ಗೊಳೋ ಎಂದು ಅತ್ತ ನಿಖಿಲ್ ಕುಮಾರಸ್ವಾಮಿ
ರಾಜ್ಯದ ಜನತೆಗೆ ನಮ್ಮ ತಂದೆ ಒಳ್ಳೆಯದು ಮಾಡಿದ್ದಕ್ಜಾ ಈ ಸೋಲು ,ರೈತರ ಸಾಲ ಮನ್ನಾ, ಬಡ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡಿರುವುದು, ವೃದ್ದರಿಗೆ ಮಾಸಾಶನ ಏರಿಕೆ ಮಾಡಿದ್ದು ಇದೆಲ್ಲ ನಮ್ಮ ತಂದೆ ಕುಮಾರಸ್ವಾಮಿಯವರು ಮಾಡಿದ್ದು. ಇದನ್ನು ನೋಡಿಯೂ ನಮಗೆ ಓಟ್ ಹಾಕಿಲ್ಲ ಎಂದು ಕುಮಾರಸ್ವಾಮಿಯವರ ಪುತ್ರ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಜನ ಕೆ ಆರ್ ಪೇಟೆಯಲ್ಲೂ ಕೈಕೊಟ್ಟರು. ನಮ್ಮ ತಂದೆಯ ಆರೋಗ್ಯ ಸರಿ ಇಲ್ಲ. ಅವರಿಗೆ ಎರಡನೇ ಬಾರಿ ಹೃದಯ ಚಿಕಿತ್ಸೆ ಆಗಿದೆ. ಅಂತಹ ಅನಾರೋಗ್ಯದಲ್ಲೂ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ನಮ್ಮದು ಚಿಕ್ಕ ಮತ್ತು ಬಡ ಪ್ರಾದೇಶಿಕ ಪಕ್ಷ.
ನಮ್ಮ ತಂದೆ ಐದಾರು ದಿನದಿಂದ ಜ್ವರದಿಂದ ನರಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಾಗ ನಾನು ಬೇಗ ಕಾರ್ಯಕ್ರಮ ಮುಗಿಸಲು ಆಗುತ್ತಾ ಅಂತ ಕೇಳಿದೆ. ಏಕೆಂದರೆ ನನಗೆ ನನ್ನ ತಂದೆಯ ನೋಡಬೇಕು ಎಂದು ಅನ್ನಿಸಿದೆ.ಅವರಿಗೆ ಹುಷಾರಿಲ್ಲ ಎಂದು ಹೇಳಿದರು.
ಮತ್ತೆ ಮುಂದುವರೆಸಿ ನಮ್ಮ ತಂದೆ ರೈತರ ಸಾಲ ಮನ್ನಾ ಮಾಡಿದರು. ಅದು ಕೇವಲ 34 ಸೀಟು ತಗೊಂಡು. ಅಂತಹ ಉತ್ತಮ ಕೆಲಸ ಮಾಡಿದರೂ ಜನರು ಕೈ ಹಿಡಿಯಲಿಲ್ಲ. ನಾವೇನು ಅನ್ಯಾಯ ಮಾಡಿದ್ದೇವೆ. ಒಳ್ಳೆಯದು ಮಾಡಿರುವುದೇ ತಪ್ಪಾ ?
ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು ಅನರ್ಹರಿಗೆ ಜನರು ಬುದ್ದಿ ಕಲಿಸುತ್ತಾರೆ , ಪ್ರಜಾಪ್ರಭುತ್ವಕ್ಕೆ ಗೆಲುವಾಗುತ್ತದೆ ಎಂದು ನಂಬಿಕೆ ಹೊಂದಿದ್ದರು ಆದರೆ ಜನರು ನಮ್ಮನ್ನು ಕೈ ಬಿಟ್ಟರು.
ನಾನು ರಾಜಕಾರದಿಂದ ಹಿಂದೆ ಸರಿಯುವುದಿಲ್ಲ.ಈ ಸಲ ನನಗೆ ಮಂಡ್ಯ ಕ್ಷೇತ್ರದಲ್ಲಿ ನಿಲ್ಲುವ ಬಯಕೆ ಇರಲಿಲ್ಲ. ಆದರೆ ನಮ್ಮ ಪಕ್ಷದ 8 ಶಾಸಕರು ಒತ್ತಾಯ ಮಾಡಿದರು. ಅವರ ಒತ್ತಾಯದಿಂದ ಏನೂ ಅರಿಯದೇ ನಿಂತೆ. ಸೋತೆ ಎಂದು ನಾನು ತಲೆಕೆಡಿಸಿಕೊಳ್ಳುವಿದಿಲ್ಲ. ನನಗೆ ಮತ ನೀಡಿದ 6 ಲಕ್ಷ ಮಂಡ್ಯ ಜನರ ಋಣ ತೀರಿಸುತ್ತೇನೆ . ಮಂಡ್ಯ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದರು