ಧ್ರುವ ಸರ್ಜಾ ಮದುವೆಯಲ್ಲಿ ಎಲ್ಲರನ್ನೂ ಆಕರ್ಷಿಸಿದ ಈ ಸುಂದರ ಹುಡುಗಿ ಯಾರು ಗೊತ್ತಾ ?

0
2748

ಕನ್ನಡದ ಸಿನಿಮಾ ನಟರಿಗೆ ಈ ಎರಡು ವರ್ಷಗಳಿಂದ ಮದುವೆ ಯೋಗ ಕೂಡಿ ಬಂದಿದೆ.ದಿಗಂತ್ ,ಆಂದ್ರಿತಾ, ಪ್ರಜ್ವಲ್ ದೇವರಾಜ್, ಸೇರಿದಂತೆ ಅನೇಕ ನಟರಿಗೆ ಈ ವರ್ಷ ಮದುವೆ ಆಗಿದೆ. ಕನ್ನಡದ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮದುವೆ ಕಳೆದ ತಿಂಗಳ 24 ರಂದು ಬೆಂಗಳೂರಿನ ಬೃಂದಾವನ ಹಾಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಮದುವೆಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆರೆದಿದ್ದು ಧ್ರುವನ ಮದುವೆಗೆ ಹಾರೈಸಿದರು.

ಧ್ರುವ ಸರ್ಜಾ ಸರ್ಜಾ ಕುಟುಂಬದ ಕುಡಿಯಾದರೂ ಅವರೇನು ಅದರ ಪ್ರಭಾವದಿಂದ ಸಿನಿಮಾಕ್ಕೆ ಬರಲಿಲ್ಲ. ತಮ್ಮ ಪರಿಶ್ರಮದಿಂದ ಡಾನ್ಸ್, ಫೈಟ್, ತಯಾರಿ ಮಾಡಿಕೊಂಡು ಸಿನಿಮಾಗೆ ಎಂಟ್ರಿಯಾದರು.ಮಾಡಿದ ಮೂರೂ ಸಿನಿಮಾಗಳೂ ಸೂಪರ್ ಹಿಟ್ ಅಗಿ ದ್ರುವರ ಮಾರ್ಕೆಟ್ ವ್ಯಾಲ್ಯೂ ಜಾಸ್ತಿಯಾಯಿತು.ಅವರ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ಅವರ ಸಿನಿಮಾ ಎರಡು ವರ್ಷಗಳಿಗೊಮ್ಮೆ ಬರುತ್ತದೆ. ಬಂದರೆ ಅದು ದಾಖಲೆಯಾಗಿ ಹಿಟ್ ಆಗುತ್ತದೆ. ಒಂದು ಸಿನಿಮಾಗೆ ಬೇಕಾದ ಪುರ್ವ ತಯಾರಿ ಮಾಡಿಕೊಂಡು ಚಿತ್ರೀಕರಣದ ಸ್ಥಳಕ್ಕೆ ಬರುತ್ತಾರೆ.

ಇನ್ನೂ ದ್ರುವ ಸರ್ಜಾರ ಮದುವೆಗೆ ಒಂದು ಅಚ್ಚರಿ ಎಲ್ಲರಿಗೂ ಕಾದಿತ್ತು‌. ಒಂದು ಸುಂದರವಾದ ಹೆಣ್ಣು ಮಗಳು ಮದುವೆ ಮನೆಯ ತುಂಬಾ ಸಡಗರದಿಂದ ಓಡಾಡುತ್ತಿದ್ದರು. ಆಕೆ ಯಾರೆಂದು ಎಲ್ಲರೂ ತಲೆಕೆಡಿಸಿಕೊಂಡರು. ಥೇಟ್ ಅಪ್ಸರೆಯಂತಿದ್ದ ಆಕೆ ಸಿನಿಮಾ ಹೀರೋಯಿನ್ ತರಹ ಇದ್ದಳು. ಬನ್ನಿ ಅವರು ಯಾರೆಂದು ಹೇಳುತ್ತೇವೆ.‌ ಅವಳು ಬೇರಾರು ಅಲ್ಲ, ಅಲ್ಲ ಅರ್ಜುನ್ ಸರ್ಜಾ ಅವರ ಎರಡನೇ ಮುದ್ದು ಮಗಳು ಅಂಜನಾ ಸರ್ಜಾ. ಅಂಜನಾ ಸರ್ಜಾರವರು ತುಂಬಾ ಫ್ಯಾಷನೇಟ್ ಆಗಿ ಕಾಣಿಸಲು ಇಚ್ಚಿಸುತ್ತಾರೆ ಕಾರಣ ಇವರು ಫ್ಯಾಷನ್ ಪ್ರಿಯರು.

ಸದ್ಯ ಇವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತಿದ್ದು, ಮದುವೆಗೆಂದೂ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಮದುವೆಯ ದಿನ ಈಕೆ ಕೂಡ ಆಕರ್ಷಕಣೆಯ ಕೇಂದ್ರ ಬಿಂದು ಆಗಿದ್ದಳು. ಅಕ್ಕನ ತರಹ‌ ಈಕೆ ಕೂಡ ಸಿನಿಮಾ ರಂಗಕ್ಕೆ ಬರಬಹುದು ಎನ್ನುತ್ತಾರೆ ಸಿನಿ ಪಂಡಿತರು. ಇವಳ ಅಕ್ಕ ಐಶ್ವರ್ಯ ಸರ್ಜಾ ತಮ್ಮ ಚೊಚ್ಚಲ ಸಿನಿಮಾವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಪ್ರೇಮ ಬರಹ ಸಿನಿಮಾದಲ್ಲಿ ಚಂದನ್ ಜೊತೆ ನಟಿಸಿದ ಐಶ್ವರ್ಯ ಸರ್ಜಾ ಸ್ಯಾಂಡಲ್ ವುಡ್’ನ‌ ಎಲ್ಲ ನಟರ‌ ಬೆಂಬಲದೊಂದಿಗೆ ಯಶಸ್ವಿಯಾಗಿ ಸಿನಿಮಾ ನಿರ್ವಹಣೆ ‌ಮಾಡಿದ್ದರು. ಸಿನಿಮಾಕ್ಕಾಗಿ ಅರ್ಜುನ್ ಸರ್ಜಾರವರು ವಿಶೇಷ ಕಾಳಜಿವಯಿಸಿದ್ದರು.

LEAVE A REPLY

Please enter your comment!
Please enter your name here