ಸಕ್ಕರೆ ಕಾಯಿಲೆಯು ಬಂದರೆ ಮನುಷ್ಯನ ಜೀವನ ಶೈಲಿಯನ್ನು ಬದಲಿಸಿ ಕೊಳ್ಳಬೇಕಾಗುತ್ತದೆ, ತಿನ್ನುವ ಆಹಾರ ಬದಲಿಸಿ ಕೊಳ್ಳಬೇಕಾಗುತ್ತದೆ, ಹಾಗೂ ದೇಹದ ಆರೋಗ್ಯ ಏರುಪೇರಾಗುತ್ತದೆ, ಸಕ್ಕರೆ ಕಾಯಿಲೆ ಬಂದವರು ಸಿಹಿ ಪದಾರ್ಥವನ್ನು ತಿನ್ನುವುದು ಬಿಡಬೇಕಾಗುತ್ತದೆ, ಇಂತಹ ಕಾಯಿಲೆಯನ್ನು ಬರದಂತೆ ನೋಡಿಕೊಳ್ಳುವುದು ಉತ್ತಮ ಹಾಗೂ ಇಂದು ನಾವು ತಿಳಿಸುವ ಕೆಲವು ಲಕ್ಷಣಗಳು ನಿಮ್ಮಲ್ಲಿ ಕಂಡರೆ ಈ ಕೂಡಲೇ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಶುಗರ್ ಟೆಸ್ಟ್ ಮಾಡಿಸಿ ಕೊಳ್ಳಬೇಕು.
ಸಾಮಾನ್ಯವಾಗಿ ಒಂದು ದಿನದಲ್ಲಿ ಮೂರು ಬಾರಿ ಮೂತ್ರ ವಿಸರ್ಜನೆ ಮಾಡಿದರೆ ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆ ಎಂದು ಅರ್ಥ ಹಾಗೂ ಮೂರಕ್ಕಿಂತ ಹೆಚ್ಚಿನ ಮಾಡಿ ನೀವು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಹಾಗೂ ಅತಿಯಾದ ಬಾಯಾರಿಕೆ ನಿಮಗೆ ಆಗುತ್ತಿದ್ದರೆ ಖಂಡಿತವಾಗಲೂ ಸಕ್ಕರೆ ಖಾಯಿಲೆಯ ಲಕ್ಷಣವೇ.
ದೇಹದ ತೂಕ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದ ಹಾಗೆ ಅತಿಯಾಗಿ ಕಡಿಮೆಯಾಗುವುದು ಹಾಗೂ ದೇಹ ತೆಳ್ಳಗಾಗುವುದು, ಈ ಲಕ್ಷಣಗಳು ಏಕೆಂದರೆ ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ ಅಂಶ ತೂಕ ಕಡಿಮೆ ಮಾಡಿ ಕೊಳ್ಳುವಂತೆ ಮಾಡುತ್ತದೆ.
ಸಕ್ಕರೆ ಕಾಯಿಲೆ ಬಂದಾಗ ಶರೀರದಲ್ಲಿ ಸಕ್ಕರೆ ಅಂಶವು ಪ್ರತಿದಿನ ಏರಿಳಿತವನ್ನು ಕಾಣುತ್ತಿರುತ್ತದೆ ಇಂತಹ ಸಮಯದಲ್ಲಿ ನಿಮಗೆ ವಿಪರೀತ ಹೊಟ್ಟೆ ಹಸಿವಾಗುವ ಅನುಭವಗಳು ಆಗುತ್ತದೆ.
ಚರ್ಮವು ಇದ್ದಕ್ಕಿದ್ದ ಹಾಗೆ ಒಣಗಲು ಶುರು ಮಾಡುವುದು ಹಾಗೂ ಚರ್ಮದಲ್ಲಿ ವಿನಾಕಾರಣ ತುರಿಕೆ ಬಂದರೆ ಇದು ಮಧುಮೇಹದ ಲಕ್ಷಣವೇ.
ದೇಹದಲ್ಲಿ ಸಣ್ಣ ಗಾಯಗಳಾದರೂ ವಾಸಿಯಾಗಲು ಬಹಳ ದಿನವಾದರೂ ವಾಸಿಯಾಗದೆ ಹಾಗೆ ಇದ್ದರೆ ಹಾಗೂ ಕೀವು ತುಂಬುತ್ತಿದ್ದರೆ ಇದು ಸಹ ಸಕ್ಕರೆ ಖಾಯಿಲೆಯ ಲಕ್ಷಣವೇ.
ಸಕ್ಕರೆ ಕಾಯಿಲೆ ಬಂದರೆ ಬೇಗನೆ ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುತ್ತೀರಿ ಹಾಗೂ ದೇಹ ಬೇಗನೆ ಸುಸ್ತಾಗುತ್ತದೆ.
ಸಕ್ಕರೆ ಅಂಶವು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತದೆ ಇದರಿಂದ ಕಣ್ಣು ದೃಷ್ಟಿ ಸಮಸ್ಯೆ ಕಾಡಲು ಶುರು ಮಾಡುತ್ತದೆ.