ಮನುಷ್ಯನ ಭಾವನೆ, ಕೋಪ, ತಾಪ ನಗು ಇವುಗಳನ್ನೆಲ್ಲ ನಿಯಂತ್ರಣ ಮಾಡೋದು ನಮ್ಮ ಮೆದುಳು. ಮನುಷ್ಯ ಸೇರಿದಂತೆ ಇತರ ಪ್ರಾಣಿಗಳಿಗೆ ಒಂದೇ ಮೆದುಳು ಇದ್ದರೆ , ಆಕ್ಟೋಪಸ್ ಜೀವಿಗೆ ಮಾತ್ರ 9 ಮೆದುಳು ಇರುತ್ತದೆ.
ಇಂತಹ ಮೆದುಳಿನ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಹೇಳ್ತೆವೆ ಬನ್ನಿ. ನಮ್ಮ ಮೆದುಳು ಹೆಚ್ಚು ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಮನುಷ್ಯನ ಮೆದುಳು ದೇಹದ 20 ರಷ್ಟು ಆಮ್ಲಜನಕ ಮತ್ತು ರಕ್ತವನ್ನು ಬಳಸಿಕೊಳ್ಳುತ್ತೆ. ಮನುಷ್ಯನ ಇತರ ಯಾವುದೇ ಅಂಗಗಳು ಮೆದುಳಿನಷ್ಟು ಆಮ್ಲಜನಕ ಮತ್ತು ರಕ್ತವನ್ನು ಉಪಯೋಗಿಸಿಕೊಳ್ಳುವುದಿಲ್ಲ. ಮೆದುಳು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತದೆ.ನಮ್ಮ ಹೃದಯ, ಕಿಡ್ನಿ, ಜಠರಗಳು ಕೂಡ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದರೂ ಮೆದುಳು ಇವುಗಳನ್ನೆಲ್ಲಾ ಕಂಟ್ರೊಲ್ ಮಾಡಿ ಒಂದು ಭಾವನೆಗಳನ್ನು ಹತೋಟಿಯಲ್ಲಿಡುವುದರಿಂದ ಇಷ್ಟ ಶಕ್ತಿಯನ್ನು ವ್ಯಯ ಮಾಡಬೇಕಾಗುತ್ತದೆ.
ಪ್ರಪಂಚದ ಅತಿ ಬುದ್ದಿವಂತ ಮೆದುಳು ಯಾರದ್ದೆಂದರೆ ಅದು ಐನ್ಸ್ಟೈನ್’ರವರದ್ದು. ಅವರು ಸತ್ತ ನಂತರ ಅವರ ಮೆದುಳನ್ನು ಕುತೂಹಲದ ಅನ್ವೇಷಣೆಗಾಗಿ ಕಳ್ಳತನ ಮಾಡುತ್ತಾರೆ.ಅವರು ಸತ್ತ ನಂತರ ಅವರನ್ನು ಪೊಸ್ಟ್ ಮಾರ್ಟಂ ಮಾಡಿದ ಡಾಕ್ಟರ್ ಅವರ ಮೆದುಳನ್ನು ಕತ್ತರಿಸಿ ಒಂದು ಜಾರ್’ನಲ್ಲಿ ಇಡುತ್ತಾರೆ. ಇದನ್ನು ತಿಳಿದ ನಂತರ ಆಸ್ಪತ್ರೆಯವರು ಆ ಡಾಕ್ಟರ್’ನ್ನು ಸಸ್ಪೆಂಡ್ ಮಾಡುತ್ತಾರೆ.
ನಮ್ಮ ಮನೆಯಲ್ಲಿರುವ ಬಲ್ಬನ್ನು ಉರಿಸುವ ಶಕ್ತಿ ನಮ್ಮ ಮೆದುಳಿಗಿದೆ.ನಾವು ಎಚ್ಚರದಲ್ಲಿರುವಾಗ ಮೆದುಳು ಬಿಡುಗಡೆ ಮಾಡುವ ಎನರ್ಜಿಯಿಂದ 23 ವ್ಯಾಟ್ ಬಲ್ಬನ್ನು ಉರಿಸಬಹುದು.ಅದಕ್ಕೆ ಯಾವುದಾದರೂ ಹೊಸ ಐಡಿಯಾ ಬಂದಾಗ ಬಲ್ಬನ್ನು ಸಿಂಬಲ್ ಆಗಿ ತೋರಿಸುತ್ತಾರೆ.
ನಮ್ಮ ಮೆದುಳು ನಮ್ಮ ಜೀವನವನ್ನು ನಿಯಂತ್ರಣ ಮಾಡುತ್ತದೆ.ನಾವು ಹಣವಂತರಾಗಬೇಕು ಅಥವಾ ದರಿದ್ರರಾಗಬೇಕಾದರೂ ಅದು ಮೆದುಳಿನ ಆಲೋಚನೆಯೇ ಕಾರಣ.
