ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಯಾರಿಗೆ ತಾನೇ ಗೊತ್ತಿಲ್ಲ. ಈ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಸ್ಪರ್ಧಿಗಳು ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಕೆಲವರ ಹಿನ್ನೆಲೆ ಉತ್ತಮವಾಗಿದ್ದರೆ ಮತ್ತು ಕೆಲವರ ಹಿನ್ನೆಲೆ ಸ್ವಲ್ಪ ವಿಚಿತ್ರವಾಗಿದ್ದರೂ ಕೂಡ ಅದು ಚಾನಲ್ಗೆ ಉತ್ತಮ ಲಾಭವನ್ನು ತಂದು ಕೊಡುತ್ತದೆ. ಆದರೆ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಪರ್ಧಿಯಾಗಿದ್ದ ನಿರಂಜನ್ ದೇಶಪಾಂಡೆ ಅವರು ಉತ್ತಮ ಹಿನ್ನೆಲೆಯಿಂದ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವೃತ್ತಿಯಲ್ಲಿ ರೇಡಿಯೋ ಜಾಕಿ ಆಗಿದ್ದ ನಿರಂಜನ್ ದೇಶಪಾಂಡೆಯವರು ನಂತರ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕೂಡ ಕಾಣಿಸಿಕೊಂಡಿದ್ದರು. ಪ್ರಖ್ಯಾತ ರಿಯಾಲಿಟಿ ಶೋಗಳಾದ ಮಜಾ ಭಾರತ ಹೀಗೆ ವಿವಿಧ ರಿಯಾಲಿಟಿ ಶೋಗಳಲ್ಲಿ ಉತ್ತಮ ನಿರೂಪಣೆ ಮಾಡಿದ್ದರು. ಅಷ್ಟೇ ಅಲ್ಲದೆ ಬಾಂಬೆ ಮಿಠಾಯಿ ಎಂಬ ಚಂದ್ರಮೋಹನ್ ನಿರ್ದೇಶನದ ಚಿತ್ರದಲ್ಲಿ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಪತ್ನಿ ಯಶಸ್ವಿನಿ ನಿರಂಜನ್ ನೊಂದಿಗೆ ಸು’ಖ ಸಂ’ಸಾರ ನಡೆಸುತ್ತಿರುವ ನಿರಂಜನ್ ದೇಶಪಾಂಡೆ, ತಮ್ಮದೇ ಆದ ವಿಶಿಷ್ಟ ರೆಸಾರ್ಟ್ ಒಂದನ್ನು ಕನಸಿನ ಕೂಸಾಗಿ ಕಟ್ಟಿದ್ದಾರೆ. ಬೆಟ್ಟ ಗುಡ್ಡ ರೆಸಾರ್ಟ್ ರಿಟ್ರೀಟ್ ಎಂದು ಹೆಸರಿಟ್ಟಿರುವ ಈ ಸ್ಥಳಕ್ಕೆ ಸಾಕಷ್ಟು ಇನ್ವೆಸ್ಟ್ಮೆಂಟ್ ಮಾಡಿರುವ ನಿರಂಜನ್ ದೇಶಪಾಂಡೆ ಅವರು ಇದು ನನ್ನ ಕನಸು ಎಂದು ಹೇಳುತ್ತಾರೆ.
ಬೆಂಗಳೂರಿನಿಂದ ಸರಿ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಮೂಲರಹಳ್ಳಿ , ಮೂಡಿಗಿರೆ ತಾಲೂಕು ಚಿಕ್ಕಮಂಗಳೂರು ಡಿಸ್ಟ್ರಿಕ್ಟ್ ನಲ್ಲಿ ಈ ಸುಂದರವಾದ ರೆಸಾರ್ಟ್ ನೆಲೆ ಕಂಡಿದೆ. ಪ್ರಕೃತಿಯ ಮಡಿಲಿನಲ್ಲಿ ಅತಿ ಸುಂದರವಾಗಿ ನೆಲೆಯೂರಿರುವ ಈ ರೆಸಾರ್ಟ್, ಪ್ರವಾಸಿಗರನ್ನು ಆ’ಕರ್ಷಿಸುತ್ತಿದೆ. ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ನಾವು ಹಲವಾರು ಬಾರಿ ಚಿಕ್ಕಮಗಳೂರಿಗೆ ಬಂದಿದ್ದೇವೆ. ಆದರೆ ಇಷ್ಟು ಹಚ್ಚಹಸುರಾಗಿ ಇರುವ ಸ್ಥಳದಲ್ಲಿ ಇಷ್ಟು ಅದ್ಭುತವಾದ ರೆಸಾರ್ಟ್ನ ಎಂದಿಗೂ ನೋಡಿಲ್ಲ ಎಂದು ಹೇಳುತ್ತಾರೆ.
