ಅತಿಯಾದ ಯೋಚನೆ ಮಾಡು ವುದರಿಂದ ಅಥವಾ ಅತಿಯಾದ ಕೆಲಸದ ಒತ್ತಡದಿಂದಲೋ ತಲೆನೋವು ಬರಬಹುದು, ಇಂದು ಹಲವು ಬಗೆಯ ತಲೆನೋವುಗಳಿಗೆ ತಕ್ಕಂತಹ ಮನೆ ಔಷಧಗಳ ಬಗ್ಗೆ ತಿಳಿಯೋಣ.
ಸಾಮಾನ್ಯ ತಲೆನೋವು : ದಾಲ್ಚಿನ್ನಿ ಚಕ್ಕೆ ಯನ್ನು ಮಂದವಾಗಿ ನಿಂಬೆಯ ರಸದಲ್ಲಿ ಅರೆದು ವೀಳೆದೆಲೆಯ ಮೇಲಿಟ್ಟು ಅರಳೆ ಎಣ್ಣೆಯ ದೀಪದಲ್ಲಿ ಬೆಚ್ಚಗೆ ಮಾಡಿ ಸಹನೀಯವಾಗಿ ಬೆಚ್ಚಗಿರುವ ಆಗಲೇ ಹಣೆಗೆ ಲೇಪಿಸುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
ಮೆಣಸು ಮತ್ತು ಹಕ್ಕಿಯನ್ನು ಗದುಗದ ಸೊಪ್ಪಿನಲ್ಲಿ ಹರಿದು ಬೆಚ್ಚಗೆ ಮಾಡಿ ಹಣೆಗೆ ಲೇಪಿಸುವುದರಿಂದ ತಲೆನೋವು ಮಾಯವಾಗುತ್ತದೆ.
ಸ್ವಲ್ಪ ತುಂಬೆಯ ಚಿಗುರು ಹಾಗೂ ಒಂದೆರಡು ಮೆಣಸಿನ ಕಾಳುಗಳನ್ನು ನೀರಿನಿಂದ ನನಗೆ ಅರೆದು ಮೂಗಿನಲ್ಲಿ ಕೆಲವು ಹನಿಗಳನ್ನು ಹಾಕುವುದರಿಂದ ತಲೆನೋವು ನಿಲ್ಲುತ್ತದೆ, ಈ ರೀತಿ ಎರಡರಿಂದ ಮೂರು ದಿನ ಮಾಡಿದರೆ ಅತ್ಯುತ್ತಮ ಪರಿಣಾಮ ಸಿಗುತ್ತದೆ.
ಶುಂಠಿಯನ್ನು ಮೇಕೆಯ ಹಾಲಿನಲ್ಲಿ ತೇದು ನಾಲ್ಕು ಕೊಟ್ಟು ಬೆಳಗ್ಗೆ ಮೂಗಿನಲ್ಲಿ ಹಾಕಿಕೊಳ್ಳಬೇಕು, ತುಪ್ಪ ಮತ್ತು ಜೇನು ಸೇರಿಸಿ ನಸ್ಯ ಮಾಡುವುದರಿಂದ ತಲೆನೋವು ಮಾಯವಾಗುತ್ತದೆ.
ಅರ್ಧ ತಲೆ ನೋವಿಗೆ ಉಪಶಮನಗಳು : ಕೆಂಪು ಮೂಲಂಗಿ ಬೆಳಗ್ಗೆ ಸ್ವಲ್ಪ ತುಪ್ಪ ಸವರಿ ಕೆಂಡದ ಮೇಲೆ ಕಾಯಿಸಿ ಅದರ ರಸವನ್ನು ಮೂಗು ಮತ್ತು ಕಿವಿ ಯಲ್ಲಿ ಹಿಂದೂ ವುದರಿಂದ ಅರ್ಧ ತಲೆನೋವು ನಿವಾರಣೆಯಾಗುತ್ತದೆ, ಹೀಗೆ ದಿನಕ್ಕೆ ಒಮ್ಮೆಯಂತೆ ಅಗತ್ಯ ಕಾಣುವ ತನಕ ಮಾಡಿ.
ಅಸಾಧ್ಯ ತಲೆ ನೋವಿಗೆ ಮನೆ ಮದ್ದು : ಅಸಾಧ್ಯ ತಲೆ ನೋವು ಕಾಡುತ್ತಿದ್ದರೆ ಕರಿಯ ತುಂಬೇರಸ, ಮೆಣಸಿನ ಕಾಳು ಮತ್ತು ಬೆಳ್ಳುಳ್ಳಿಗಳನ್ನು ಸೇರಿಸಿ ಅರೆದು ಹಣೆಗೆ ಲೇಪ ಹಾಕಬೇಕು, ಅಥವಾ ಗೋಡಂಬಿ ಎಲೆಯನ್ನು ಅರೆದು ಹಣೆಗೆ ಪಟ್ಟಿ ಹಾಕುವುದರಿಂದ ಅತಿಯಾದ ತಲೆನೋವು ಮಾಯವಾಗುತ್ತದೆ.
ಶೀತದ ತಲೆನೋವು ಮಾಯವಾಗಲು : ಸಾಸಿವೆಯನ್ನು ಗೋಮೂತ್ರದಲ್ಲಿ ಅರೆದು ಬಿಸಿ ಮಾಡಿ ಹಣೆಗೆ ಮತ್ತು ನೆತ್ತಿಗೆ ಲೇಪಿಸುವುದರಿಂದ ಶೀತದ ತಲೆನೋವು ಮಾಯವಾಗುತ್ತದೆ, ಅಗತ್ಯ ಕಂಡಷ್ಟು ದಿನ ಮಜ್ಜಿಗೆಯಲ್ಲಿ ಸ್ವಲ್ಪ ಶಂಖವನ್ನು ತೇಯ್ದು ಕುಡಿಯುತ್ತಿರಬೇಕು.
ಎಲ್ಲಾ ಬಗೆಯ ತಲೆನೋವು ವಾಸಿಯಾಗಲು : ಗಟ್ಟಿ ಮೊಸರು ಮತ್ತು ಅಷ್ಟೇ ತುಪ್ಪವನ್ನು ಚೆನ್ನಾಗಿ ಕಲಸಿ ಹಣೆಗೆ ಲೇಪಿಸುವುದರಿಂದ ಎಲ್ಲಾ ಬಗೆಯ ತಲೆನೋವು ಮಾಯವಾಗುತ್ತದೆ.
ಸಿಪ್ಪೆ ತೆಗೆದ ಹೊಂಗೆ ಬೀಜ, ನುಗ್ಗೆ ಬೀಜ, ತಾಳೆಸ ಪತ್ರೆ, ಸಾಸಿವೆ, ಲವಂಗ ಚಕ್ಕೆ, ದಾಲ್ಚಿನ್ನಿ ಇವುಗಳನ್ನೆಲ್ಲ ಸಮತೂಕ ಸೇರಿಸಿ, ನಯವಾಗಿ ಬರೆದಿಟ್ಟುಕೊಂಡು ನಸ್ಯದಂತೆ ಮೂಗಿಗೆ ಇರಿಸುತ್ತಿದ್ದರು ಯಾವುದೇ ತಲೆ ನೋವ್ ಇದ್ದರೂ ವಾಸಿಯಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.