ಟೈಗರ್’ಗೆ ದೊಡ್ಡ ಶಾಕ್ ಕೊಟ್ಟ ದಾಸ ದರ್ಶನ್

0
2088

ವಿನೋದ್ ಪ್ರಭಾಕರ್ ಹುಟ್ಟಿದ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಇಷ್ಟು ವರ್ಷಕ್ಕಿಂತ ಈ ವರ್ಷ ಅವರು ಬಹಳ ಬಿಜಿಯಾಗಿದ್ದಾರೆ. ಟೈಸನ್‌ ಯಶಸ್ಸು ಇವರಿಗೆ ಈ ಮಟ್ಟದ ಅವಕಾಶ ಕಲ್ಪಿಸಿರುವುದರ ಜೊತೆಗೆ ದರ್ಶನ್’ರವೃ ಸಪೋರ್ಟ್’ನಿಂದ ಇವರಿಗೆ ಚಿತ್ರರಂಗದಲ್ಲಿ ಒಂದು ನೆಲೆ ಕಲ್ಪಿಸದೆ. ಎಂದಿನಂತೆ ಟೈಗರ್ ಪ್ರಭಾಕರ್ ಆಶೀರ್ವಾದ ಇದ್ದೆ ಇದೆ. ಅವರ ಅಭಿಮಾನಿಗಳು ಅಟೊಮ್ಯಾಟಿಕ್ ಆಗಿ ಇವರ ಅಭಿಮಾನಿಗಳಾಗಿದ್ದಾರೆ.

ಇವತ್ತು ಅವರು ಹುಟ್ಟಿದ ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ನಾನು ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇರುವುದಕ್ಕೆ ಕಾರಣ ನಮ್ಮ ಅಪ್ಪಾಜಿ ಟೈಗರ್ ಪ್ರಭಾಕರ್ ಕಾರಣ. ಅವರ ಹೆಸರನ್ನು ಖಂಡಿತಾ ಉಳಿಸುತ್ತೇನೆ. ನನಗೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ನನಗೆ ಸಪೋರ್ಟ್ ಮಾಡುತ್ತಿರುವ ಮಾದ್ಯಮ ಮಂದಿಗೆ , ಗೆಲೆಯರಿಗೆ ಎಲ್ಲರಿಗೂ ಈ ಮುಖಾಂತರ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ನಟ ದರ್ಶನ್ ಬಗ್ಗೆ ಹೇಳಿದ ಅವರು ದರ್ಶನ್ ನನಗೆ ಅಣ್ಣನ ಸ್ಥಾನದಲ್ಲಿ ನಿಂತು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಷ್ಟು ಆಫರ್’ಗಳು ಬರುತ್ತಿವೆ ಎಂದರೆ ಅದಕ್ಕೆ ಕಾರಣ ದರ್ಶನ್ . ಅವರು ನನಗೆ ಫೋನ್ ಮಾಡಿ ಹ್ಯಾಪಿ ಬರ್ತ್ ಡೇ ಟೈಗರ್ ಎಂದು ಪ್ರೀತಿಯಿಂದ ವಿಶ್ ಮಾಡಿದರು. ನನ್ನನ್ನು ಕರೆಸಿಕೊಂಡ ಅವರು ಕೇಕ್ ತರಿಸಿದರು. ಅದರಲ್ಲಿ ಹ್ಯಾಪಿ ಬರ್ತ್ ಡೇ ಟೈಗರ್ ಎಂದು ಬರೆಸಿದರು. ಅವರು ನನಗೆ ಗಿಪ್ಟ್ ಒಂದನ್ನು ಕೊಟ್ಟಿದ್ದಾರೆ. ಅದು ಏನೆಂದು ನಾನು ಹೇಳುವುದಿಲ್ಲ ಎಂದು ನಕ್ಕರು.

ಈ ವರ್ಷ ನನ್ನ ಫೈಟರ್ ಮೂವಿ ಬರಲಿದೆ. ನಂತರ ದರ್ಶನ್ ಜೊತೆ ರಾಬರ್ಟ್ ಮೂವಿಯಲ್ಲಿ ನಟಿಸಲಿದ್ದೇನೆ. ಅದರಲ್ಲಿ ಬಹು ಮುಖ್ಯ ಪಾತ್ರ ಇರಲಿದ್ದು ಅದು ನನಗೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಆ ಪಾತ್ರ ಏನೆಂದು ಹೇಳಲಾರೆ .ಅದು ನಿರ್ದೇಶಕರು ಹೇಳಿದ ಮೇಲೆ ಹೇಳುತ್ತೇನೆ ಎಂದಿದ್ದಾರೆ.

ಇನ್ನು ತರುಣ್ ಸುದೀರ್ ಮುಂದಿನ ಚಿತ್ರದಲ್ಲಿ ಆಫರ್ ಬಂದಿದೆ. ಮುಂದಿನ ವರ್ಷಗಳಲ್ಲಿ ಕೂಡ ನನಗೆ ಸಾಕಷ್ಟು ಚಿತ್ರಗಳು ಇವೆ‌ . ನಾನು ಹ್ಯಾಪಿ ಆಗಿದ್ದೇನೆ ಎಂದು ಖುಷಿಯಾಗಿದ್ದಾರೆ .

LEAVE A REPLY

Please enter your comment!
Please enter your name here