ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ಯು ಮನೆ ಮದ್ದಿನ ಪ್ರಮುಖ ಪದಾರ್ಥ ಎಂದರೆ ತಪ್ಪಾಗುವುದಿಲ್ಲ, ಆಹಾರದಲ್ಲಿ ಜೀರಿಗೆಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ ಕಾರಣ ಜೀರಿಗೆ ಉಷ್ಣವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಜೀರಿಗೆ ಇನ್ನೂ ಅನೇಕ ಆರೋಗ್ಯ ಲಾಭಗಳನ್ನು ನಮಗೆ ನೀಡುತ್ತವೆ, ಇದು ನಿಮಗೆ ಆಶ್ಚರ್ಯವಾಗುವಂತಹ ಅತ್ಯದ್ಭುತ ಜೀರಿಗೆಯ ಮನೆಮದ್ದಿನ ಆರೋಗ್ಯ ಲಾಭಗಳ ಬಗ್ಗೆ ತಿಳಿಸುತ್ತೇವೆ.
ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡುಗೆ ಉಪ್ಪು, ಇವುಗಳನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಅರ್ಧ ಬಟ್ಟಲು ಬಿಸಿನೀರಿಗೆ ಹಾಕಿ ಒಂದು ಹೋಳು ನಿಂಬೆ ಹಣ್ಣನ್ನು ಅದಕ್ಕೆ ಹಿಂಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುವುದು.
ಚೆನ್ನಾಗಿ ಪಕ್ವವಾದ ಅರಳೆ ಹಣ್ಣನ್ನು ಎರಡು ಹೋಳು ಮಾಡಿ ಅದಕ್ಕೆ ಜೀರಿಗೆ ಪುಡಿಯನ್ನು ತುಂಬಿ ಒಂದು ರಾತ್ರಿ ಅದನ್ನು ಇಬ್ಬನಿ ಬೀಳುವ ಸ್ಥಳದಲ್ಲಿ ಇಟ್ಟು ಮಾರನೇ ದಿನ ಬರಿಹೊಟ್ಟೆಯಲ್ಲಿ ಅದರ ರಸವನ್ನು ಹಿಂಡಿ ಕುಡಿದರೆ ಪಿತ್ತ ಶಾಂತಿಯಾಗುತ್ತದೆ, ಇದೇ ಹಣ್ಣಿನ ರಸವನ್ನು 15 ದಿನಗಳ ವರೆಗೆ ಸೇವಿಸಿದರೆ ಅರಿಶಿನ ಕಾಮಾಲೆ ರೋಗವು ಗುಣವಾಗುವುದು.
ಅರ್ಧ ಬಟ್ಟಲು ತಣ್ಣನೆಯ ಸಿಹಿ ನೀರಿಗೆ ಒಂದು ಹೋಳು ನಿಂಬೆ ಹಣ್ಣನ್ನು ಹಿಂಡಿ ಒಂದು ಟೀ ಚಮಚ ಜೀರಿಗೆ ಮತ್ತು ಒಂದೆರಡು ಏಲಕ್ಕಿಯನ್ನು ಬಿಡಿಸಿ ನುಣ್ಣಗೆ ಪುಡಿಮಾಡಿ ನಿಂಬೆ ರಸದ ಜೊತೆ ಚೆನ್ನಾಗಿ ಬೆರೆಸಿ ದಿನಕ್ಕೆ ಮೂರು ಅಥವಾ ನಾಲ್ಕು ಸಾರಿ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿಯಾಗುವುದು ಕಡಿಮೆಯಾಗುತ್ತದೆ.
ಒಂದು ಚೂರು ಒಣಶುಂಠಿ ಮತ್ತು ಒಂದು ಟೀ ಚಮಚ ಜೀರಿಗೆಯನ್ನು ಕುಟ್ಟಿ ಪುಡಿಮಾಡಿ, ಒಂದು ದೊಡ್ಡ ಲೋಟ ಸಿಹಿ ನೀರಿಗೆ ಅದನ್ನು ಬೆರೆಸಿ ಕುದಿಸಬೇಕು, ನಂತರ ಶೋಧಿಸಿ ಕುಡಿದರೆ ಅಜೀರ್ಣತೆ ದೂರವಾಗುತ್ತದೆ.
ಒಂದು ಚೂರು ಹಸಿ ಶುಂಠಿ ಸ್ವಲ್ಪ ಜೀರಿಗೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಚಪ್ಪರಿಸಿದರೆ ನಾಲಿಗೆಗೆ ರುಚಿ ಅಧಿಕ ವಾಗುವುದು, ಮತ್ತು ಆಹಾರ ಬಹು ಚೆನ್ನಾಗಿ ಜೀರ್ಣವಾಗುವುದು.
ಪರಂಗಿ ಕಾಯಿಯನ್ನು ಸಣ್ಣಗೆ ಹೋಳುಮಾಡಿ ಈ ಹುಳುಗಳಿಗೆ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಅಡುಗೆ ಉಪ್ಪು ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸುವುದರಿಂದ ಮಲಬದ್ಧತೆಯು ನಿವಾರಣೆಯಾಗುವುದು, ಜಂತುಹುಳುಗಳು ನಾಶವಾಗುವುದು ಮತ್ತು ಪಚನ ಶಕ್ತಿ ಅಧಿಕವಾಗುವುದು.
ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ಸಮ ಪ್ರಮಾಣದಲ್ಲಿ ಪುಡಿ ಮಾಡಿ ಈ ಮಿಶ್ರಣವನ್ನು ನಾಲ್ಕೈದು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಕಿವುಚಿ ಶೋಧಿಸಿದರೆ ಕಷಾಯ ಸಿದ್ಧವಾಗುವುದು, ಈ ಕಷಾಯಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ನೀರಿನಂತೆ ಭೇದಿಯಾಗುವುದು ನಿಲ್ಲುತ್ತದೆ ಮತ್ತು ಮಲವು ದುರ್ನಾತದಿಂದ ಕೂಡಿದ್ದರೆ ದುರ್ವಾಸನೆ ಕಡಿಮೆಯಾಗುತ್ತದೆ.
ಒಂದು ಚಮಚ ಹುಣಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ಕದಡಿ ಜೇನುತುಪ್ಪದೊಂದಿಗೆ ಸೇವಿಸಿದರೆ ಆಮಶಂಕೆ ಗುಣವಾಗುತ್ತದೆ, ಅರಿಶಿನ ಕಾಮಾಲೆಯು ಸಹ ನಿವಾರಣೆಯಾಗುತ್ತದೆ.
ಒಂದು ಕಪ್ಪು ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತ ದೋಷಗಳು ದೂರವಾಗುತ್ತದೆ.
ಜೀರಿಗೆ, ಬೆಲ್ಲ ಮತ್ತು ಹುಣಸೆಹಣ್ಣನ್ನು ಸಮತೂಕದಲ್ಲಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಉಂಡೆ ಮಾಡಿ ಗಜ್ಜುಗದ ಗಾತ್ರದ ಉಂಡೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ಚಪ್ಪರಿಸಿ ನುಂಗುತ್ತಿದ್ದರೆ ಪಿತ್ತ ದೋಷಗಳು ದೂರವಾಗುತ್ತದೆ.