ಕನ್ನಡದಲ್ಲಿ ಬಹುಕೋಟಿ ಚಿತ್ರ ನಿರ್ಮಾಣವಾಗುವುದು ಬಹಳ ಕಡಿಮೆ ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಕೋಟಿ ಚಿತ್ರಗಳು ನಿರ್ಮಾಣವಾಗುತ್ತಿದೆ, ಅದರ ಸಂಗತಿ ಮೊದಲು ಬರುವುದು ಕೆಜಿಎಫ್ ಚಿತ್ರ, ಈಗ ಅದೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವು ಅದ್ದೂರಿಯಾಗಿ ಪಂಚ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ, ಇತ್ತೀಚಿಗೆ ರಕ್ಷಿತ್ ಶೆಟ್ಟಿ ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು, ಈ ಚಿತ್ರದ ಟ್ರೈಲರ್ ನೋಡಿ ಇಡೀ ದೇಶವೇ ಹೆಮ್ಮೆ ಪಟ್ಟರು.
ಇದಾದನಂತರ ರಕ್ಷಿತ್ ಶೆಟ್ಟಿ ಅವರು ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಮನಸ್ಸನ್ನು ಇನ್ನಷ್ಟು ಸಿನಿಮಾಕ್ಕಾಗಿ ಕಾಯುವಂತೆ ಮಾಡಿದರು, ಇಡೀ ದೇಶವೇ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕೂರುವಂತೆ ಮಾಡಿದ್ದಾರೆ, ಕಾರಣ ಈ ಹಾಡಿನಲ್ಲಿದ್ದ ಕ್ವಾಲಿಟಿ, ಹೌದು ಈ ಹಾಡನ್ನು ನೋಡಿದವರು ಚಿತ್ರದ ಟ್ರೈಲರ್ ನೋಡಿದವರು ಈ ಸಿನಿಮಾದ ಬಜೆಟ್ ಕಡಿಮೆ ಇರಲು ಸಾಧ್ಯವೇ ಇಲ್ಲ ಎಂದು ಮಾತನಾಡಲು ಶುರು ಮಾಡಿದರು, ಇನ್ನು ಹಲವರಂತೆ ಒಂದು ಹೆಜ್ಜೆ ಮುಂದೆ ಹೋಗಿ ಈ ಸಿನಿಮಾಕ್ಕಾಗಿ 45 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.
ಈ ರೀತಿಯ ಮಾತುಗಳು ಕೇಳಿ ಬರಲು ಹಲವು ಕಾರಣಗಳಿವೆ, ಕಿರಿಕ್ ಪಾರ್ಟಿ ಬಿಡುಗಡೆಯಾದ ನಂತರ ರಕ್ಷಿತ್ ಶೆಟ್ಟಿ ಇನ್ಯಾವ ಸಿನಿಮಾದಲ್ಲಿ ನಟನೆ ಮಾಡಿಲ್ಲ, ಅಂದರೆ ಮೂರು ವರ್ಷಗಳಿಂದ ಅವನೇ ಶ್ರೀಮನ್ನಾರಾಯಣ ಸಿನಿಮಾ ಮಾಡುತ್ತಿದ್ದಾರೆ, ಹಾಗೂ ಇಂದು ಟ್ರೈಲರ್ ಮತ್ತೆ ಹಾಡು ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ ಹಾಗಿದ್ದಮೇಲೆ ಕಡಿಮೆ ಆಗಲು ಹೇಗೆ ಸಾಧ್ಯ ಹೇಳಿ, ಆದರೂ ಈ ಸಿನಿಮಾಕ್ಕೆ ಖರ್ಚಾಗುವುದು ಕೇವಲ 23 ಕೋಟಿ ಅಷ್ಟೇ, ಈ ಬಗ್ಗೆ ಖುದ್ದು ರಕ್ಷಿತ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ಪ್ರೊಡಕ್ಷನ್ ಟೀಮ್ ಅಷ್ಟು ಚೆನ್ನಾಗಿ ಕೆಲಸ ಮಾಡಿದೆ, ಅದಕ್ಕಾಗಿ ನಾವು 23 ಕೋಟೆಯಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿದ್ದೇವೆ ಎಂದರು.
ಇನ್ನು ಈ ಮಾತಿಗೆ ಪುಷ್ಟಿ ನೀಡುವಂತೆ ಚಿತ್ರದ ನಿರ್ಮಾಪಕರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ಶುರುವಾಗುವಾಗ ದೊಡ್ಡಮಟ್ಟದ ಬಜೆಟ್ ಇಲ್ಲ ಅಂದ್ರೆ ಈ ಸಿನಿಮಾ ಮಾಡೋಕೆ ಆಗಲ್ಲ ಎಂದು ಹಲವರು ನನ್ನ ಕಾಲುಗಳೆದಿದ್ದರೂ ಆದರೆ ಇಂದು ನಾವು ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದೇನೆ ಎಂದು ಹಂಚಿಕೊಂಡಿದ್ದರು, ಅದೇನೇ ಇರಲಿ ಈ ಸಿನಿಮಾದ ಬಗ್ಗೆ ನಿಮಗೆಷ್ಟು ಕುತೂಹಲವಿದೆ ಹಾಗೂ ನೀವು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಮೊದಲನೇ ದಿನ ನೋಡಲಿದ್ದೀರ ನಿಮ್ಮ ಅನಿಸಿಕೆಯನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.