ಕೋಟ್ಯಾಂತರ ದೂರದಲ್ಲಿರುವ ನಕ್ಷತ್ರಗಳು, ಬ್ಲಾಕ್ ವೊಲ್, ಗ್ರಹಗಳು, ಇವುಗಳಿಗಿಂತ ನಮ್ಮ ಮೆದುಳು ನಿಗೂಢವಾಗಿದೆ.ಕಾರಣ ನಮ್ಮ ಮೆದುಳು ನೂರು ಬಿಲಿಯನ್’ನಷ್ಟು ನ್ಯೂರಾನ್‌ಗಳು ಇರುತ್ತವೆ.ಈ ರೀತಿಯ ಒಂದೊಂದು ನ್ಯೂರಾನ್‌ಗಳು ಉಳಿದ ಹತ್ತು ಸಾವಿರ ನ್ಯೂರಾನ್‌ಗಳ ಜೊತೆ ಸಂಪರ್ಕವನ್ನು ಹೊಂದುತ್ತೆ.ಪ್ರತಿ ನ್ಯೂರಾನ್‌ಗಳಲ್ಲೂ ಸಿಗ್ನಲ್ ಬಿಡುಗಡೆ ಆಗುತ್ತಲೇ ಇರುತ್ತದೆ.ಈ ರೀತಿಯಲ್ಲಿ ಮೆದುಳನ್ನು ಎಷ್ಟು ರೀಸರ್ಚ್ ಮಾಡಬೇಕೆಂದರೂ ಅದು ನಿಗೂಢವಾಗಿಯೇ ಇರುತ್ತದೆ. ಅದಕ್ಕೆ ಅದನ್ನು ನಕ್ಷತ್ರಗಳನ್ನು ಬೇಕಾದರೂ ಕಂಡು ಹಿಡಿಯಬಹುದು ಅದರೆ ಮಿದುಳಿನ ಬಗ್ಗೆ ರಿಸರ್ಚ್ ಮಾಡಲು ಕಷ್ಟ ಎಂದು ಹೇಳುತ್ತಾರೆ.
ಒಂದು ವೇಳೆ ಮೆದುಳನ್ನು ವೀಡಿಯೋ ರೆಕಾರ್ಡರ್ ಆಗಿ ನಾವು ಉಪಯೋಗಿಸಿದರೆ ಅದು 3 ಮಿಲಿಯನ್ ಗಂಟೆಗಳ ಕಾಲ ವೀಡಿಯೊವನ್ನು ರೆಕಾರ್ಡ್ ಮಾಡುತ್ತೆ.ವಿಜ್ಞಾನಿಗಳ ಅಂದಾಜಿನ ಪ್ರಕಾರ ಮೆದುಳಿನ ಕೆಪಾಸಿಟಿ ಸ್ಟೋರೇಜ್ ಸುಮಾರು ಒಂದು ಮಿಲಿಯನ್ ಜಿಬಿ.
ಆಕ್ಟೋಪಸ್ ಜೀವಿಗೆ ಒಂಬತ್ತು ಮೆದುಳಿರುತ್ತವೆ.ಸಮುದ್ರದಲ್ಲಿ ವಾಸ ಮಾಡುವ ಆಕ್ಟೋಪಸ್ ಒಂಬತ್ತು ಮಿದುಳನ್ನು ಹೊಂದಿದೆ. ಇದು ಆಕ್ಟೋಪಸ್’ನ ನರ್ವಸ್ ಸಿಸ್ಟಂನ ಕಂಟ್ರೋಲ್ ಮಾಡುತ್ತೆ.ಹಾಗೂ ಉಳಿದ ಎಂಟು ಕಡೆ ಬಾಲಗಳಲ್ಲಿ ಬ್ರೇನ್ ಇರುತ್ತೆ.ಅಧಿಕಾರ ನಿಮ್ಮ ಮೆದುಳಿನ ಆಪರೇಟಿಂಗ್ ಸಿಸ್ಟಮ್ ನ್ನು ಬದಲಾಯಿಸುತ್ತೆ.ಹೌದು ಈ ಮಾತು ನಿಜ . ಅಧಿಕಾರ ಬಂದ್ರೆ ನಮಗೆ ಎಂದೂ ಇಲ್ಲದ ಧೈರ್ಯ ಬರುತ್ತೆ. ಕನಿಕರ,ಕರುಣೆ ಕಮ್ಮಿ ಆಗುತ್ತೆ.
ಮೊಬೈಲ್ ಹೆಚ್ಚು ಬಳಸಿದರೆ ಮೆದುಳಿನ ಶಕ್ತಿ ಕುಂಠಿತವಾಗುತ್ತದೆ. ಮೊಬೈಲ್ ಹೆಚ್ಚು ಬಳಸಿದರೆ ಕಣ್ಣಿನಲ್ಲಿ ನೀರು ಕಡಿಮೆ ಆಗುತ್ತೆ. ನಮಗೆ ಇತರ ವಿಷಯಗಳ ಕಡೆ ಆಸಕ್ತಿ ಕಡಿಮೆ ಆಗುತ್ತೆ. ಏಕಾಗ್ರತೆ ಸಾಧ್ಯವಾಗುವುದಿಲ್ಲ. ಅನೇಕ ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಬರುತ್ತದೆ.ಕುಡಿತದಿಂದ ನಮ್ಮ ಮೆದುಳು ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಇವು ನಮ್ಮ ಮೆದುಳಿಗೆ ಸಂಬಂಧಪಟ್ಟ ಕೆಲವೊಂದು ಮಾಹಿತಿಗಳು.