ಬಯಸಿದ್ದನ್ನೇ ದೇವರು ಕೊಡುತ್ತಾನೆ ಎಂಬ ಮಾತಿಗೆ ಇಲ್ಲೊಂದು ಉತ್ತಮ ಉದಾಹರಣೆ ಇದೆ ನೋಡಿ.

0
4075

ಬಯಸಿದ್ದನ್ನೇ ದೇವರು ಕೊಡುತ್ತಾನೆ ಎಂಬ ಮಾತಿಗೆ ಇಲ್ಲೊಂದು ಉತ್ತಮ ಉದಾಹರಣೆ ಇದೆ ನೋಡಿ. ಬಯಸಿದಂತೆ ಪ್ರಾಪ್ತಿ. ಇದಕ್ಕೆ ಒಂದು ಪ್ರಸಂಗವನ್ನು ಇಲ್ಲಿ ನೋಡೋಣ. ಒಂದು ಮಠದಲ್ಲಿ ಭಾಗವತ ಪುರಾಣದ ಕಥಾಕಾಲಕ್ಷೇಪ ನಡೆಯುತ್ತಿತ್ತು. ಆಗ ಆ ದಿನ ಗೋವರ್ಧನ ಗಿರಿಯನ್ನು ಎತ್ತುವ ಪ್ರಸಂಗ ಭಗವಂತನು ತನ್ನ ಲೀಲಾಮಾತ್ರದಿಂದ ಎಲ್ಲರನ್ನೂ ಹೇಗೆ ಮಕ್ಕಳಂತೆ ಕಾಪಾಡುತ್ತಾನೆ ಎಂಬುದರ ವಿವರಣೆಯಾಗುತ್ತಿತ್ತು.

ಎಲ್ಲರೂ ಶ್ರದ್ಧಾ ಭಕ್ತಿಗಳಿಂದ ಕೇಳುತ್ತಿರುವಾಗ ಶೋತೃಗಳಲ್ಲಿ ಒಬ್ಬ, “ಭಗವಂತನು ಎಲ್ಲರನ್ನೂ ಒಂದೇ ರೀತಿಯಿಂದ ನೋಡುವುದಿಲ್ಲ. ಒಬ್ಬರನ್ನು ಬಡವ ಒಬ್ಬರನ್ನು ಶ್ರೀಮಂತ ಈ ರೀತಿ ಮಾಡಿರುತ್ತಾರೆ. ಒಬ್ಬರಿಗೆ ಸ್ವರ್ಗ ಇನ್ನೊಬ್ಬರಿಗೆ ನರಕ ಈ ರೀತಿಯಾಗಿ ನೀಡುತ್ತಾನೆ. ದೇವರು ಒಂದೇ ರೀತಿ ಎಲ್ಲರನ್ನೂ ಕಾಪಾಡುವನು ಎಂಬುದನ್ನು ದೃಷ್ಟಾಂತ ಸಹಿತವಾಗಿ ಹೇಳಿದರೆ ಒಪ್ಪಿಕೊಳ್ಳುತ್ತಾನೆ’ ಎಂದ.

