HIV ಹಾಗು ಕ್ಯಾನ್ಸರ್ ನಂತಹ ದೊಡ್ಡ ಕಾಯಿಲೆಗಳಿಗೆ ಹಾಗಲಕಾಯಿಯನ್ನು ಬಳಸುವ ವಿಧಾನಗಳು..!!

0
2542

ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್ ಹಾಗು ಆಫ್ರಿಕನ್ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಜೀರ್ಣಿಸಲು ಸಹಕಾರಿ : ಕಹಿಯ ರುಚಿಯಿರುವ ಇತರ ಆಹಾರಗಳ ಮಾದರಿ, ಹಾಗಲಕಾಯಿಯು ಆಹಾರ ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆಂದು ಹೇಳಲಾಗುತ್ತದೆ. ಅಲ್ಲದೇ ಈ ರೀತಿಯಾಗಿ ಅಜೀರ್ಣ ಹಾಗು ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿಯಾಗಿದೆ. ಆದಾಗ್ಯೂ, ಇದು ಎದೆ ಉರಿ ಹಾಗು ಹುಣ್ಣುಗಳನ್ನು ಉಂಟುಮಾಡುತ್ತದೆಂದು ಭಾವಿಸಲಾಗುತ್ತದೆ, ಆದಾಗ್ಯೂ ಈ ಋಣಾತ್ಮಕ ಪರಿಣಾಮಗಳು, ಶಮನಕಾರಿ ಹಾಗು ತೀಕ್ಷ್ಣವಲ್ಲದ ಉರಿಯೂತ ಮಾಡ್ಯೂಲೇಟರ್ ಆಗಿ ಇದರ ಕಾರ್ಯವು ಬಹಳ ಸೀಮಿತವಾಗಿದೆ.

ಲಾಡಿಹುಳ ನಿರೋಧಕ : ಹಾಗಲಕಾಯಿಯನ್ನು, ಜಠರಗರುಳಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ. ಹಾಗು ಇದರ ರಸವು, ನೇಮಟೋಡ್ ವರ್ಗದ ಲಾಡಿಯಂತಹ ಹುಳು ಕಯೇನೋರ್ಹಬ್ಡಿಟಿಸ್ ಎಲೆಗನ್ಸ್ ವಿರುದ್ಧ ವಿಟ್ರೋನಲ್ಲಿ ಚುರುಕುಗೊಂಡಿರುವುದು ಕಂಡುಬಂದಿದೆ.

ಮಲೇರಿಯಾ ನಿರೋಧಕ : ಹಾಗಲಕಾಯಿಗೆ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಹಾಗಲಕಾಯಿಯು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಹಾಗು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆಯೆಂದು ಏಷಿಯಾದಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗುತ್ತದೆ. ಪನಾಮ ಹಾಗು ಕೊಲಂಬಿಯಾನಲ್ಲೂ ಸಹ ಈ ಉದ್ದೇಶಗಳಿಗಾಗಿ ಇದರ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ. ಪ್ರಾಯೋಗಿಕ ಅಧ್ಯಯನಗಳು, ಕೆಲವೊಂದು ಜಾತಿಯ ಹಾಗಲಕಾಯಿಗಳು ಮಲೇರಿಯಾ-ಪ್ರತಿರೋಧಕ ಕಾರ್ಯ ನಿರ್ವಹಿಸುತ್ತವೆಂದು ದೃಢಪಡಿಸಿವೆ, ಆದಾಗ್ಯೂ ಅಧ್ಯಯನಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಕಟವಾಗಿಲ್ಲ.

