ಶೀತದ ಕಾರಣಗಳು ಮತ್ತು ಶೀತಕ್ಕೆ ಸುಲಭ ಮನೆ ಮದ್ದುಗಳು..!!

ಶೀತ ಎಂದರೇನು : ಶೀತವು ಸಾಮಾನ್ಯವಾದ ಸಮಸ್ಯೆಗಳಲ್ಲಿ ಒಂದು ಈ ಸೋಂಕು ಮೂಗು, ಧ್ವನಿ ಪೆಟ್ಟಿಗೆ, ಗಂಟಲು ಮತ್ತು ಶ್ವಾಸಕೋಶಗಳು ಸೇರಿದಂತೆ ಮೇಲಿನ ವಾಯುಮಾರ್ಗದ ಮೇಲೆ ಪರಿಣಾಮ ಬೀರುತ್ತದೆ ಶೀತವನ್ನು ಉಂಟುಮಾಡುವ ಮತ್ತು ಸಾಮಾನ್ಯವಾಗಿ ಕಾಣಿಸುವ ವೈರುಸ್ಗಳು ರೈನೋವೈರಸ್ಗಳು ಅಥವಾ ಮೂಗು ವೈರಸ್ಗಳು ಎಂದು ಕರೆಯಲ್ಪಡುವ ಎರಡು ನೂರಕ್ಕೂ ಹೆಚ್ಚಿನ ವೈರಸ್ಗಳು ಇವೆ ಈ ವೈರಸ್ಗಳು ವಾಯುನಾಳಗಳನ್ನು ಆವರಿಸಿರುವ ಲೋಳೆಯ ಪೊರೆಯ ಉರಿಯೂತ ಅಥವಾ ಊತಕ್ಕೆ ಕಾರಣವಾಗುತ್ತವೆ. ಶೀತದ ಲಕ್ಷಣಗಳು ಸೀನುವಿಕೆ, ಗಂಟಲ ಕೆರತ, ಮುಚ್ಚಿದ ಮೂಗು, ಕೆಮ್ಮು ಇತ್ಯಾದಿ.

ಕಾರಣಗಳು ಯಾವುವು : ಶೀತಕ ವೈರಸ್ ಗಾಳಿಯ ಕಣಗಳ ಮೂಲಕ ಹರಡುತ್ತದೆ, ಅದು ಕೆಮ್ಮುವಿಕೆ ಅಥವಾ ಸೀನುವಾಗ ಹೊರಹಾಕಲ್ಪಡುತ್ತದೆ ಶೀತವಾಗಿರುವ ಯಾರಾದರೂ ಅವನ ಕಣ್ಣು ಅಥವಾ ಮೂಗುವನ್ನು ಉಜ್ಜಿ ನಂತರ ಬಾಗಿಲು ಹಾಸಿಗೆ ಮತ್ತು ಇತರ ಸಾಮಾನ್ಯ ವಸ್ತುಗಳನ್ನು ಮುಟ್ಟಿದರೆ ಅದನ್ನು ನೀವು ಮುಟ್ಟುವುದರಿಂದ ಶೀತಗಳು ಬಹಳ ಸಾಂಕ್ರಾಮಿಕವಾಗಿ ಹರಡುತ್ತವೆ ಮತ್ತು ಈ ವೈರಸ್ ವಾಯುಗಾಮಿಯಾಗಿದ್ದು ಒಂದು ಸೀನುಗಳು ಅಥವಾ ಸೋಂಕಿತ ವಸ್ತುಗಳು ಮುಟ್ಟಿದಾಗ ಹರಡುತ್ತದೆ ಇದರಿಂದ ಯಾರಿಗಾದರು ಶೀತ ಸಂಭವಿಸುತ್ತದೆ ವಯಸ್ಕರಿಗಿಂತ ಮಕ್ಕಳನ್ನು ಶೀತವಾಗಲು ಹೆಚ್ಚು ಸಾಧ್ಯತೆಗಳಿವೆ ಏಕೆಂದರೆ ಮಕ್ಕಳಲ್ಲಿ ಶೀತವನ್ನು ಉಂಟುಮಾಡುವ ಕೆಲವು ವೈರಸ್ಗಳಿಗೆ ನಿರೋಧಕ ಶಕ್ತಿ ಇರುವುದಿಲ್ಲ.

ಲಕ್ಷಣಗಳು ಯಾವುವು : ವ್ಯಕ್ತಿಗಳು ಸೋಂಕಿಗೆ ಒಳಗಾದ ನಂತರ ಎರಡು ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಶೀತದ ಮುಂಚಿನ ಚಿಹ್ನೆಗಳು ನೋಯುತ್ತಿರುವ, ಗಂಟಲು ಕೆರತ, ಸೀನುವಿಕೆ, ಮತ್ತು ಸೋರುವ ಮೂಗು ಮುಂತಾದವುಗಳಾಗಿವೆ, ನಂತರ ಸಂಭವಿಸುವ ಇತರ ರೋಗಲಕ್ಷಣಗಳು ತಲೆ ನೋವು, ದುರ್ಬಲತೆ ಮತ್ತು ಜ್ವರ ಮತ್ತು ಸ್ನಾಯು ನೋವು ಇತ್ಯಾದಿ.

