7 ಎಂಬ ಸಂಖ್ಯೆಯು ಎಷ್ಟು ಅದೃಷ್ಟ ದಾಯಕ ಅಂತ ನಿಮಗೆ ಗೊತ್ತಾ..!!

0
4675

ಏಳು ಬಗೆಯ ಮೂಲ ವಸ್ತುಗಳು : ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.

ಏಳು ನಾಡಿಗಳು : ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.

ಏಳು ಜನ ಚಿರಂಜೀವಿಗಳು : ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ಕೃಪ, ಪರಶುರಾಮ, ವಿಭೀಷಣ.

ಏಳು ಜೀವನದ ಅವಸ್ಥೆಗಳು : ಅಜ್ಞಾನ, ಆವರಣ, ವಿಕ್ಷೇಪ, ಪರೋಕ್ಷಜ್ಞಾನ, ಅಪರೋಕ್ಷಜ್ಞಾನ, ಅನರ್ಥ, ನಿವೃತ್ತಿ ಮತ್ತು ಆನಂದ ಪ್ರಾಪ್ತಿ.

ಏಳು ಪಾತಾಳಗಳು : ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ ಮತ್ತು ಮಹಾತಳ.

ಏಳು ಬಣ್ಣಗಳು : ಕಪ್ಪು, ಬಿಳಿ, ಕೆಂಪು, ಹಸಿರು, ಹಳದಿ, ನೀಲ ಮತ್ತು ನೇರಳೆ.

ಏಳು ವರ್ಗಗಳು : ರಾಜ, ಮಂತ್ರಿ, ರಾಜ್ಯ, ಕೋಟೆ, ಖಜಾನೆ, ಸೈನ್ಯ ಮತ್ತು ಬಂಧುಮಿತ್ರರ ಸಾಮರ್ಥ್ಯ.

ಏಳು ಕಾಡುಗಳು : ಅದಿತಿ, ಕಾಮ್ಯಕ, ವ್ಯಾಸ, ಫಲ್ಕೀ, ಸೂರ್ಯ, ಚಂದ್ರ ಮತ್ತು ಸೀತಾ.

ಏಳು ಪರ್ವತಗಳು : ಹಿಮವಂತ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರ, ಗಂಧಮಾಧನ ಮತ್ತು ಹೇಮಕೂಟ.

ಏಳು ನದಿಗಳು : ಕಾವೇರಿ, ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಮತ್ತು ಸಿಂಧು.

ಏಳು ಸಮುದ್ರಗಳು : ಲವಣ, ಇಕ್ಷು, ಸುರಾ, ಸರ್ಪಿಸ್, ದಧಿ, ಕ್ಷೀರ ಮತ್ತು ಶುದ್ದೋದಕ.

ಏಳು ಸ್ವರಗಳು : ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ದೈವತ ಮತ್ತು ನಿಷಾದ.

ಏಳು ದ್ವೀಪಗಳು : ಜಂಬೂ, ಪ್ಲಕ್ಷ, ಪುಷ್ಕರ, ಕ್ರೌಂಚ, ಶಾಕ, ಶಾಲ್ಮಲ ಮತ್ತು ಕುಶದ್ವೀಪ.

ಏಳು ಬಗೆಯ ಗುಣಗಳು : ಧೈರ್ಯ, ಸೈರಣೆ, ಮನೋನಿಗ್ರಹ, ಶುಭ್ರತೆ, ಅನುಕಂಪ, ಮೃದುಮಾತು ಮತ್ತು ಅಹಿಂಸೆ.

ಏಳು ನಿರ್ವಹಣ ಕೆಲಸಗಳು : ಕಲಿತನ, ಚತುರತೆ, ಧೈರ್ಯ, ವ್ಯವಹಾರ ಕುಶಲತೆ, ಧೀಮಂತಿಕೆ, ಉದಾರ ಮನ ಮತ್ತು ಅಧಿಕಾರ ನಿರ್ವಹಣೆ.

ಏಳು ವಿಧದ ವಿಕಾರಗಳು : ಹಗಲಿನಚಂದ್ರ, ಪ್ರಾಯವಿಲ್ಲದಹೆಣ್ಣು, ತಾವರೆಯಿಲ್ಲದಕೊಳ, ವಿದ್ಯೆಯಿಲ್ಲದವರು, ದುರಾಸೆಯರಾಜ, ಧರ್ಮಿಷ್ಠನಾದಬಡವ ಮತ್ತು ಕ್ರೂರಸೇವಕ.

ಏಳು ದೋಷಗಳು : ಸೋಮಾರಿತನ, ದುರಹಂಕಾರ, ಅಜ್ಞಾನ, ಸ್ವೇಚ್ಚಾಚಾರ, ಗರ್ವ,ದುರಭಿಮಾನ ಮತ್ತು ಸ್ವಾರ್ಥಪರತೆ.

ಏಳು ದುರಾಚಾರಗಳು : ಶಿಕಾರಿ, ಜೂಜು, ಲಂಪಟತನ, ಕುಡಿತ, ದುಂದುವೆಚ್ಚ, ಒರಟುನುಡಿ ಮತ್ತು ಕಠೋರತನ/ಕ್ರೂರತೆ.

ಏಳು ವಿಶ್ವದ ಅದ್ಭುತಗಳು : ಚೀನಾದ ಗೋಡೆ, ತಾಜ್ಮಹಲ್, ಗೀಜಾದ ಪಿರಮಿಡ್, ಪೀಸಾದ ವಾಲುಗೋಪುರ, ನ್ಯೂಯಾರ್ಕನ ಲಿಬರ್ಟಿಪ್ರತಿಮೆ, ರೋಂನ ಬಯಲುಸಭಾಂಗಣ ಮತ್ತು ಬ್ರೆಜಿಲ್ ಡಿ ಜನೈರೊದ ಏಸುಕ್ರಿಸ್ತ ಪ್ರತಿಮೆ.

ಸಪ್ತ ಮಾತೃಕೆಯರು : ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡ.

ಸಪ್ತ ಕುದುರೆಗಳು : ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್.

ಸಪ್ತ ಋಷಿಗಳು : ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ , ಅತ್ರಿ, ವಸಿಷ್ಠ, ಕಶ್ಯಪ.

ಸಪ್ತಪುರಿಗಳು : ಅಯೋಧ್ಯಾ, ಮಥುರಾ, ಕಾಶಿ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ).

ಸಪ್ತಸ್ವರ : ಸ, ರಿ, ಗ, ಮ, ಪ, ದ, ನಿ.

LEAVE A REPLY

Please enter your comment!
Please enter your name here