ವೈರಸ್ ನಿರೋಧಕ : ಟೊಗೊನಲ್ಲಿ, ಸಿಡುಬು ಹಾಗು ದಡಾರದಂತಹ ರೋಗಗಳ ವಿರುದ್ಧ ಈ ಜಾತಿ ಸಸ್ಯವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಎಲೆಯ ರಸದಲ್ಲಿ ನಡೆಸಲಾದ ಪರೀಕ್ಷೆಗಳು ಹರ್ಪಿಸ್ ಸಿಂಪ್ಲೆಕ್ಸ್ ಟೈಪ್ ೧ ವೈರಸ್ ನ ವಿರುದ್ಧ ವಿಟ್ರೋ ಚಟುವಟಿಕೆ ನಡೆಸುತ್ತದೆಂದು ಹೇಳಲಾಗಿದೆ. ಇದಕ್ಕೆ ಮೊಮೊರ್ಡಿಸಿನ್ ಗಳಿಗೆ ಬದಲಾಗಿ ಗುರುತಿಸಲಾದ ಸಂಯುಕ್ತಗಳೇ ಸ್ಪಷ್ಟವಾದ ಕಾರಣ.

ಹಾಗಲಕಾಯಿಯಲ್ಲಿರುವ ಸಂಯುಕ್ತಗಳು HIV ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ. HIV ಸೋಂಕಿನ ಮೇಲೆ ಪರಿಣಾಮ ಬೀರುವ ಹಾಗಲಕಾಯಿಂದ ಬೇರ್ಪಡಿಸಲಾದ ಹೆಚ್ಚಿನ ಸಂಯುಕ್ತಗಳು, ಪ್ರೋಟೀನ್ ಗಳು ಅಥವಾ ಲೆಕ್ಟಿನ್ ಗಳಾಗಿರುತ್ತವೆ. ಇವೆರಡರಲ್ಲಿ ಯಾವುದನ್ನು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ, ಇದಕ್ಕಿಂತ ಭಿನ್ನವಾಗಿ ಹಾಗಲಕಾಯಿಯ ರಸವನ್ನು ಕುಡಿದರೆ ಸೋಂಕಿತ ಜನರಲ್ಲಿ HIV ಹರಡುವುದು ನಿಧಾನಗೊಳ್ಳುತ್ತದೆ. ಹಾಗಲ ಕಾಯಿಯ ರಸವನ್ನು ಸೇವಿಸಿದರೆ, ಅದು HIV ನಿರೋಧಕ ಔಷಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು,ಎಂದು ಹೇಳಲಾಗಿದೆ. ಆದರೆ ಒಂದು ಪ್ರನಾಳದಲ್ಲಿರುವ ವೈರಸ್ ಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮಾತ್ರ ಈ ಫಲಿತಾಂಶ ಪ್ರಕಟಗೊಂಡಿರುವುದು ಸ್ಪಷ್ಟವಾಗಿದೆ.

ಪ್ರತಿರಕ್ಷಾ ಮಾಡ್ಯೂಲೇಟರ್ : ಒಂದು ಪ್ರಾಯೋಗಿಕ ಪರೀಕ್ಷೆಯು, ಹಾಗಲಕಾಯಿಯು ಪ್ರತಿರಕ್ಷಾ ಕೋಶದ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ, ಹಾಗು ಈ ರೀತಿಯಾಗಿ(ಅರ್ಬುದ) ಕ್ಯಾನ್ಸರ್ ಹಾಗು HIV ಸೋಂಕಿತರಿಗೆ ಪ್ರಯೋಜನಕಾರಿಯಾಗಿರುವ ಬಗ್ಗೆ ಬಹಳ ಸೀಮಿತ ಸಾಕ್ಷ್ಯ ಒದಗಿಸಿತು. ಆದಾಗ್ಯೂ, ಈ ಸಮರ್ಥನೆಗಳು ಇನ್ನೂ ದೃಢಪಡಬೇಕಿವೆ.

