ಯಾವ ಯಾವ ಅಂಗಗಳನ್ನು ಮನುಷ್ಯ ದಾನ ಮಾಡಬಹುದು..?

0
3636

ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ.

ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಸ್ಥಿತಿಯನ್ನು ಮಸ್ತಿಷ್ಕ ಮೃತ ಎಂದು ಪರಿಗಣಿಸಲಾಗುತ್ತದೆ ಆದರೆ ಇದನ್ನು ನಾಲ್ವರು ತಜ್ಞವೈದ್ಯರ ತಂಡವು ಧೃಢಪಡಿಸಬೇಕಾಗುತ್ತದೆ.

ಮನುಷ್ಯನ ಶರೀರದ ಪ್ರಮುಖ ಅಂಗಗಳಾದ ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು, ಯಕೃತ್, ಮೇದೋಜೀರಕ ಗ್ರಂಥಿ ಇತ್ಯಾದಿಗಳನ್ನು ಮಸ್ತಿಷ್ಕ ಮೃತರಾದಲ್ಲಿ ಮಾತ್ರ ದಾನ ಮಾಡಬಹುದು, ಆದರೆ ರೋಗಿಯ ಸಮೀಪ ಸಂಬಂಧಿಗಳು ತಾವು ಜೀವಂತರಾಗಿರುವಾಗಲೇ ಯಕೃತ್ತಿನ ಒಂದು ಭಾಗ ಅಥವಾ ಒಂದು ಮೂತ್ರಪಿಂಡವನ್ನು, ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನಿನನ್ವಯ ದಾನ ಮಾಡಬಹುದಾಗಿದೆ, ಆದರೆ ದೃಷ್ಟಿಹೀನರಿಗೆ ಅತ್ಯವಶ್ಯಕ ಎನಿಸುವ ಕಾರ್ನಿಯಾ ಹೃದಯದ ಕವಾಟಗಳು ಚರ್ಮ ಹಾಗೂ ಎಲುಬುಗಳನ್ನು ಒಬ್ಬ ವ್ಯಕ್ತಿ ಸ್ವಾಭಾವಿಕವಾಗಿ ಮೃತಪಟ್ಟ ಬಳಿಕವೇ ದಾನ ಮಾಡಬೇಕಾಗುವುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800

LEAVE A REPLY

Please enter your comment!
Please enter your name here