ಶಾಕಿಂಗ್ ವರದಿ ತುಮಕೂರು ಫ್ಲೈ ಓವರ್ ಜ್ವರದಿಂದ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ! ಮುಂದೆ ಏನಾಯ್ತು ನೋಡಿ

0
4610

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ.

ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಸುಳಿದಿಲ್ಲ. ಇತ್ತ ಕಳೆದ ಮೂರು ಗಂಟೆಯಿಂದ ಅಂಬುಲೆನ್ಸ್ ಗೆ ಎಷ್ಟೇ ಕಾಲ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

ಪ್ಲೇ ಓವರ್ ಮೇಲೆ ಬಿದ್ದಿರುವ ವ್ಯಕ್ತಿ ರಕ್ಷಣೆಗೆ ಪೀಣ್ಯಾ ಪೊಲೀಸರು ಹರಸಾಹಸ ಪಡುತ್ತಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರುತ್ತಿಲ್ಲ. ಹೀಗಾಗಿ ಬೆಂಗಳೂರಂತ ಸಿಟಿಯಲ್ಲಿ ಒಂದು ಆಂಬ್ಯೂಲೆನ್ಸ್ ಬರಲು ಗಂಟೆಗಳು ಬೇಕಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಮುಂಜಾನೆಯಿಂದ ಇಲ್ಲಿಯವರೆಗೂ ವ್ಯಕ್ತಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ. ಯಾರೊಬ್ಬರು ವ್ಯಕ್ತಿಯ ರಕ್ಷಣೆಗೆ ಮುಮದಾಗುತ್ತಿಲ್ಲ. ಹೀಗಾಗಿ ಬಿದ್ದಿರುವ ವ್ಯಕ್ತಿಗೆ ಹೊಯ್ಸಳ ವಾಹನವನ್ನೇ ಅಡ್ಡಲಾಗಿ ನಿಲ್ಲಿಸಿ ಕಾವಲು ಕಾಯಲಾಗಿದೆ.

ಮೂಲ : ಪಬ್ಲಿಕ್ ಟಿವಿ

LEAVE A REPLY

Please enter your comment!
Please enter your name here