ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡ ಒಬ್ಬರು ತಮಗೆ ಸೋಂಕು ದೃಢವಾಗಿದ್ದರು ಕೋವಿಡ್ ಆಸ್ಪತ್ರೆಗೆ ಬರುವುದಿಲ್ಲ ಎಂದು ರಂಪಾಟ ಮಾಡಿದ ಘಟನೆಯೊಂದು ನಡೆದಿದೆ, ಮಂಡ್ಯ ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಇವರ ಮಗನಿಗೆ ಮೊದಲು ಸೋಂಕು ದೃಢವಾಗಿತ್ತು, ಬಳಿಕ ಇಡೀ ಕುಟುಂಬದವರ ಪರೀಕ್ಷೆ ಮಾಡಿದಾಗ ಒಟ್ಟು ಕುಟುಂಬದಲ್ಲಿ 5 ಮಂದಿಗೆ ಸೋಂಕು ಬಂದಿರುವುದು ದೃಢವಾಗಿತ್ತು.
ನಾನು ಆರೋಗ್ಯ ಸಚಿವ ಶ್ರೀರಾಮುಲು ಅವರ ಜೊತೆ ಮಾತನಾಡಿದ್ದೇನೆ ನಾನು ಆಸ್ಪತ್ರೆಗೆ ಬರುವುದಿಲ್ಲ, ನನ್ನನ್ನು ಮನೆಯಲ್ಲೇ ಐಸೋಲೇಶನ್ ಮಾಡಿ ನಾನು ಮನೆಯಲ್ಲೇ ಇರುತ್ತೇನೆ ಎಂದು ಪಟ್ಟುಹಿಡಿದು ಜೆಡಿಎಸ್ ಮುಖಂಡ ಕಿರಿಕ್ ಮಾಡಿದ್ದರು, ಮನೆಯ ಮುಂದೆ ಹೈಡ್ರಾಮಾ ಕೂಡ ನಡೆಸಿದ್ದಾರೆ, ಇವರನ್ನು ಕರೆದುಕೊಂಡು ಹೋಗಲು ಟಿ ಎಚ್ಛ್ ಓ ಡಾಕ್ಟರ್ ಧನಂಜಯ ಸೇರಿದಂತೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಎಷ್ಟೇ ಶ್ರಮಪಟ್ಟರು ಇವರು ಮಾತ್ರ ಒಪ್ಪಲಿಲ್ಲ.
ಬದಲಿಗೆ ಕೆಲವು ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಫೋನ್ ಮಾಡಿಸಿ ವಾಪಸ್ ಕಳುಹಿಸಲು ಒತ್ತಡ ಕೂಡ ಹೇರಿದ್ದರು, ಸತತ ಒಂದು ಗಂಟೆ ಮನವೊಲಿಕೆ ಬಳಿಕ ಆಸ್ಪತ್ರೆಗೆ ಬರಲು ಒಪ್ಪಿಗೆ ನೀಡಿದ ಜೆಡಿಎಸ್ ಮುಖಂಡ ಒಂದು ಗಂಟೆಗೂ ಅಧಿಕ ಕಾಲ ತಮ್ಮ ಮನೆಯ ಮುಂದೆ ಆಂಬುಲೆನ್ಸ್ ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಕಾಯುವಂತೆ ಮಾಡಿದ್ದರು.