ಕೆಮ್ಮು ನೆಗಡಿ ಜಾಸ್ತಿ ಇದ್ರೆ ಹೀಗೆ ಮಾಡಿದ್ರೆ ನಿಮ್ಮ ಹತ್ರ ಕೂಡ ಬರಲ್ಲ..!!

0
4771

ಶುಂಠಿಯ ಕಷಾಯಕ್ಕೆ ಸ್ವಲ್ಪ ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಸೇವಿಸಿದರೆ ನೆಗಡಿ ಕಡಿಮೆಯಾಗುತ್ತದೆ.

ಮೊಸರಿನ ಜೊತೆಗೆ ಬೆಲ್ಲವನ್ನು ಬೆರಸಿ ಮತ್ತು ಕರಿಮೆಣಸಿನ ಪುಡಿ ಸ್ವಲ್ಪ ಬೆರಸಿ ಕುಡಿದರೆ ನೆಗಡಿ ಮತ್ತು ಕೆಮ್ಮು ಎರಡು ಒಂದೇ ಸಲ ಕಡಿಮೆಯಾಗುತ್ತದೆ.

ಅನಾನಸ್ ಹಣ್ಣಿನ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಬೆರಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ತಾಜಾ ಪುದಿನ ಸೊಪ್ಪಿನ ಚಹ ತಯಾರಿಸಿ ಒಂದೆರಡು ಬಾರಿ ಕುಡಿದರೆ ನೆಗಡಿ ನಿಲ್ಲುವುದು.

ಕೆಮ್ಮು ಕಾಣಿಸಿಕೊಂಡಾಗ 10 ಕರಿಮೆಣಸಿನಕಾಳು, 5 ಲವಂಗ ಮತ್ತು ಒಂದು ಚಿಟಿಕೆ ಉಪ್ಪು ಇವುಗಳನ್ನು ಅಗಿದು ರಸವನ್ನು ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಒಂದು ಲೋಟ ಹಾಲಿಗೆ ಅರ್ಧ ಚಮಚ ಶುದ್ದವಾದ ಅರಿಶಿನ ಪುಡಿ ಮತ್ತು 20-30 ಕಾಳುಮೆಣಸಿನ ಪುಡಿ ಬೆರಸಿದ ಹಾಲನ್ನು ಕಾಯಿಸಿ ಬಿಸಿ ಇರುವಾಗಲೆ ಹಾಲನ್ನು ಒಂದೆರಡು ದಿನದವರೆಗೆ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.

ಚೂರು ಒಣಶುಂಠಿಗೆ ಅಷ್ಷೇ ಗಾತ್ರದ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ 3-4 ಬಾರಿಯಂತೆ 2-3 ದಿನ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ನೆಗಡಿಯಾಗಿ ಗಂಟಲು ಕಟ್ಟಿದಾಗ 2 ಬೆಳ್ಳುಳ್ಳಿ ಎಳಸಿನೊಡನೆ ಸ್ವಲ್ಪ ಬೆಲ್ಲ ಸೇರಿಸಿ ಅಗಿದು ಸ್ವಲ್ಪ ಸ್ವಲ್ಪ ರಸ ಕುಡಿಯುವುದರಿಂದ ಉತ್ತಮ ಫಲಿತಾಂಶ ಕಂಡುಬರುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here