ಅಯಪ್ಪ ಸ್ವಾಮಿ ಮಾಲೆ ಹಾಕಿ ಕಠಿಣ ವೃತ ಕೈಗೊಂಡ ಮುಸ್ಲಿಂ ಯುವಕ !

0
2595

ಕಳೆದ ತಿಂಗಳಿನಿಂದ ಅಯ್ಯಪ್ಪ ಸ್ವಾಮಿ ವ್ರತ ಆರಂಭವಾಗಿದೆ.45 ದಿನ ಕಠಿಣವಾದ ವ್ರತವನ್ನು ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಮಾಡುತ್ತಾರೆ. ಈಗಾಗಲೇ ಹಲವು ಕಡೆ ಮಂದಿರಗಳನ್ನು ಕಟ್ಟಿಕೊಂಡು, ಅಯ್ಯಪ್ಪ ಮಾಲಾ ವೃತ್ತ ದಾರಿಗಳು ರಥವನ್ನು ಆಚರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದು ವಿಶಿಷ್ಟವಾದ ಘಟನೆ ನಡೆದಿದೆ.ಅದೇನೆಂದರೆ ಮಹಾರಾಷ್ಟ್ರದ ಮುಸ್ಲಿಂ ಯುವಕನೊಬ್ಬ 45 ದಿನದ ಕಠಿಣ ವ್ರತವನ್ನು ಮಾಡಿದ್ದಾರೆ.ಮಹಾರಾಷ್ಟ್ರ ಮೂಲದ ಯುವಕನ ಹೆಸರು ಬಬ್ಲು ಅಫ್ಸರ್. ಉದ್ಯೋಗದಲ್ಲಿ ಇವರು ಕಾರಿನ ಚಾಲಕರಾಗಿದ್ದು , ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಅಯ್ಯಪ್ಪ ಮಾಲೆ ಧರಿಸುವ ಮೂಲಕ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ. ಇವರಿಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಇವರ ಕಾರಿನ ಮಾಲೀಕರೇ ಪ್ರೇರಣೆ ನೀಡಿದ್ದರಂತೆ.

ಮಾಲೀಕರ ಮಾತನ್ನು ಕೇಳಿ ಇವರು ಅಯಪ್ಪ ಸ್ವಾಮಿಯ ಮಾಲೆಯನ್ನು ಧರಿಸಿದ್ದಾರೆ. ಇವರು ಇದೇ ಮೊದಲ ಬಾರಿಗೆ ಮಾಲೆಯನ್ನು ಧರಿಸಿಕೊಂಡಿದ್ದಾರೆ. ಇವರು 41 ದಿನದ ಕಠಿಣವಾದ ವ್ರತವನ್ನು ಸಂಪೂರ್ಣವಾಗಿಸಿದ್ದಾರಂತೆ. ಇವರು ಹಿಂದೂ ಸ್ನೇಹಿತರ ಜೊತೆ ಒಳ್ಳೆ ಒಡನಾಟದಿಂದ ಇದ್ದ ಕಾರಣ. ಇವರಿಗೆ ಮಾಲೆ ಧರಿಸಲು ಪ್ರೇರಣೆ ಸಿಕ್ಕಿತಂತೆ.ಗುರು ಮಠಕಲ್ ತಾಲ್ಲೂಕಿನಲ್ಲಿ ಅಯ್ಯಪ್ಪ ಮಂದಿರದಲ್ಲಿ ಎಲ್ಲ ಮಾಲಾಧಾರಿಗಳ ಜೊತೆ ವಿಶೇಷ ಪೂಜೆ ಮೂಲಕ ಅಫ್ಸರ್ ಅಯ್ಯಪ್ಪನ ಸ್ಮರಣೆಯನ್ನು ಮಾಡುತ್ತಿದ್ದಾರೆ.ಈ ಮೂಲಕ ಅವರು ಒಂದು ಒಳ್ಳೆಯ ಭಾವೈಕ್ಯತೆ ಸಂದೇಶವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ತುಂಬಾ ಜನರಿಗೆ ಮಾದರಿಯಾಗಿದ್ದಾರೆ.

ಅಯ್ಯಪ್ಪ ಕಲಿಯುಗದ ಅವತಾರ ಪುರುಷನಾಗಿದ್ದು , ಭಕ್ತರು ಅವರ ಅಭಿ ಕಾಣದ ಈಡೇರಿಸಿಕೊಳ್ಳಲು 48 ದಿನಗಳ ಕಾಲ ವ್ರತವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ‌ಇದರಿಂದ 48 ದಿನಗಳ ಕಾಲ ನಮ್ಮ ಮನಸ್ಸು ದೃಢವಾಗಿ, ಅತ್ಮಾವಲೋಕನ ಮಾಡಿಕೊಳ್ಳುವ ಧೃಡತೆ ಉಂಟಾಗುತ್ತದೆ.
ಅಯ್ಯಪ್ಪ ಸ್ವಾಮಿ ಮಹಿಷಿಯನ್ನು ಕೊಲ್ಲಲು ಅವತಾರ ಎತ್ತಿದನು. ಮಹಿಷಿಗೆ ಎರಡು ಗಂಡುಗಳ ಸಮಾಗಮದಿಂದ ಹುಟ್ಟಿದ ಮಗುವಿನಿಂದ ಸಾವು ಇರುವ ವರ ಇತ್ತು.

ಅದಕ್ಕೆ ಹರಿಹರನ ಸಮಾಗಮದಿಂದ ಹುಟ್ಟಿದವನೆ ಅಯ್ಯಪ್ಪ. ಪಂದಳ ರಾಜನಿಗೆ ಕಾಡಿನಲ್ಲಿ ಸಿಕ್ಕಿದ ಮಗುವನ್ನು ತಂದು ಮಣಿಕಂಠ ಎಂದು ನಾಮಕರಣ ಮಾಡಿ ಸಾಕಿದನು. ಮಹಿಷಿಯನ್ನು ಕೊಂದ ಅಯ್ಯಪ್ಪ ತಮ್ಮನಿಗೆ ಪಟ್ಟಾಭಿಷೇಕ ಮಾಡಿ ಕಾಡಿಗೆ ಹೋಗುತ್ತಾನೆ. ಅಲ್ಲೇ ಅವನು ನೆಲೆಸುತ್ತಾನೆ. ಈಗ ಸುಪ್ರಿಂ ಕೋರ್ಟಿನಲ್ಲಿ ಶಬರಿಮಲೆ ಕೇಸ್ ನಡೆಯತ್ತಿದೆ.

LEAVE A REPLY

Please enter your comment!
Please enter your name here