ಮನೆಯ ಗೃಹ ಪ್ರವೇಶದ ವೇಳೆ ಗೋವಿನಿಂದ ಹೊಸ್ತಿಲು ದಾಟಿಸುವುದು ಏಕೆ ಗೊತ್ತಾ..?

0
2409

ಸಿಟಿಗಳಲ್ಲಿ ಅಷ್ಟಾಗಿ ಈ ರೀತಿಯಾ ಆಚರಣೆ ಮಾಡದೇ ಇದ್ದರೂ ಆದರೆ ಹಳ್ಳಿಗಳಲ್ಲಿ ಮಾತ್ರ ತಪ್ಪದೆ ಈ ಆಚರಣೆ ನಡೆಯುತ್ತದೆ, ಹೊಸ ಮನೆಯನ್ನು ಕಟ್ಟಿದಾಗ, ಪೂಜೆ-ಪುನಸ್ಕಾರ ಹೋಮ-ಹವನ ಗಳನ್ನು ಹಮ್ಮಿಕೊಳ್ಳುತ್ತೇವೆ, ಹಾಗೂ ಮನೆಯ ಹೊಸಿಲನ್ನು ಪ್ರಥಮ ಬಾರಿಗೆ ಗೋವ್ ಅನುಕರಿಸಿ ಹೊಸ್ತಿಲನ್ನು ದಾಟಿಸಿ, ಭಕ್ತಿಯಿಂದ ಗೋವನ್ನು ಪೂಜಿಸುತ್ತೇವೆ, ಈ ಆಚರಣೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದು, ಪ್ರಸ್ತುತ ಕೂಡ ಆಚರಣೆಯಲ್ಲಿದೆ.

ಇಂದು ಗೃಹಪ್ರವೇಶ ಕಾರ್ಯಕ್ರಮ ವಿಟ್ಟು ಕೊಳ್ಳುವಾಗ ಗೋವನ್ನು ಆಮಂತ್ರಿಸಿ ಹೊಸ್ತಿಲು ದಾಟಿ ಸುವುದು ಏಕೆ ಎಂಬುದರ ಬಗ್ಗೆ ತಿಳಿಸುತ್ತೇವೆ, ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕದ ವಿವರಗಳ ಸಹಿತ ನಮ್ಮನ್ನು ಸಂಪರ್ಕಿಸಬಹುದು.

ಗೋವು ಕಾಮಧೇನುವಿನ ಸಂತತಿ ಆಗಿರುವುದಕ್ಕೆ ತ್ರಿಮೂರ್ತಿಗಳಾದಿಯಾಗಿ ಸಕಲ ದೇವತೆಗಳು ಈ ಆಕಲಿನ ಹೃದಯದೊಳಗೆ ನೆಲೆ ಯಾಗಿರುತ್ತಾರೆ, ಶ್ರೀ ಕೃಷ್ಣನ ಬಾಲ್ಯದಲ್ಲಿ ಗೋವುಗಳನ್ನು ಕಾಯುವ ಕಾಯಕ ಮಾಡಿ ಗೋಪಾಲ ಎನಿಸಿಕೊಂಡನು, ದೈವಾಂಶ ಸಂಭೂತವಾಗಿರುವ ಇದು ಸಂಭಾವಿತ ಪ್ರಾಣಿ.

ಸಾಕಿ ಸಲಹಿದವರಿಗೆ ಪ್ರತಿ ಉಪಕಾರವನ್ನು ಕೊಡುವುದಲ್ಲದೇ, ಏಳಿಗೆಯ ಸಂಕೇತ ಎಂದು ಬಿರುದನ್ನು ಸಹ ಪಡೆದಿದೆ, ಆದ್ದರಿಂದ ಮೂಕವಾಗಿ ಇದ್ದರೂ ಮಹಿಮೆ ತೋರುವ ಮಾನವ ಕುಲದೊಂದಿಗೆ ಬೆರೆತು ಬಾಳುವ ಆಕಳನ್ನು ಮನೆಯೊಳಗೆ ಕರೆತರುವುದು ಭಾಗ್ಯವಲ್ಲದೆ ಮತ್ತೆ ಏನು.?

ಆತ್ಮೀಯ ಬಂಧುಗಳೇ ತಾವು ಧರಣಿ ಮಂಡಲ ಮಧ್ಯದೊಳಗೆ ಎಂಬ ಶೀರ್ಷಿಕೆಯ ಜನಪದ ಹಾಡನ್ನು ಓದಿದರೆ, ಪುಣ್ಯಕೋಟಿಯ ನಿಷ್ಠೆಯೂ ಅರ್ಥವಾಗುತ್ತದೆ, ಶಿವಶರಣೆ ಅಕ್ಕಮಹಾದೇವಿ ಆಕಳನ್ನು ಅಕ್ಕರೆಯಿಂದ ಪೋಷಿಸಿ ಬೆಳೆಸಿದ್ದಲೆಂಬ ವಿಷಯವನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗಿದೆ.

ಇಂತಹ ಗೋವನ್ನು ಗೃಹದಲ್ಲಿ ಕರೆ ತರುವುದರಿಂದ ವಾಸವಾಗಿರುವ ದುಷ್ಟ ಗ್ರಹಗಳು ಬಸ್ಮಿ ದೂರವಾಗುವುದು, ಆಗ ಮನೆಗೆ ಪರಿಶುದ್ಧ ಪರಮ ಪವಿತ್ರ ವಾಗುವುದು, ಆಕಳು ತನಗೆ ಕೊಟ್ಟ ತಿಂಡಿ ತಿನಿಸುಗಳನ್ನು ತಿಂದು, ಗಂಜಲವನ್ನು ಹೊಯ್ದರಂತು ಮನೆ ಉದ್ಧಾರವಾದ ಅಂತೆಯೇ, ಅದನ್ನು ಸಂಗ್ರಹಿಸಿ ಆವರಣದ ಸುತ್ತಲೂ ಎರಚಿ ತಲೆಯ ಮೇಲೆ ಪ್ರೋಕ್ಷಿಸಿ ಕೊಂಡರೆ ಜನ್ಮವೇ ಪಾವನ ವಾಗುವುದು.

LEAVE A REPLY

Please enter your comment!
Please enter your name here