ಈ ಫೋಟೋಗ್ರಾಫರ್ ಕಥೆ ಒಮ್ಮೆ ಓದಿ ನೋಡಿ. ಮಜಾ ಇದೆ.

0
1975

ಸ್ಕೂಲ್ ಹೆಡ್ಮಾಸ್ಟರೊಬ್ಬರು ಪೋಟೋಗ್ರಾಫರನ್ನು ತನ್ನ ಚೇಂಬರಿಗೆ ಕರೆಯಿಸಿಕೊಂಡು “ಮಕ್ಕಳ ಪೋಟೋ ಸೆಷನ್ ಗೆ ಎಷ್ಟು ರುಪಾರಿ ಖರ್ಚಾಗುತ್ತದೆ? ಎಂದು ಕೇಳಿದರು. ಇದಕ್ಕೆ ಪೋಟೋ ಗ್ರಾಫರ್ ಹೀಗೆ ಉತ್ತರಿಸಿದ : ಒಬ್ಬ ವಿದ್ಯಾರ್ಥಿಗೆ 40 ರುಪಾಯಿಯಂತೆ ನೀಡಲು ತಿಳಿಸಿದ.
ಹೆಡ್ಮಾಸ್ಟರ್ ಮತ್ತೆ ಕೇಳಿದರು : ತಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳು ಬಡವರಾಗಿದ್ದು, 20 ರುಪಾಯಿಂತೆ ನೀಡುವುದಾಗಿ ತಿಳಿಸಿದ. ಪೋಟೋಗ್ರಾಫರ್ ಇದಕ್ಕೆ ಒಪ್ಪಿಕೊಂಡ.

ಹೆಡ್ಮಾಸ್ಟರ್ ಕ್ಲಾಸ್ ಟೀಚರ್ ಗಳನ್ನು ಕರೆದು, ವಿದ್ಯಾರ್ಥಿಗಳ ಪೋಟೋ ಸೆಷನ್ ಗೆ ಪ್ರತೀಯೊಬ್ಬರಿಂದ 40 ರುಪಾಯಿಯಂತೆ ಸಂಗ್ರಹಿಸಲು ಹೇಳಿದರು. ಇದಕ್ಕೆ ಕ್ಲಾಸ್ ಟೀಚರ್ಸ್ ಏನು ಮಾಡಿದರು ಗೊತ್ತಾ ಸ್ನೇಹಿತರೇ : ಎಲ್ಲಾ ವಿದ್ಯಾರ್ಥಿಗಳಲ್ಲಿ 50 ರುಪಾಯಿಯಂತೆ ತರಲು ತಿಳಿಸಿದರು. ವಿದ್ಯಾರ್ಥಿಗಳು ಮನೆಗೆ ಬಂದು ಅಮ್ಮನೊಂದಿಗೆ, ಶಾಲೆಯಲ್ಲಿ ನಡೆಯುವ ಪೋಟೋ ಸೆಷನ್ ಗೆ ನೂರು ರುಪಾಯಿ ನೀಡುವಂತೆ ಕೇಳಿಕೊಂಡರು.

ಅಮ್ಮ “ಇದು ತುಂಬಾ ಜಾಸ್ತಿಯಾಯಿತು. ನಾನು ಅಪ್ಪನನ್ನು ಕೇಳಿ ನೋಡುತ್ತೇನೆ” ಎಂದಳು. ರಾತ್ರಿ ಮನೆಗೆ ಬಂದ ಅಪ್ಪನಲ್ಲಿ,”ಶಾಲೆಯಲ್ಲಿ ನಡೆಯುವ ಪೋಟೋ ಸೆಷನ್ ಗೆ ಮಕ್ಕಳಿಗೆ ಇನ್ನೂರು ರುಪಾಯಿ ನೀಡುವಂತೆ ಅವರ ಟೀಚರ್ ಹೇಳಿರುವುದಾಗಿ” ತಿಳಿಸಿದರು.

ಅಪ್ಪ ಸಿಡಿಲು ಬಡಿದಂತೆ ಕುಂತಲ್ಲೇ ಕುಸಿದು ಬಿದ್ದ. ಯಾಕೆಂದರೆ ಆ ಪೋಟೋಗ್ರಾಫರ್, ಈತನೆೇ ಆಗಿದ್ದ. ಇದು, ಇಂದಿನ ನಮ್ಮ ಜೀವನ. ಒಟ್ಟಿಗೆ ಇದ್ದು ನಮ್ಮನ್ನೆ ಯಾಮಾರಿಸುವ ಆಪ್ತರು. ಮನೆ ಕಟ್ಟುವ ಮೇಸ್ತ್ರಿಗಳು, ಅಡುಗೆ ಮಾಡುವ ಬಾಣಸಿಗರು, ನೀರು ತರುವ ಟ್ಯಾಂಕರ್ ಚಾಲಕರು, ಸಿಲಿಂಡರ್ ತರುವ ಗ್ಯಾಸ್ ಬಾಯ್. ಹೀಗೆ ಎಲ್ಲರೂ ಕೂಡ.

ಒಟ್ಟಿನಲ್ಲಿ ಈ ಸಮಾಜದಲ್ಲಿ ಬದುಕಲು ಒಂದಿಷ್ಟು ಎಚ್ಚರಿಕೆ ಇರಬೇಕು. ಒಂದಂಡಿ ಎಚ್ಚರ ತಪ್ಪಿದರೆ, ನಮ್ಮ ಮೇಲೆ ಮಣ್ಣು ಸುರಿದು ನಮ್ಮನ್ನೇ ಹೊಸಕಿ ಹಾಕ್ತಾರೆ. ಹುಷಾರು ಸ್ನೇಹಿತರೇ ಎಚ್ಚರಗೊಳ್ಳಿ ನಮ್ಮವರೇ ನಮಗೆ ಮೋಸ ಮಾಡಬಹುದು. ಎಲ್ಲವುದಕ್ಕೂ ಸಿದ್ಧರಾಗಿರಿ ಹಾಗೂ ಸ್ವಲ್ಪ ಎಚ್ಚರವಾಗಿರಿ. ಇಲ್ಲವಾದರೆ ಆ ಫೋಟೋಗ್ರಾಫರ್ ನ ಹಾಗೆಯೇ ನಾವು ಕೂಡ ಆಗಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here