ಧನಲಕ್ಷ್ಮಿ ನಮ್ಮ ಮನೆಯಲ್ಲಿ ಒಲಿದು ಬರಬೇಕಂದರೆ ನಮ್ಮ ಮನೆಯಲ್ಲಿ ಯಾವ ರೀತಿಯ ಆಮೆಯನ್ನು ಇಟ್ಕೋಬೇಕು ಅಂತ ಹೇಳ್ತೀವಿ. ಇದರಿಂದ ಧನಲಕ್ಷ್ಮಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತೆ.
ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಅದೃಷ್ಟದ ಪ್ರಾಣಿಯೆಂದು ಹೇಳ್ತಾರೆ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಕೂಡ ನಾವು ಹೆಚ್ಚಾಗಿ ಆಮೆಯ ಪ್ರತಿಮೆಯನ್ನು ನೋಡಬಹುದು. ಇನ್ನೂ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತನ್ನ ಕಡೆಗೆ ಸೆಳೆದುಕೊಳ್ಳೋ ಅದ್ಬುತ ಶಕ್ತಿ ಆಮೆಗಿದೆ.
ಆಮೆಯ ಪ್ರತಿಮೆಯನ್ನು ಉತ್ತರದ ದಿಕ್ಕಿನಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಅಂತ ಹೇಳ್ತಾರೆ ಶಾಸ್ತ್ರಜ್ಞರು. ಅಷ್ಟೇ ಅಲ್ಲದೇ ಉತ್ತರ ಮತ್ತು ಪೂರ್ವಕ್ಕೆ ಆಮೆಯ ಪ್ರತಿಮೆ ಇಟ್ಟರೆ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಬಹುದು.
ಇನ್ನೂ ಸಂತಾನ ಇಲ್ಲದವರು ಆಮೆಯು ತನ್ನ ಮಕ್ಕಳನ್ನು ಹೊತ್ತಿರುವ ಪ್ರತಿಮೆಯನ್ನು ಇಟ್ಟುಕೊಂಡರೆ ಅವರ ಜಾತಕ ದೋಷ ದೂರವಾಗಿ ಸಂತಾನ ಪ್ರಾಪ್ತಿ ಆಗುತ್ತೆ ಅಂತ ಶಾಸ್ತ್ರಜ್ಞರು ಹೇಳ್ತಾರೆ.
ಇನ್ನೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಆರ್ಥಿಕವಾಗಿ ಕುಗ್ಗಿದವರು , ಹಣಕಾಸಿನ ಮುಗ್ಗಟ್ಟು ಹೊಂದಿರುವವರು ಸ್ಪಟಿಕ ಆಮೆಯನ್ನು ವ್ಯಾಪಾರದ ಸ್ಥಳದಲ್ಲಿ ಅಥವಾ ನಗದು ಇಡುವ ಸ್ಥಳದಲ್ಲಿ ಇಟ್ಟರೆ ಉತ್ತಮ. ಇನ್ನೂ ಯಾವಾಗಲೂ ಹಣಕಾಸಿನ ತೊಂದರೆ ಇರುವವರು , ಅಶಾಂತಿ ಇರುವವರು ಲೋಹದ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.
ಇದನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಹುದು. ಇನ್ನೂ ಪದೇ ಪದೇ ಅನಾರೋಗ್ಯ ಉಂಟಾಗುತ್ತಿದ್ದರೆ ಮಣ್ಣಿನಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡಬೇಕು. ದಂಪತಿಗಳ ಮಧ್ಯೆ ವೈಮನಸ್ಯ ಮೂಡದೇ ಇರಬೇಕು ಅಂದ್ರೆ ಅವರ ಹತ್ತಿರ ಆಮೆಯ ಪ್ರತಿಮೆಯನ್ನು ಇಟ್ಟುಕೊಳ್ಳಬೇಕು. ಇದರಿಂದ ಅವರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ
ಹೊಸದಾಗಿ ವ್ಯಾಪಾರ ಶುರುಮಾಡುವವರು ಬೆಳ್ಳಿಯ ಆಮೆಯ ಪ್ರತಿಮೆಯನ್ನು ವ್ಯಾಪಾರದ ಸ್ಥಳದಲ್ಲಿ ಇಟ್ಟರೆ ಅಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಆಕರ್ಷಿಸಿ ಅಲ್ಲಿ ಧನಕನಕ ಸುರಿಮಳೆ ಆಗುತ್ತದೆ. ವ್ಯಾಪಾರ ವೃದ್ಧಿಯಾಗಿ ಲಾಭಾಂಶ ಹೆಚ್ಚಾಗುತ್ತದೆ.
ಮಕ್ಕಳಿಗೆ ಏಕಾಗ್ರತೆ ಜ್ಞಾನ ಹೆಚ್ಚಾಗಬೇಕೆಂದರೆ ಮಕ್ಕಳು ಓದುವ ಕೋಣೆಯಲ್ಲಿ ಹಿತ್ತಾಳೆಯ ಆಮೆಯನ್ನು ಇಟ್ಟರೆ ಮಕ್ಕಳು ಚೆನ್ನಾಗಿ ಓದುತ್ತಾರೆ.ಹೀಗೆ ಆಮೆಯ ಪ್ರತಿಮೆಯನ್ನು ತಂದುಕೊಂಡು ಲಾಭವನ್ನು ತಂದುಕೊಳ್ಳಿ. ಮನೆಯಲ್ಲಿ ಶಾಂತಿ, ನೆಮ್ಮದಿ, ಲಾಭ ಉಂಟಾಗಲು ಆಮೆಯ ಪ್ರತಿಮೆ ನಮಗೆ ಸಹಾಯ ಮಾಡುತ್ತದೆ.