ಟ್ರಕ್ಕಿಂಗ್ ನಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯಗಳಿರುವ ಈ ರೆಸಾರ್ಟಿಗೆ ನಿರಂಜನ್ ಅವರು ಗೊತ್ತು ಮಾಡಿರುವ ಬೆಲೆಯೂ ಕೂಡ ಕೈಗೆಟುಕುವ ದರವಾಗಿದೆ. ಸಾಮಾನ್ಯ ರೂಮುಗಳು, ವುಡನ್ ರೂಮುಗಳು ಹಾಗೂ ಟೆಂಟುಗಳು ಎಂಬ ಮೂರು ವಿಭಾಗಗಳಿವೆ. ಈ ರೆಸಾರ್ಟ್ ನಲ್ಲಿ ಉತ್ತಮ ಬೆಲೆಯೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಐದು ವರ್ಷದ ಕೆಳಗಿನ ಮಕ್ಕಳಿಗೆ ಇಲ್ಲಿ ಸಂಪೂರ್ಣ ಉಚಿತ ಹಾಗೂ ಐದರಿಂದ ಹತ್ತು ವರ್ಷದ ಮಕ್ಕಳಿಗೆ ಕೇವಲ ಅರ್ಧದಷ್ಟು ಚಾರ್ಜಸ್ ಕೊಟ್ಟರೆ ಸಾಕು.
ಅಷ್ಟೇ ಅಲ್ಲದೆ ಇದರಲ್ಲಿ ಆಹಾರವೂ ಕೂಡ ಸೇರಿರುತ್ತದೆ. ಸಸ್ಯಾಹಾರ ಹಾಗೂ ಮಾಂ’ಸಾಹಾರದ ಆಹಾರಗಳು ಇಲ್ಲಿ ಲಭ್ಯವಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ರುಚಿಕರವಾದ ಊಟ, ಸಂಜೆಗೆ ಟೀ ಮತ್ತು ಕುರುಕಲು ಹಾಗೂ ರಾತ್ರಿಗೆ ಭರ್ಜರಿ ಊಟ ಇಲ್ಲಿ ಸವಿಯಬಹುದಾಗಿದೆ. ಅಷ್ಟೇ ಅಲ್ಲದೆ ತಮಗೆ ಬೇಕಾಗಿರುವ ಸ್ಟಾರ್ಟರ್ ಗಳನ್ನು ಕೂಡ ಕೋರಿಕೆಯ ಮೇರೆಗೆ ಇಲ್ಲಿ ಆರ್ಡರ್ ಸಹ ಮಾಡಬಹುದಾಗಿದೆ.
ಇನ್ನು ಆಟಗಳ ವಿಚಾರಕ್ಕೆ ಬಂದರೆ ಇಲ್ಲಿ ಹೊರಾಂಗಣ ಆಟಗಳಾದ ಶಟಲ್ ಕಾಕ್, ಕ್ರಿಕೆಟ್, ವಾಲಿಬಾಲ್ ಹಾಗೂ ಮಡ್ ವಾಲಿಬಾಲ್ ಆಟಗಳು ಕೂಡ ಲಭ್ಯವಿದೆ. ಇನ್ನೂ ಒಳಾಂಗಣ ಕ್ರೀಡೆಗಳಾದ ಕೇರಮ್, ಚೆಸ್, ಸ್ನೇಕ್ ಅಂಡ್ ಲಾಡರ್, ಲೂಡೋ, ಜಂಗ, ವೂನೋ, ಹೀಗೆ ಹಲವಾರು ಆಟಗಳನ್ನು ಆಡಬಹುದಾಗಿದೆ. ಇನ್ನು ಸಮಯದ ವಿಚಾರಕ್ಕೆ ಬರುವುದಾದರೆ 11.00 ಗಂಟೆಯಿಂದ ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಯವರೆಗೂ ಈ ರೆಸಾರ್ಟ್ನಲ್ಲಿ ಇರಬಹುದಾಗಿದೆ. ವಿಶೇಷವಾಗಿ ಈ ಪ್ರಾಪರ್ಟಿ ಒಳಗಡೆ ಜರಿ ಹಾಗೂ ತೊರೆಗಳು ಸಹ ಇವೆ. ಅಷ್ಟೇ ಅಲ್ಲ, ಬೆಟ್ಟವು ಕೂಡ ಇದೆ. ಟ್ರೆಕ್ಕಿಂಗ್, ಸೈಟ್ ಸೀಯಿಂಗ್, ವಾಟರ್ ಫಾಲ್ಸ್, ಆಫ್ ರೋಡ್ ಜೀಪ್ ಡ್ರೈವಿಂಗ್ ಇದೆಲ್ಲವನ್ನು ಎಕ್ಸ್ಟ್ರಾ ಚಾರ್ಜ್ ನೊಂದಿಗೆ ಪಡೆದುಕೊಳ್ಳಬಹುದಾಗಿದೆ.