ಭಾಗವತೋತ್ತಮರು ಪ್ರಶ್ನಿಸಿದವನನ್ನು ಹಾಗೂ ಇತರ ಶ್ರೋತೃಗಳನ್ನು ಕುರಿತು ಹೀಗೆ ಹೇಳಿದರು. ಇಲ್ಲಿ ಮಠದ ಒಳಕ್ಕೆ ಹೋದರೆ ಕೊಠಡಿಗಳಿವೆ. ಅವುಗಳ ಬಾಗಿಲು ಹಾಕಿರುತ್ತದೆ. ಬಾಗಿಲುಗಳ ಮೇಲೆ ಬರೆದಿರುವುದನ್ನು ಓದಿ ತಮಗೆ ಎಲ್ಲೆಲ್ಲಿಗೆ ಬೇಕೋ ಅಲ್ಲಲ್ಲಿಗೆ ಹೋಗಿ. ಅವರ ಸಲಹೆಯಂತೆ ಶೋತ್ರುಗಳೆಲ್ಲ ಹೋಗಿ ನೋಡಿದಾಗ ಮೊದಲನೆಯ ಕೊಠಡಿಯ ಬಾಗಿಲ ಮೇಲೆ ಸ್ವರ್ಗಕ್ಕೆ ದಾರಿ ಎಂದೂ, ಎರಡನೆಯ ಕೊಠಡಿ ಬಾಗಿಲ ಮೇಲೆ ಕೊಪ್ಪರಿಗೆ ಹಣವಿದೆ, ಯಾರು ಎಷ್ಟು ಬೇಕೋ ಅಷ್ಟೂ ತೆಗೆದುಕೊಳ್ಳಬಹುದು ಎಂದೂ, ಮೂರನೆಯ ಕೊಠಡಿ ಬಾಗಿಲ ಮೇಲೆ ಭಗವಂತನಲ್ಲಿಗೆ ದಾರಿ ಎಂದು ಬರೆದಿರುತ್ತದೆ.

ಕೊಠಡಿಗಳ ಹೊರಗೆ ಪಡಸಾಲೆಯಲ್ಲಿ ಇರುವವರಿಗೆ ಪ್ರಾಪಂಚಿಕ ಸುಖವೆಲ್ಲ ದೊರೆಯುತ್ತದೆ, ಅದರೊಂದಿಗೆ ದುಃಖವೂ ಕೂಡ ಇದೆ ಎಂಬ ಸೂಚನೆ ಇದೆ. ಕೆಲವು ಶೋತ್ರುಗಳು ಒಂದನೆಯ ಕೊಠಡಿಯ ಬಾಗಿಲಿಗೆ ಹೋದರು. ಕೆಲವರು ಎರಡನೆಯ ಕೊಠಡಿ ಬಾಗಿಲಿಗೆ ಹೋದರು ಮತ್ತೂ ಕೆಲವರು ಇಲ್ಲೇ ಇದ್ದು ಸುಖವನ್ನು ಅನುಭವಿಸೋಣ ಎಂದು ಪಡಸಾಲೆಯಲ್ಲೇ ಕುಳಿತುಕೊಂಡರು.

ಯಾರೊಬ್ಬರೂ ಭಗವಂತನಲ್ಲಿಗೆ ದಾರಿ ಎಂದು ಬರೆದಿರುವ ಜಾಗಕ್ಕೆ ಹೋಗಲಿಲ್ಲ. ಆಗ ಭಾಗವತೋತ್ತಮರು ಪ್ರಶ್ನೆ ಕೇಳಿದವರನ್ನು ಕರೆದು, “ನೋಡಿದೆಯಾ, ಯಾರ್ಯಾರು ಏನೇನನ್ನು ಅಪೇಕ್ಷಿಸುತ್ತಾರೋ ಅದನ್ನು ಭಗವಂತ ನೀಡುತ್ತಾನೆ’ ಎಂದು ಹೇಳಿ ಪ್ರಶ್ನಿಸಿದವನ ಅನುಮಾನ ಪರಿಹರಿಸಿದರು.

ಈ ಕಥೆಯಿಂದ ನಾವು ತಿಳಿಯುವ ನೀತಿ ಏನೆಂದರೆ ಉತ್ತಮವಾದದ್ದನ್ನೇ ಬಯಸಿ ಹಾಗು ನೀವು ಬಯಸಿದ್ದನ್ನೇ ನೀವು ಜೀವನದಲ್ಲಿ ಪಡೆಯುತ್ತೀರ. ಇದನ್ನು ಅರಿತ ಎಲ್ಲರೂ ಉನ್ನತಿ ಪಡೆಯುತ್ತೀರಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here