ಮೋದಿ ಮೇಕಪ್’ಗೆ ಕೇಂದ್ರ ಸರಕಾರ ಒಂದು ತಿಂಗಳಿಗೆ ಎಷ್ಟು ಖರ್ಚು ಮಾಡುತ್ತೆ ಗೊತ್ತಾ ?!

0
13779

ಭಾರತದ ಪ್ರಧಾನಿ ನರೇಂದ್ರ ಮೋದಿಯೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೆ ಗೊತ್ತು. ಯುವಕರ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ನಂತರ ಬಿಜೆಪಿಗೆ ಸೇರಿ ಗುಜರಾತ್ನ ಮುಖ್ಯಮಂತ್ರಿಯಾದರು. ಪ್ರಸ್ತುತ ಇವರು ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಕಡೆ ಮೋದಿಯವರ ಕಾರ್ಯಕ್ಷಮತೆಗೆ ಬಿಜೆಪಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಮತ್ತೊಂದು ಕಡೆ ಮೋದಿಯವರ ಯೋಜನೆಯನ್ನು ವಿಫಲ ಎಂದು ಕಾಂಗ್ರೆಸ್ ಹಾಗೂ ಇತರ ಎಡಪಂಥೀಯ ಹಾಗೂ ಬೆಂಬಲಿಗರು ದೂಷಿಸುತ್ತಿದ್ದಾರೆ.

ಈ ನಡುವೆ ಮೋದಿಯವರ ಬಗ್ಗೆ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯುವುದು ಸಾಮಾನ್ಯವಾಗಿದೆ. ಈ ಬಗ್ಗೆ ಮೋದಿ ಅವರಾಗಲಿ ಅಥವಾ ಭಾರತ ಜನತಾ ಪಕ್ಷದ ನಾಯಕರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಇದ್ದಾರೆ. ನರೇಂದ್ರ ಮೋದಿಯವರ ಹಳೆಯ ವೀಡಿಯೋ ಒಂದು ಈಗ ವೈರಲ್ ಆಗಿತ್ತು, ಈ ವಿಡಿಯೋ ಜೊತೆ ಒಂದು ಸುಳ್ಳು ಸುದ್ದಿ ಕೂಡ ವೈರಲ್ ಆಗಿತ್ತು.ಅದೇನೆಂದು‌ ನೋಡೋಣ.

ಫೇಸ್ಬುಕ್’ನಲ್ಲಿ ಲುಕ್ಮಾನ್ ರಮೀಜ್ ಎಂಬ ಮೋದಿ ವಿರೋಧಿ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಶೇರ್ ಮಾಡಿದ್ದಾನೆ. ಅದರಲ್ಲಿ ಪ್ರತಿ ತಿಂಗಳು ಮೋದಿಯ ಮೇಕಪ್ ಕಲಾವಿದನಿಗಾಗಿ 80 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಆರ್‌ಟಿಐ ಮೂಲಕ ತಿಳಿದುಬಂದಿದೆ ಎಂದು ಸುಳ್ಳು ಮಾಹಿತಿ ಬರೆದಿದ್ದ.ಇದನ್ನೆ ನಿಜ ಎಂದು ನಂಬಿಕೊಂಡ ಕಾಂಗ್ರೇಸ್ ಬೆಂಬಲಿಗರು ಶೆರ್ ಮಾಡಿ ಪ್ರಧಾನಿಯವರ ಬಗ್ಗೆ‌ ಸುಳ್ಳು ಮಾಹಿತಿ ವೈರಲ್ ಮಾಡಿಸಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದರು.

ನಂತರ ನಿಜವಾಗಿ ಆರ್‌ಟಿಐ ಮೂಲಕ ತಿಳಿದು ಬಂದಿದ್ದು ಏನೆಂದರೆ,ವಿಡಿಯೊ ನರೇಂದ್ರ ಮೋದಿಯವರಿಗೆ ಮೇಕಪ್ ಮಾಡುವ ವಿಡಿಯೊ ಆಗಿರಲಿಲ್ಲ.ಸತ್ಯ ಏನೆಂದರೆ ಮೋದಿ ಅವರು ಮೇಕಪ್’ಗಾಗಿ 80 ಲಕ್ಷ ರೂ. ವ್ಯಯಿಸುತ್ತಾರೆ ಎಂಬುದು ಶುದ್ಧ ಸುಳ್ಳು. ವೈರಲ್ ಮಾಡಲು ಶೇರ್ ಮಾಡಲಾದ ವೀಡಿಯೊ 2016ರದ್ದು. ಮಾಡಮ್ ಟುಸ್ಸಾಡ್ಸ್ ಮೇಣದ ಮ್ಯೂಸಿಯಂನಲ್ಲಿ ನರೇಂದ್ರ ಮೋದಿಯವರ ಅದ್ಭುತವಾದ ಮೇಣದ ಪ್ರತಿಮೆ ರಚನೆಗಾಗಿ ಅಳತೆ ತೆಗೆಯುತ್ತಿದ್ದ ಸಂದರ್ಭದ ವೀಡಿಯೊ ಅದಾಗಿತ್ತು.ಈ ತರಹ ಅಳತೆಯ ಮೂಲಕ ನೈಜ್ಯ ಪ್ರತಿಮೆ ತಯಾರಿಸಲು ಆಗುತ್ತದೆ ಎನ್ನುವುದು ಮಾಡಮ್ ಟುಸ್ಸಾಡ್ಸ್ ಮ್ಯೂಸಿಯಂರವರ ಮಾತು.ಆದುದರಿಂದ ಈ‌ ತರಹ ಅಳತೆ‌ ಮಾಡಿ ಫೋಟೊ ತೆಗೆಯುವುದು ಅನಿವಾರ್ಯವಾಗಿತ್ತು.

LEAVE A REPLY

Please enter your comment!
Please enter your name here