View this post on Instagram
ಖ್ಯಾತ ನಟ ನಟಿಯರಾದ ನೀತು ಶೆಟ್ಟಿ, ಶಾಲಿನಿ ಸತ್ಯನಾರಾಯಣ, ನೆನಪಿರಲಿ ಖ್ಯಾತಿಯ ವರ್ಷ, ಕಲರ್ಸ್ ಕನ್ನಡದ ನಟ ನಟಿಯರಾದ ಸುಪ್ರೀತಾ ಸತ್ಯನಾರಾಯಣ, ಹಾಗೂ ಇನ್ನೂ ಹಲವಾರು ನಟ ನಟಿಯರು ಈ ರೆಸಾರ್ಟ್ ಗೆ ಭೇಟಿ ಕೊಟ್ಟು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಗೆಳೆಯರ ತಂಡಗಳಿಗೆ, ಹೊಸ ಜೋಡಿಗಳಿಗೆ ಹಾಗೂ ಫ್ಯಾಮಿಲಿಗೂ ಸಹ ಇದು ಉತ್ತಮ ಸ್ಥಳವಾಗಿದೆ ಎಂದು ಬಂದಿರುವ ಪ್ರತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಿಂದ ಲಾಂಗ್ ಡ್ರೈವ್ ಬರುವ ಯುವಕರಿಗೂ ಕೂಡ ಈ ಸ್ಥಳವು ಉತ್ತಮ ಸ್ಥಳವಾಗಿದೆ.
ಒಟ್ಟಾರೆ ನಿಸರ್ಗದ ಮಡಿಲಿನಲ್ಲಿ ಅದ್ಭುತವಾಗಿ ಸೃಷ್ಟಿಸಿರುವ ಈ ಒಂದು ಬೆಟ್ಟ-ಗುಡ್ಡ ರಿಟ್ರೀಟ್ ರೆಸಾರ್ಟ್ ನ ಬೆಲೆ ಹೀಗಿದೆ. ಸಾಮಾನ್ಯ ರೂಂಗಳು ಆದರೆ ಒಬ್ಬ ವ್ಯಕ್ತಿಗೆ ಎರಡು ಸಾವಿರ ರೂಗಳು, ಮರದ ರೂಮುಗಳು ಅಂದರೆ ವುಡನ್ ರೂಮುಗಳು ಆದರೆ ಒಬ್ಬ ವ್ಯಕ್ತಿಗೆ ಮೂರು ಸಾವಿರ ರೂಗಳು, ಹಾಗೂ ಟೆಂಟ್ ಬೇಕಾದರೆ ಒಬ್ಬ ವ್ಯಕ್ತಿಗೆ ಸಾವಿರದ ಐನೂರು ರೂಪಾಯಿ ಊಟೋಪಚಾರದ ಸಮೇತ ಇಲ್ಲಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಇನ್ಸ್ಟಾಗ್ರಾಂ ನಲ್ಲಿ ಇರುವ ಬೆಟ್ಟ-ಗುಡ್ಡ ರಿಟ್ರೀಟ್ ಎಂಬ ಪೇಜನ್ನು ಸಂಪರ್ಕಿಸಬಹುದು. ಹಾಗೂ ನೀಡಿರುವ ನಂಬರ್ಗೆ ಕರೆ ಮಾಡಬಹುದು 94482 79150.