ಮನೆಮದ್ದಿನ ಪರಿಹಾರಗಳು : ಸ್ವಲ್ಪ ಹಸಿ ಶುಂಠಿಯನ್ನು ಜಜ್ಜಿ ರಸ ಹಿಂಡಿಕೊಳ್ಳಬೇಕು, ಅದಕ್ಕೆ ಸಮ ಪಾಲು ಜೇನನ್ನು ಬೆರೆಸಿ ಕುಡಿಯಬೇಕು ಇಲ್ಲವೇ ಬಿಸಿ ಹಾಲಿಗೆ ಹಾಕಿ ಕುಡಿಯಬಹುದು ಇದರಿಂದಾಗಿ ಮೂಗು ಮುಚ್ಚಿಕೊಂಡಿರುವುದು ನೆಗಡಿ ಒಡನೆಯೇ ಕಡಿಮೆಯಾಗುತ್ತದೆ ಗಂಟಲು ನೋವು ಸಹ ಕಡಿಮೆಯಾಗುತ್ತದೆ.

ಅರಶಿನ ಕೊಂಬನ್ನು ತೆಗೆದುಕೊಂಡು ಅದರ ಕೊನೆಯನ್ನು ಸುಡಬೇಕು ಬರುವ ಹೊಗೆಯನ್ನು ಸೇವಿಸಬೇಕು ಅಥವಾ ಸ್ವಲ್ಪ ಅರಶಿನದ ಪುಡಿಯನ್ನು ಹಾಲಿಗೆ ಹಾಕಿ ಕುಡಿಯಬೇಕು ಇದರಿಂದ ನೆಗಡಿ ಕಡಿಮೆಯಾಗುತ್ತದೆ.

ಒಂದು ಪಾತ್ರೆಗೆ ಅಗಸೆ ಬೀಜಗಳನ್ನು ಹಾಕಬೇಕು ಅದಕ್ಕೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕುದಿಸಬೇಕು ಈಗ ಕಷಾಯ ತಯಾರಾಗಿರುತ್ತದೆ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ, ಜೇನು ಬೆರೆಸಿ ಕುಡಿಯಬೇಕು ಹೀಗೆ ಬೆಳಿಗ್ಗೆ, ಮಧ್ಯಾನ್ಹ, ರಾತ್ರಿ ಹೀಗೆ ಮೂರು ಹೊತ್ತು ಈ ಕಷಾಯವನ್ನು ಕುಡಿದರೆ ನೆಗಡಿ ಮಾಯವಾಗುತ್ತೆ.

ಒಂದು ಪಾತ್ರೆಗೆ ನೀರು ಹಾಕಿ, ಕಾಳು ಮೆಣಸಿನ ಪುಡಿಯನ್ನು ಹಾಕಿ ಕುದಿಸಬೇಕು ನಂತರ ಜೀರಿಗೆ ಹಾಕಿ ಮತ್ತೆ ಕುದಿಸಬೇಕು ಸ್ವಲ್ಪ ಬೆಲ್ಲ ಸೇರಿಸಿ ಕರಗಿದನಂತರ ಸೋಸಿಕೊಂಡು ನಂತರ ಈ ಕಷಾಯವನ್ನು ಸೇವಿಸುತ್ತಿದ್ದರೆ, ಕೆಮ್ಮು, ನೆಗಡಿ, ಗಂಟಲು ನೋವು ಮಾಯವಾಗುತ್ತವೆ.

ಒಂದು ಪಾತ್ರೆಯಲ್ಲಿ ನೀರು ಹಾಕಿಸ್ವಲ್ಪ ಟೀ ಪುಡಿ, ಲವಂಗಗಳು, ದಾಲ್ಚಿನ್ನಿ ಚಕ್ಕೆ, ಶುಂಠಿ, ಕಾಳು ಮೆಣಸು ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಳ್ಳಬೇಕು ಇದಕ್ಕೆ ಹಾಲು ಬೆರೆಸಿ ದಿಕ್ಕೆ ಮೂರು ಸಲ ಕುಡಿದರೆ, ನೆಗಡಿ, ಗಂಟಲು ನೋವು ಗುಣವಾಗುತ್ತವೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ ಕಟೀಲು ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800 ==================================================================================== ====================================================================================

Leave a Reply

Your email address will not be published. Required fields are marked *

Call Guruji Now
error: Content is protected !!