ಪಾದರಾಯನಪುರ ದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆಯ ವಿರುದ್ಧವಾಗಿ ಮಾಧ್ಯಮಗಳು ಹಾಗೂ ಕರ್ನಾಟಕದ ಜನತೆ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ, ಆದರೆ ಶಾಸಕ ಜಮೀರ್ ಅಹಮದ್ ಅವರು ಮಾತ್ರ ಘಟನೆಯನ್ನು ತೀವ್ರವಾಗಿ ವಿರೋಧ ಮಾಡುವ ಅವಶ್ಯಕತೆ ಇಲ್ಲ, ಎನ್ನುವ ರೀತಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ, ಹಾಗೂ ನಾನು ರಾತ್ರಿ ಅಲ್ಲಿಗೆ ಹೋಗೋದು ಬೇಡ, ಬೆಳಗ್ಗೆ ಹೋಗಿ ಅಂದಿದ್ದೆ ಬೆಳಿಗ್ಗೆ ಹೋಗಿದ್ದರೆ ಇಷ್ಟೆಲ್ಲ ಅನಾಹುತಗಳು ಆಗುತ್ತಿರಲಿಲ್ಲ ತಿನ್ನುವ ಮಾತನ್ನು ಸಹ ಜಮೀರ್ ಅಹಮದ್ ಅವರು ಹೇಳಿದ್ದಾರೆ.
ಪಾದರಾಯನಪುರ ದಲ್ಲಿ ಗಲಾಟೆ ಮಾಡಿರುವ ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಹ ಲ್ಲೆಮಾಡಲು ಪ್ರಯತ್ನ ಮಾಡಿರುವವರು ವಿದ್ಯಾವಂತರಲ್ಲ ಅವರಿಗೆ ಅಷ್ಟೊಂದು ತಿಳುವಳಿಕೆ ಇಲ್ಲ, ಅಲ್ಲಿ ಇರೋದು ಕೂಲಿ ಕಾರ್ಮಿಕರು, ಆಟೋ ಚಾಲಕರು, ಹಾಗೂ ಬಡವರು, ಎಂದು ಹೇಳುವ ಮುಖಾಂತರ ಮತ್ತೊಂದು ಚರ್ಚೆಗೆ ಗುರಿಯಾಗಿದ್ದಾರೆ,ಇದೇ ಕಾರಣಕ್ಕಾಗಿ ಹಲವರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಸಾಮಾಜಿಕ ಜಾಲತಾಣದ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ, ಅದೇ ರೀತಿ ಮುಸ್ಲಿಂ ಯುವಕ ಸಹ ತಮ್ಮ ಅನಿಸಿಕೆ ವಿಡಿಯೋ ಮೂಲಕ ಹಂಚಿಕೊಂಡಿದ್ದು, ನಡೆದ ಘಟನೆಯನ್ನು ತೀವ್ರವಾಗಿ ವಿರೋಧ ಮಾಡುತ್ತಿದ್ದಾರೆ ಹಾಗು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಎನ್ನುತ್ತೀದ್ದಾರೆ, ವಿಡಿಯೋ ಈ ಕೆಳಗೆ ನೀಡಲಾಗಿದೆ.