ಜೀವನದಲ್ಲಿ ಸಮೃದ್ಧಿಯನ್ನು ಪಡೆಯಲು ಅಷ್ಟ ಲಕ್ಷ್ಮಿಯರನ್ನು ಪೂಜಿಸುವ ಸರಿಯಾದ ವಿಧಾನ..!!

0
3600

ಪ್ರಸಿದ್ಧಿ ಪಡೆದ ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಒಂದು, ಕಾರಣ ಸಮಸ್ತ ಸಂಪತ್ತಿಗೂ ಆದಿ ದೇವತೆಯಾಗಿರುವ ಲಕ್ಷ್ಮಿಯನ್ನು ಪೂಜಿಸಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂಬುವುದು ನಂಬಿಕೆ, ಸಂಪತ್ತು ಎಂದರೆ ಬರಿ ಹಣ ವಲ್ಲದೆ, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ ಹಾಗೂ ವಿಜಯ ಗಳಿಸುವ ಅಷ್ಟ ಐಶ್ವರ್ಯ ಅರ್ಥಾತ್ ಎಂಟು ವಿಧಗಳ ಐಶ್ವರ್ಯ ಎಂದು ಕರೆಯಲಾಗುತ್ತದೆ.

ಸಮುದ್ರ ಮಂಥನದಿಂದ ಉದ್ಭವಿಸಿದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಕ್ಷೀರಸಾಗರ ತನಯೇ ಎಂದು ಕರೆಯಲಾಗುತ್ತದೆ, ಲಕ್ಷ್ಮಿ ದೇವಿ ಶ್ರೀ ರಾ ಸಾಗರದಲ್ಲಿ ಶ್ವೇತ ವರ್ಣದಲ್ಲಿ ಅವತರಿಸಿದ್ದಾರೆ ಆದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುವ ಪದ್ಧತಿ ಇದೆ.

ಕುಂಕುಮದ ಅರ್ಚನೆ ಮಾಡುವ ಮೂಲಕ ಲಕ್ಷ್ಮೀದೇವಿಯನ್ನು ಆವಾಹನೆ ಮಾಡಿ 12 ಗಂಟಿನ ದಾರವನ್ನು ದೇವರ ಮುಂದೆ ಇಟ್ಟು ಪೂಜಿಸಿ, ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ, ಈ ರೀತಿಯಲ್ಲಿ ಅಷ್ಟ ಲಕ್ಷ್ಮಿ ಪೂಜೆ ಮಾಡುವುದರಿಂದ ಸಕಲ ದಾರಿದ್ರ್ಯ ನಿವಾರಣೆಗೆ ಮನೆಯಲ್ಲಿ 8 ರೀತಿಯ ಐಶ್ವರ್ಯ ತುಂಬಿಕೊಳ್ಳುತ್ತದೆ.

ಇಷ್ಟಾರ್ಥ ಸಿದ್ಧಿ ಹಾಗೂ ಮನಃಶಾಂತಿ ಪಡೆಯಲು ಇದೊಂದು ವ್ರತ ಮಾಡಿದರೆ ಸಾಕು.

ಆಧುನಿಕತೆಯ ಭರದಲ್ಲಿ ಜೀವನ ಸಾಗಿಸು ವುದು ತಪ್ಪಲ್ಲ ಆದರೆ ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಆಚರಣೆಗಳನ್ನು ಬಿಡುವುದು ತಪ್ಪು, ಪ್ರತಿಯೊಂದು ಆಚರಣೆಗೂ ಅದರದೆ ಆದ ಅರ್ಥ ಹಾಗೂ ಮಹತ್ವ ಇದ್ದೇ ಇರುತ್ತದೆ, ಎಷ್ಟೇ ಆಧುನಿಕತೆ ಬಂದರು ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟ, ಅದರಂತೆ ನಿಮ್ಮ ಇಷ್ಟಾರ್ಥಗಳು ನೆರವೇರಲಿ ಹಾಗೂ ಮನಸ್ಸಿಗೆ ಶಾಂತಿಯನ್ನು ಪಡೆಯಲು ಇಂದು ನಾವು ತಿಳಿಸುವ ವ್ರತವನ್ನು ಮಾಡಿದರೆ ಸಾಕು.

ಈ ವ್ರತದ ಹೆಸರು ಪ್ರದೋಷ ವ್ರತ, ಅತ್ಯಂತ ವಿಶೇಷವಾದ ಹಾಗೂ ಧರ್ಮದಲ್ಲಿ ಮಹತ್ವವನ್ನು ಪಡೆದಿರುವ ವ್ರತಗಳಲ್ಲಿ ಇದು ಒಂದು, ಪ್ರತಿ ತಿಂಗಳು ಶುಕ್ಲ ಮತ್ತು ಕೃಷ್ಣ ತ್ರಯೋದಶಿ ಯ ಸೂರ್ಯಾಸ್ತದ ನಂತರ ಬರುವ ಮೂರು ಗಳಿಗೆಗಳ ಕಾಲಕ್ಕೆ ಪ್ರದೋಷ ಎಂದು ಕರೆಯಲಾಗುತ್ತದೆ.

ಈ ಪ್ರದೋಷ ವ್ರತವು ಶಿವ ಹಾಗೂ ಪಾರ್ವತಿ ದೇವತೆಗಳ ಉಪಾಸನೆ ಗೆ ಸಂಬಂಧ ಪಟ್ಟಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿರುವ ಪ್ರದೋಷ ವ್ರತ ಉಪಾಸನಾ ಸಮಯದಲ್ಲಿ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಜಪವನ್ನು 108 ಬಾರಿ ಜಪಿಸಿದರೆ ಇಷ್ಟಾರ್ಥಗಳು ನೆರವೇರಿ ಮನಶಾಂತಿ ಪಡೆಯಬಹುದು ಎಂಬ ನಂಬಿಕೆ ಇದೆ.
ಹಾಗೂ ಪ್ರದೋಷದ ಮರುದಿನ ಶ್ರೀ ಮಹಾವಿಷ್ಣುವಿನ ಪೂಜೆ ಮಾಡುವುದು ಸರ್ವಶ್ರೇಷ್ಠ, ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ, ಕೃಷ್ಣ ಪಕ್ಷದಲ್ಲಿ ಶನಿವಾರದಂದು ಪ್ರದೋಷ ಬಂದರೆ ಅದನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here