ಸಿಹಿ ಕಹಿ ಚಂದ್ರುರವರ ಮಗಳನ್ನು ಮದುವೆಯಾದ ಈ ಖ್ಯಾತ ನಟ ಯಾರು ಗೊತ್ತಾ ?

0
2994

ಕನ್ನಡದ ಖ್ಯಾತ ನಟ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾರವರ ಮುದ್ದಿನ ಮಗಳು ಹಿತಾ ಚಂದ್ರಶೇಖರ್ ಮದುವೆ ಅದ್ದೂರಿಯಾಗಿ ನಡೆದಿದೆ. ಕನ್ನಡದ ಖ್ಯಾತ ನಾಯಕ ನಟ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಸುರದ್ರೂಪಿ ನಟ ಎಡಕಲ್ಲು ಚಂದ್ರಶೇಖರ ರವರ ಮಗ ಕಿರಣ್ ರವರೊಂದಿಗೆ ಹಿತಾರ ಮದುವೆ ನಡೆದಿದೆ.

ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಷಯವನ್ನು ನಟಿ ಸೋನು ಗೌಡ ಇನ್ಸ್ಟಾಗ್ರಾಂನಲ್ಲಿ ರಿವೀಲ್ ಮಾಡಿದ್ದರು. ಆನಂತರ ಇವರ ನಿಶ್ಚಿತಾರ್ಥ ಮೇ ತಿಂಗಳಲ್ಲಿ ನಡೆದಿತ್ತು. ಇವರಿಬ್ಬರ ಮದುವೆ ಅದ್ದೂರಿಯಾಗಿ ಮದುವೆ ನಡೆದಿದ್ದು , ನಟಿ ಕವಿತಾ ಗೌಡ , ಕೃಷಿ ತಾಪಂಡ ಸೇರಿದಂತೆ ಕಿರುತೆರೆಯ ನಟ ನಟಿಯರು ಬಂದು ಹಾರೈಸಿದ್ದಾರೆ.‌ ಹಿತಾ ಚಂದ್ರಶೇಖರ ಡಾನ್ಸಿಂಗ್ ಸ್ಟಾರ್ ವಿಜೇತೆಯಾಗಿದ್ದು ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕಾಲ್ ಕೆಜಿ ಪ್ರೀತಿ ಇವರ ಮೊದಲ ಚಿತ್ರ. ನಂತರ ಜಗ್ಗೇಶ್ ಅಭಿನಯದ ಸೂಪರ್ ಹಿಟ್ ಚಿತ್ರ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿ ಮಧುರವರ ಮಗಳಾಗಿ ಅದ್ಬುತವಾಗಿ ನಟಿಸಿದ್ದಾರೆ.

ಗೆಯೇ ಕಿರಣ್ ಶ್ರೀನಿವಾಸ್ ಹಾಗೇ ಸುಮ್ಮನೆ ಚಿತ್ರದಿಂದ ಬೆಳಕಿಗೆ ಬಂದವರು. ಪ್ರೀತಂ ಗುಬ್ಬಿ ನಿರ್ದೇಶಿಸಿದ ಈ ಚಿತ್ರ ತನ್ನ ಹಾಡುಗಳಿಂದ ಜನಪ್ರಿಯವಾಗಿತ್ತು. ಮುಂಗಾರು ಮಳೆ ಖ್ಯಾತಿಯ ಮನೊಮೂರ್ತಿ ಸಂಗೀತ ನೀಡಿದ್ದರು. ನಂತರ ಚಿರು, ಕಾಂಚನಾ ,ಮುಗಿಲ ಮಲ್ಲಿಗೆಯೋ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರಣ್ ಶ್ರೀನಿವಾಸ್ ಹೆಸರು ಅಷ್ಟಾಗಿ ಯಾರಿಗೂ ಪರಿಚಯ ಇರಲಿಲ್ಲ . ಆದರೆ ಇತ್ತೀಚೆಗೆ ಅವರ ಒಂದು ವೀಡಿಯೋ ಬಾರೀ ವೈರಲ್ ಆಗಿದೆ. ಅದರಲ್ಲಿ ಅವರು ಕಿರಿಕ್ ಕೀರ್ತಿಗೆ ಟಾಂಗ್ ಕೊಡುವ ಹಾಗೇ ಕನ್ನಯ್ಯ ಕುಮಾರ್ ಪರ ವಹಿಸಿ ಮಾತನಾಡಿದ್ದರು. ಇದು ಪರ ವಿರೋಧ ಕಾಮೆಂಟ್ ಗಳು ಬರತೊಡಗಿದವು.

ಕಿರಿಕ್ ಕೀರ್ತಿ ಮೂರು ವರ್ಷಗಳ ಹಿಂದೆ ಕನ್ನಯ್ಯ ಕುಮಾರ್ ರವರನ್ನು ತೆಗಳುವ ಒಂದು ವೀಡಿಯೋ ಹಾಕಿದ್ದರು. ಅದು ಈಗಲೂ ಫೇಸ್ಬುಕ್ ನಲ್ಲಿ ಶೇರ್ ಆಗುತ್ತಿದೆ. ಅದನ್ನು ಕಂಡು ಕೀರ್ತಿಗೆ ಕೆಲವು ಪ್ರಶ್ನೆಗಳು ಎಂದು ಒಂದು ವೀಡಿಯೋವನ್ನು ಕಿರಣ್ ಬಿಟ್ಟಿದ್ದರು. ಅದು ಕೂಡ ವೈರಲ್ ಆಗಿ ಕಿರಣ್ ಹೆಸರು ಜನಪ್ರಿಯ ಆಯಿತು. ಆದರೆ ಸೂಶಿಯಲ್ ಮೀಡಿಯಾದಲ್ಲಿ ಅಷ್ಟೇ ಟ್ರೋಲ್ ಕೂಡ ಆದರು.

LEAVE A REPLY

Please enter your comment!
Please enter your name here