ರಚಿತಾರಾಮ್ ಅಕ್ಕನಿಗೆ ಕೊಟ್ಟ ಗಿಪ್ಟ್ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡ ಮಧುಮಗ

0
3810

ರಚಿತಾರಾಮ್ ಅವರ ಅಕ್ಕ ಜನಪ್ರಿಯ ಟಿವಿ ಧಾರಾವಾಹಿ ನಟಿ ನಿತ್ಯಾರಾಮ್ ಮದುವೆ ಆಸ್ಟ್ರೇಲಿಯಾದ ಬಿಜಿನೆಸ್ ಮ್ಯಾನ್ ಗೌತಮ್ ಜೊತೆಗೆ ಅದ್ದೂರಿಯಾಗಿ ನಡೆಯಿತು. ಈ ಮದುವೆಗೆ ಸಾಕ್ಷಿಯಾಗಿ ಸಾಕಷ್ಟು ಜನ ಟಿವಿ ನಟ ನಟಿಯರು, ಅಭಿಮಾನಿಗಳು, ಹಾಗೂ ಸ್ನೇಹಿತರು ಆಗಮಿಸಿದ್ದರು.

ನಿತ್ಯಾರಾಮ್ ಮತ್ತು ಗೌತಮ್ ಲವ್ ಮ್ಯಾರೇಜ್ ಅಲ್ಲ ಅದು ಆರೇಂಜ್ ಮ್ಯಾರೇಜ್. ಅಷ್ಟೇ ಯಾಕೆ ಗೌತಮ್’ಗೆ ನ ನಿತ್ಯಾ ಟಿವಿ ಧಾರಾವಾಹಿ ನಟಿ ಎಂಬುದೇ ಗೊತ್ತಿರಲಿಲ್ಲವಂತೆ ! ನಿತ್ಯಾ ಅಮ್ಮ ಮತ್ತು ಗೌತಮ್ ಅಮ್ಮ ಇಬ್ಬರೂ ಕ್ಲೋಸ್ ಫ್ರೆಂಡ್ ಅಂತೆ. ಇಬ್ಬರೂ ಸ್ನೇಹಿತರಾಗಿದ್ದು , ಸ್ನೇಹ ಬಂಧವಾಗಿದೆ.

ಗೌತಮ್ ಕೂಡ ಆಸ್ಟ್ರೇಲಿಯಾದಲ್ಲಿ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದು ಉತ್ತಮ ಗುಣವುಳ್ಳವನಾಗಿದ್ದಾನೆ. ನಿತ್ಯಾ ರಾಮ್ ಕೂಡ ಉತ್ತಮ ಕಲಾವಿದೆ ಆಗಿದ್ದು ನಂದಿನಿ, ಕರ್ಪೂರದ ಗೊಂಬೆ, ಎರಡು ಕನಸು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂದಿನಿ ಧಾರಾವಾಹಿ ಆಕೆಗೆ ದಕ್ಷಿಣ ಭಾರತದಲ್ಲಿ ಭಾರೀ ಹೆಸರು ತಂದುಕೊಟ್ಟಿತು. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ನಿತ್ಯಾ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗುತ್ತಾರಂತೆ.

ಈಗ ಮದುವೆಯ ಸಂತಸದಲ್ಲಿರುವ ನಿತ್ಯಾರಾಮ್’ಗೆ ಅವರ ತಂಗಿ ರಚಿರಾಮ್’ನಿಂದ ದೊಡ್ಡ ಗಿಪ್ಟ್ ಬಂದಿದೆ. ಅದು ಏನು ಗೊತ್ತೇ ? ಬೆಲೆಬಾಳುವ ಕಾರು. ಇತ್ತೀಚೆಗೆ ರಚಿತಾ ರಾಮ್ ಎರಡು ಕೋಟಿ ಕೊಟ್ಟು ಕಾರನ್ನು ಖರೀದಿಸಿದ್ದರು. ಅದನ್ನು ನೋಡಿ ಅವರ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದರು. ಈಗ ಆ ಕಾರು ಯಾಕೆ ತಗೊಂಡರು ಅಂತ ಗೊತ್ತಾಗಿದೆ.

ತನ್ನ ಪ್ರೀತಿಯ ಅಕ್ಕನಿಗೆ ಗಿಪ್ಟ್ ಆಗಿ ಬೆಲೆಬಾಳುವ ಕಾರನ್ನು ಕೊಟ್ಟಿದ್ದಾರೆ. ಇದನ್ನು ಕಂಡು ನಿತ್ಯಾರಾಮ್ ಮತ್ತು ಗೌತಮ್ ಕಣ್ಣಲ್ಲಿ ಆನಂದಬಾಷ್ಪ ತುಂಬಿ ಬಂದಿದೆ. ಗೌತಮ್’ಗೆ ಈ ಅಕ್ಕ ತಂಗಿಯ ಬಾಂಧವ್ಯ ಕಂಡು ಬಹಳ ಖುಷಿಯಾಗಿದೆ. ಮೂಲತಃ ಕನ್ನಡದವರೇ ಆದರೂ ಹೆಚ್ಚು ಸಮಯ ಆಸ್ಟ್ರೇಲಿಯಾದಲ್ಲಿ ಇದ್ದುದರಿಂದ ಈ ದೇಶದ ಸಂಸ್ಕೃತಿ, ಫ್ಯಾಮಿಲಿ ಸೆಂಟಿಮೆಂಟ್ ಕಂಡು ಬಹಳ ಖುಷಿಯಿಂದ ಅತ್ತಿದ್ದಾರೆ.

ರಚಿತಾರಾಮ್ ಈಗ ಆಯುಷ್ಮಾನ್ ಭವ ಚಿತ್ರದ ನಂತರ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಆಯುಷ್ಮಾನ್ ಭವ ಆಕೆಗೆ ಹೆಸರು ತಂದುಕೊಟ್ಟಿತ್ತಾದರೂ ಅದು ಥಿಯೇಟರ್’ಗಳಲ್ಲಿ ಹೆಚ್ಚು ದಿನ ಓಡಲಿಲ್ಲ.

LEAVE A REPLY

Please enter your comment!
Please enter your name here