ಆಧುನಿಕ ಯುಗದಲ್ಲಿ ಬೊಜ್ಜು ಕೊಡುವ ಉಪಟಳ ಬೇರೆ ಯಾವ ರೋಗವೂ ಕೊಡದು, ಅತಿಯಾದ ಆಹಾರ ಸೇವನೆ, ಹೆಚ್ ಕಾರ್ಬೋಹೈಟ್ ಕಾರ್ಬೋಹೈಡ್ರೇಟ್ ಸೇವನೆಯಿಂದ ದೇಹದ ತೂಕ ಜಾಸ್ತಿ ಆಗುವುದು, ದೇಹದ ತೂಕ ಮಿತಿ ಮೀರಿದಾಗ ಬೊಜ್ಜು ಬರುವುದು ಸಹಜ, ವ್ಯಾಯಾಮ ರಹಿತ ಜೀವನ ಶ್ರಮ ಇಲ್ಲದೆ ಕೆಲಸಗಳು ಸದಾಕಾಲ ಒಂದೇ ಕಡೆ ಕುಳಿತಿರುವುದರಿಂದ ಬೊಜ್ಜು ಬರುವುದು, ಬೊಜ್ಜು ಬರದಂತೆ ಪ್ರಾರಂಭದಿಂದಲೇ ನೋಡಿಕೊಳ್ಳಬೇಕು.
ಬೂದುಗುಂಬಳಕಾಯಿಯ ರಸವನ್ನು ಖಾಲಿಹೊಟ್ಟೆಗೆ ಸೇವಿಸುವುದರಿಂದ ಬೊಜ್ಜು ಕರಗುತ್ತದೆ.
ಹೊಟ್ಟೆ ಬಿರಿಯುವಂತೆ ಆಹಾರವನ್ನು ಸೇವಿಸಬಾರದು.
ಅತಿಯಾಗಿ ನಿದ್ರೆ ಮಾಡಬಾರದು, ನಿದ್ರೆ ಹೆಚ್ಚು ಮಾಡುವುದರಿಂದ ಬೊಜ್ಜು ಬರುವುದು.
ಮಧ್ಯಾಹ್ನದ ನಿದ್ರೆ ತುಂಬಾ ಅಪಾಯಕಾರಿ.
ಕರಿಬೇವಿನ ಸೊಪ್ಪಿನ ಪುಡಿ ಯನ್ನು ಪ್ರತಿದಿನ ಖಾಲಿಹೊಟ್ಟೆಗೆ ಸೇವಿಸುವುದರಿಂದ ಬೊಜ್ಜು ಕರಗುವುದು.
ಖಾಲಿ ಹೊಟ್ಟೆಗೆ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಬೊಜ್ಜು ಕರಗುವುದು.
ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸುಮಾರು ಒಂದೆರಡು ತಿಂಗಳುಗಳ ಕಾಲ ಸೇವಿಸಿದರೆ ಬೊಜ್ಜು ಕರಗುವುದು, ಹೆಚ್ಚು ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ಬೊಜ್ಜು ಕರಗುತ್ತದೆ.
ಕಡಿಮೆ ಪ್ರಮಾಣದ ಪ್ರೊಟೀನ್ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.
ಪ್ರತಿದಿನ ಒಂದು ಚಮಚ ಕರಿ ಎಳ್ಳನ್ನು ಖಾಲಿ ಹೊಟ್ಟೆಗೆ ತಿಂದು ನೀರು ಕುಡಿಯುವುದರಿಂದ ಬೊಜ್ಜು ಕರಗುವುದು, ಹೀಗೆ ಎರಡು ತಿಂಗಳ ಕಾಲ ಮಾಡಬೇಕು.
ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯಿರಿ ಇದರಿಂದ ಬೊಜ್ಜು ಕರಗುವುದು.
ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಅನಗತ್ಯವಾದ ಕೊಬ್ಬು ನಿವಾರಣೆ ಆಗುವುದು.
ಊಟ ಮಾಡುವುದಕ್ಕೆ ಮೊದಲು ಸುಮಾರು ಎರಡು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ಬೊಜ್ಜು ಕರಗುವುದು.
ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಕೊಬ್ಬು ಕರಗುವುದು, ಬಾಳೆ ದಿಂಡಿನ ರಸವು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು.
ಬಾಳೆ ದಿಂಡಿನ ರಸಕ್ಕೆ ಬೂದುಗುಂಬಳ ರಸವನ್ನು ಸೇರಿಸಿ ಕುಡಿದರೆ ತುಂಬಾ ಒಳ್ಳೆಯದು, ಸ್ವಲ್ಪ ನೀರನ್ನು ಬೇಕಾದರೂ ಬೆರೆಸಬಹುದು.
ಬೆಣ್ಣೆ ತೆಗೆದ ಮಜ್ಜಿಗೆಗೆ ಶುಂಠಿ ಸೈಂಧವ ಲವಂಗವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬನ್ನು ಕರಗಿಸಬಹುದು.
ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ದೇಹದ ಕೊಬ್ಬನ್ನು ನಿವಾರಿಸಿಕೊಳ್ಳಬಹುದು.
ಬಾಳೆ ಹಣ್ಣಿನ ತಿರುಳಿಗೆ ಹಸುವಿನ ಹಾಲು ಸೇರಿಸಿ ಕುಡಿಯಿರಿ ಹೀಗೆ ಮಾಡುವುದರಿಂದ ದೇಹದ ತೂಕ ಕಳೆದುಕೊಳ್ಳಬಹುದು.
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮೊಸರಿನ ಸೇವನೆ ಒಳ್ಳೆಯದು.
ಹಳೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುವುದು, ನರಗಳಲ್ಲಿ ನವಚೈತನ್ಯ ಉಕ್ಕುವುದು, ದೇಹದಲ್ಲಿ ಶಕ್ತಿ ಹೆಚ್ಚಾಗುವುದು.
ರಾತ್ರಿಯ ಊಟಕ್ಕೆ ಅನ್ನವನ್ನು ಸೇವಿಸದೆ ಒಣ ಚಪಾತಿಯನ್ನು ಸೇವಿಸಿದರೆ ಒಳ್ಳೆಯದು.
ಕರಿಬೇವಿನ ಸೊಪ್ಪನ್ನು ಊಟದಲ್ಲಿ ಬಳಸಿದರೆ ದೇಹದ ಕೊಬ್ಬೂ ಇಳಿಯುವುದು.
ಎಣ್ಣೆಯ ಪದಾರ್ಥಗಳು ಕರಿದ ತಿಂಡಿಗಳನ್ನು ದೂರ ಮಾಡಿ ನಿಮ್ಮ ದೇಹದ ತೂಕ ಸುಲಭವಾಗಿ ಇಳಿಯುವುದು.
ಗಮನಿಸಿ : ದೇಹ ಕೊಬ್ಬನ್ನು ಇಳಿಸಲು ಅತಿಯಾದ ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳನ್ನು ಸೇವಿಸಬಾರದು, ಪಿಸ್ತ, ಪ್ರೋಟೀನ್ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು.
ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗು ಹೆಚ್ಚಿನ ಅರೋಗ್ಯ ಮಾಹಿತಿ ಮತ್ತು ಲೇಟೆಸ್ಟ್ ನ್ಯೂಸ್ ಅಪ್ಡೇಟ್ ಗಾಗಿ ನಮ್ಮ ಪೇಜ್ ಲೈಕ್ ಮಾಡುವುದನ್ನು ಮರೆಯದಿರಿ.