇದೆ. ಇಲ್ಲಿಗೆ ಬಂದ ಕೋಣ ಮಡಕೇರಿಗೆ ಸೇರಿರುತ್ತದೆ. ಅದರ ಇತಿಹಾಸದ ಭದ್ರತೆಗಾಗಿ 2 ಕೋಣಗಳನ್ನು ಕಟ್ಟುವ ಶಿಲಾ ಕಂಬಗಳು ಕ್ಷೇತ್ರದಲ್ಲಿ ಇವೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here