ಕೆಮ್ಮು, ಕಫ, ನೆಗಡಿ, ಜ್ವರಗಳಿಗೆ ಇಲ್ಲಿದೆ ಸೂಕ್ತ ಪರಿಹಾರ..!

0
6769

ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ, ಕಹಿಬೇವಿನ ಕಷಾಯವನ್ನು ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.

ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿದರೆ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.

4 ರಿಂದ 5 ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸಕ್ಕೆ 2 ಚಮಚ ಜೇನನ್ನು ಸೇರಿಸಿ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುತ್ತದೆ.

ಅಮೃತ ಬಳ್ಳಿಯ ಕಷಾಯ ಮಾಡಿ ಕುಡಿದರೆ ಜ್ವರವನ್ನು ವಾಸಿಮಾಡುತ್ತದೆ, ಅಮೃತ ಬಳ್ಳಿಗೆ ಹಿಂದಿಯಲ್ಲಿ ಗಿಲೋಯ್ ಎಂದೂ ಸಂಸ್ಕೃತದಲ್ಲಿ ಗುಡುಚಿ ಎಂದೂ ಕರೆಯುತ್ತಾರೆ. ಇದು ಹಲವಾರು ರೋಗಗಳನ್ನು ವಾಸಿಮಾಡುವ ಔಷಧೀಯ ಗುಣವನ್ನು ಹೊಂದಿರುವುದರಿಂದ ಕನ್ನಡದಲ್ಲಿ ಅಮೃತ ಬಳ್ಳಿ ಎಂದು ಕರೆಯುತ್ತಾರೆ.

ಕಿರಾತನ ಕಡ್ಡಿಯ(ನೆಲ ಬೇವು) ಕಷಾಯವನ್ನು ಮಾಡಿ ಕುಡಿದರೆ ಒಳ ಜ್ವರದ ನಿವಾರಣೆಯಾಗುತ್ತದೆ, ಕಿರಾತನ ಕಡ್ಡಿಯನ್ನು ‘ಕಿಂಗ್ ಆಫ್ ಬಿಟರ್’ ಎಂದೇ ಕರೆಯುತ್ತಾರೆ.

ಒಂದು ಲೋಟ ನೀರಿಗೆ 1 ಚಮಚ ಮೆಂತೆ, 1 ಚಮಚ ದನಿಯಾ, 1/2 ಚಮಚ ಜೀರಿಗೆ, 5-6 ಬಿಳಿ ದಾಸವಾಳದ ಸೊಪ್ಪನ್ನು ಮತ್ತು ಬೆಲ್ಲವನ್ನು ಸೇರಿಸಿ ಕುದಿಸಿ ಕಷಾಯವನ್ನು ಮಾಡಿಕೊಂಡು ಅಗತ್ಯವಿದ್ದರೆ ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಿಕೊಂಡು ಕುಡಿದರೆ ಜ್ವರ ಮತ್ತು ನೆಗಡಿ ವಾಸಿಯಾಗುತ್ತದೆ.

1 ಚಮಚ ಜೇನಿಗೆ 1/4 ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿಕೊಂಡು ತಿಂದರೆ ಕಫ ಕಡಿಮೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here