ಮಧುಮೇಹ : ಹಾಗಲಕಾಯಿಯು ಡಯಾಬಿಟಿಸ್ ಮೆಲ್ಲಿಟಸ್ ಟೈಪ್ ೨ವನ್ನು ತಡೆಗಟ್ಟಲು ಅಥವಾ ಅದನ್ನು ನಿಷ್ಫಲಗೊಳಿಸಲು ಸಹಾಯಕವಾಗಿದೆಯೆಂದು ಜನಪದೀಯ ಚಿಕಿತ್ಸಾ ವಿಧಾನದ ಜ್ಞಾನವು ಸೂಚಿಸುತ್ತದೆ. ಪನಾಮಾದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ, ಈ ಉದ್ದೇಶಕ್ಕಾಗಿ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ.

ಕ್ಯಾನ್ಸರ್ ಪ್ರತಿರೋಧಕ : ಹಾಗಲಕಾಯಿಯಲ್ಲಿ ಎರಡು ಸಂಯುಕ್ತಗಳಿವೆ, α-ಎಲೆಯೋಸ್ಟೀರಿಕ್ ಆಮ್ಲ (ಬೀಜಗಳಿಂದ) ಹಾಗು ೧೫,೧೬-ಡೈ ಹೈಡ್ರಾಕ್ಸಿ -α-ಎಲೆಯೋಸ್ಟೀರಿಕ್ ಆಮ್ಲಗಳು (ಹಣ್ಣಿನಿಂದ) ವಿಟ್ರೋನಲ್ಲಿನ ಲ್ಯುಕೆಮಿಯಾ ಕೋಶಗಳ ವಿನಾಶದಂತಹ ಸ್ವಯಂ ಅಪೋಪ್ಟೋಸಿಸ್ ನ್ನು ಉಂಟುಮಾಡಿರುವುದು ಪತ್ತೆಯಾಗಿದೆ. ಸುಮಾರು ೦.೦೧%ರಷ್ಟು ಹಾಗಲಕಾಯಿ ಎಣ್ಣೆಯನ್ನು ಒಳಗೊಳ್ಳುವ ಆಹಾರವು (೦.೦೦೬% as α-ಎಲೆಯೋಸ್ಟೀರಿಕ್ ಆಮ್ಲವಾಗಿ) ಇಲಿಗಳಲ್ಲಿ, ಅಜೋಕ್ಸಿಮೀಥೇನ್ ಉಂಟುಮಾಡುವ ದೊಡ್ಡ ಕರುಳಿನ ಅರ್ಬುದಂತಹ ಕಾರ್ಸಿನೋಜೆನೆಸಿಸ್ ನ್ನು ತಡೆಗಟ್ಟಿರುವುದು ಪತ್ತೆಯಾಗಿದೆ.

ಇತರೆ ಉಪಯೋಗಗಳು : ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗು ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ಅಸ್ವಸ್ಥತೆಗಳಿಗಾಗಿ ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭಸ್ರಾವಕವಾಗಿ, ಹಾಗು ಶಿಶುವಿನ ಜನನಕ್ಕೆ ಸಹಕಾರಿಯಾಗಲು ಸಹ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್, ಮೂಲವ್ಯಾಧಿ ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು. ಹಾಗಲಕಾಯಿ ಲಿವರ್ ಟಾನಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಮುಂಜಾಗ್ರತೆಗಳು : ಹಾಗಲಕಾಯಿಯ ಬೀಜಗಳು ವಿಷಕಾರಿಯೆನಿಸಿದ ವಿಸಿನೆಯನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಈ ರೀತಿಯಾಗಿ ಇದಕ್ಕೆ ಈಡಾಗುವ ವ್ಯಕ್ತಿಗಳಲ್ಲಿ ರಕ್ತಹೀನತೆಯ ಫಾವಿಸಂನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಯಲ್ಲಿ, ಬೀಜಗಳ ಕೆಂಪು ರಸಲೆಗಳು ಮಕ್ಕಳಿಗೆ ವಿಷಕಾರಿಯೆಂದು ವರದಿಯಾಗಿದೆ, ಹಾಗು ಹಣ್ಣನ್ನು ಗರ್ಭಧಾರಣೆಯ ಸಮಯದಲ್ಲಿ ಸೇವಿಸುವುದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here