ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಸಿಗುವ ಇವುಗಳನ್ನು ಬಳಸಿ ಅಸಿಡಿಟಿಗೆ ಹೇಳಿ ಗುಡ್ ಬಾಯ್..!!

0
3417

ಅಸಿಡಿಟಿ ಸಮಸ್ಯೆಗೆ ಯಾವುದೇ ವಯೋಮಿತಿ ಇರುವುದಿಲ್ಲ, ಪ್ರತಿಯೊಬ್ಬರಿಗೂ ಪ್ರತಿ ವಯಸ್ಸಿನಲ್ಲೂ ಬರಬಹುದು, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಗ್ಯಾಸ್ ನಂತಹ ಸಮಸ್ಯೆಗಳು ಇಂದಿನ ಆಧುನೀಕತೆಯ ಫಾಸ್ಟ್ ಫುಡ್ ಲೈಫ್ ಸ್ಟೈಲ್ ಗಳಿಂದ ಸಾಮಾನ್ಯವಾಗಿ ಬರುತ್ತದೆ, ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ಮನೆಯಲ್ಲಿಯೇ ದೊರಕುವ ಇವುಗಳನ್ನು ನಾವು ಹೇಳುವ ರೀತಿ ಬಳಸಿ ನೋಡಿ.

ಹಾಲು : ಪ್ರತಿದಿನ ಬಿಸಿ ಹಾಲು ಕುಡಿಯುವ ಅಭ್ಯಾಸ ಬಿದ್ದವರು ಅದರ ಬದಲಿಗೆ ಸಕ್ಕರೆ ಬೆರೆಸದ ತಣ್ಣಗಿನ ಹಾಲನ್ನು ಕುಡಿಯಿರಿ ಇದು ದೇಹದಲ್ಲಿರುವ ಆಸಿಡ್ ಅಂಶವನ್ನೂ ಹೀರಿಕೊಳ್ಳುತ್ತದೆ ಹಾಗೂ ಹೊಟ್ಟೆ ಉರಿ ಕಡಿಮೆಯಾಗುತ್ತದೆ.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಇರುವುದರಿಂದ ಆಸಿಡಿಟಿ ಸಮಸ್ಯೆಯಿಂದ ಪಾರಾಗಲು ಉತ್ತಮ ಆಹಾರ, ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಫೈಬರ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೇಹದ ಆರೋಗ್ಯಕ್ಕೂ ಬಾಳೆಹಣ್ಣು ಬಹಳ ಉತ್ತಮ.

ಮಜ್ಜಿಗೆ : ಎದೆ ಉರಿ ಅಥವಾ ಹೊಟ್ಟೆ ಹುರಿ ಕಾಣಿಸಿಕೊಂಡಾಗ ತಣ್ಣಗಿನ ಮಜ್ಜಿಗೆ ಕುಡಿಯುವುದು ಒಳ್ಳೆಯದು, ಮಜ್ಜಿಗೆ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಆಗಾಗ ಎಳನೀರು ಕುಡಿಯುವುದು ಉತ್ತಮ ಸಾಧ್ಯವಾದರೆ ಮಸಾಲೆ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿ.

ಕಲ್ಲಂಗಡಿ ಹಣ್ಣು : ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಕಲ್ಲಂಗಡಿ ಹಣ್ಣನ್ನು ತಪ್ಪದೇ ಸೇವಿಸಿ, ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳಿವೆ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಹಾಗೂ ಹೇರಳವಾದ ಫೈಬರ್ ಅಂಶವನ್ನು ಸಹ, ಕಲ್ಲಂಗಡಿ ಮಾತ್ರವಲ್ಲದೆ ಸೇಬು ಮತ್ತು ಪಪ್ಪಾಯ ಹಣ್ಣನ್ನು ತಿನ್ನುವುದರಿಂದಲೂ ಆಸಿಡಿಟಿ ಕಡಿಮೆಯಾಗುತ್ತದೆ.

ಅಸಿಡಿಟಿ ಸಮಸ್ಯೆ ಬಗ್ಗೆ ನೀಡಿದ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here