ಕಳೆದ ಸಲ ಕರ್ನಾಟಕ ಚುನಾವಣೆಯಲ್ಲಿ ‘ನಿಖಿಲ್ ಎಲ್ಲಿದ್ದೋಯಪ್ಪ?’ ಡೈಲಾಗ್ ಸಕ್ಕತ್ ಫೇಮಸ್ ಮತ್ತು ವೈರಲ್ ಆಗಿತ್ತು. ಇದು ಯಾವ ಮಟ್ಟಿಗೆ ಕ್ರೇಜ್ ಇತ್ತೆಂದರೆ ಹೊರದೇಶಗಳಲ್ಲಿ ಕೂಡ ನಿಖಿಲ್ ಎಲ್ಲಿದ್ದೀಯಪ್ಪ ಅಂತ ಹೇಳುತ್ತಿದ್ದರು. ನಿಖಿಲ್ ಎಂಬ ಹೆಸರಿನವರಿಗಂತೂ ಅವರ ಪಾಡು ಹೇಳತೀರದು. ಅಂತಹ ಡೈಲಾಗ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮಗನಿಗೆ ನಿಖಿಲ್ ಎಲ್ಲೀದ್ದೀಯಪ್ಪ ? ಅಂತ ಒಂದು ಸಮಾರಂಭದಲ್ಲಿ ಕೇಳುತ್ತಾರೆ. ಆಗ ಜನರ ಮಧ್ಯೆ ಕಾಣಿಸಿದ ನಿಖಿಲ್ ಇಲ್ಲೇ ಇದ್ದೀನಪ್ಪ. ನಿಮ್ಮನ್ನು ಮತ್ತು ನಮ್ಮ ತಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನರ ಮಧ್ಯೆ ಇದ್ದೀನಪ್ಪ ಅಂತ ಡೈಲಾಗ್ ಹೊಡೆದಿದ್ರು. ಅದು ಎಷ್ಟರ ಮಟ್ಟಿಗೆ ಕ್ರೇಜ್ ಅಯಿತೆಂದು ನಿಮಗೆಲ್ಲಾ ಗೊತ್ತೇ ಇದೆ.
ಆ ಡೈಲಾಗ್ ಕ್ರೇಜ್ ಪರ್ಯಾಯವೇ ಇಲ್ಲವೇನೊ ? ಅದನ್ನು ಬಿಟ್ಟು ಬೇರೆ ಬರುವುದಕ್ಕೆ ಸಾಧ್ಯವಿಲ್ಲ ಅಂತ ಜನರು ತಿಳಿದುಕೊಂಡಿದ್ದರು. ಆದರೆ ಆ ರೆಕಾರ್ಡ್ ನ ಬ್ರೇಕ್ ಮಾಡಿ ಹೊಸತೊಂದು ಪದವನ್ನು ವೈರಲ್ ಮಾಡಿದವರೇ ಬೆಳಗಾವಿಯ ಒಬ್ಬ ಸಾಮಾನ್ಯ ವ್ಯಕ್ತಿ. ಆ ಪದ ಯಾವುದು ? ಅವರು ಯಾರು ಅಂತ ಹೇಳ್ತೀವಿ ಬನ್ನಿ.
ಹೌದೋ ಹುಲಿಯಾ! ಈ ಪದ ಎಷ್ಟರ ಮಟ್ಟಿಗೆ ಕ್ರೇಜ್ ಮತ್ತು ವೈರಲ್ ಆಗಿದೆ ಎಂದರೆ ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಹೌದು ಹುಲಿಯಾ ಪೇಜ್ ಗಳು ಸೃಷ್ಟಿಯಾಗಿವೆ. ಎಲ್ಲಾ ಟ್ರೋಲ್’ಗಳಲ್ಲೂ ಬಗೆಬಗೆಯ ಮೀಮ್ಸ್ ಮಾಡಿ ಹೌದೋ ಹುಲಿಯಾ ಎಂದು ಪೋಸ್ಟ್ ಆಗುತ್ತಿದೆ.
ಬೆಳಗಾವಿಯಲ್ಲಿ ಸಿದ್ದ ರಾಮಯ್ಯನವರು ಭಾಷಣ ಮಾಡುತ್ತಿದ್ದರು. ಅವರ ಅಪಾರ ಅಭಿಮಾನಿಯಾದ ವ್ಯಕ್ತಿ ಅವರು ಇಂದಿರಾ ಗಾಂಧಿ ಬಗ್ಗೆ ಮಾತನಾಡುತ್ತಿದ್ದಾಗ ಎಕ್ಸೈಟ್ ಆಗಿ ಆ ಪದ ಬಳಸುತ್ತಾರೆ. ಸಿದ್ದರಾಮಯ್ಯನವರು ಇಂದಿರಾ ಗಾಂಧಿ ಈ ದೇಶಕ್ಕೋಸ್ಕರ ಪ್ರಾಣ ತೆತ್ತರು. ಎನ್ನುವಾಗ ಅಲ್ಲೇ ಮುಂದೆ ಕೂತಿದ್ದ ವ್ಯಕ್ತಿ ‘ಹೌದು ಹುಲಿಯಾ’ ಎನ್ನುತ್ತಾರೆ. ಇದು ನ್ಯೂಸ್ ಚಾನಲ್’ಗಳಲ್ಲಿ ಬಂದು ಆ ಪದ ಸಕ್ಕತ್ ವೈರಲ್ ಆಗುತ್ತೆ. ಈ ಡೈಲಾಗ್ ಡಿಜೆಯಲ್ಲೂ ಬಳಸುಕೊಳ್ಳಲಾಗಿದೆ. ಹೌದು ಹುಲಿಯಾ ಟಿ ಶರ್ಟ್’ಗಳು ಮಾರುಕಟ್ಟೆಗೆ ಬಂದಿದೆ.
ಅಂದಹಾಗೇ ಆ ವ್ಯಕ್ತಿ ಹೆಸರು ಬಾವನ ಕೊಟ್ಟೆ. ಇವರು ಐನಾಪುರ ಸಿಟಿಯ ವ್ಯಕ್ತಿ. ಈಗ ಇವರನ್ನು ಟಿವಿ ಚಾನಲ್ ‘ಗಳು ಕೂಡ ಇಂಟರ್ ವ್ಯೂ ಮಾಡುತ್ತಿವೆ. ಈಗ ಈತ ಸೆಲೆಬ್ರಿಟಿ ಆಗಿದ್ದಾರೆ. ಒಂದು ಪದ ವ್ಯಕ್ತಿಯನ್ನು ಬದಲಿಸಿದೆಯಲ್ಲಾ ಇದು ಉತ್ತರ ಕರ್ನಾಟಕ ಭಾಷೆಯ ಸೊಗಡು ಕಣ್ರೀ.. ಮತ್ತೇಕೆ ತಡ ‘ಹೌದು ಹುಲಿಯಾ’ ಅಂತ ಕಾಮೆಂಟ್ ಮಾಡ್ರಿ .