ಭಾವನಾತ್ಮಕತೆ : ಹುಟ್ಟಿದ ಮಗುವಿಗೆ ಒಂದು ವರ್ಷ ತುಂಬುವ ಮೊದಲು ಜಾತಕರ್ಮ ಎನ್ನುವ ಶಾಸ್ತ್ರ ಮಾಡುತ್ತಾರೆ ಜಾತಕರ್ಮ ಅಥವಾ ಚೌಲ ಕಾರ್ಯಕ್ರಮ ಎಂದೂ ಸಹ ಕರೆಯುತ್ತಾರೆ ಚೌಲ ಮಾಡುವ ಸಮಯದಲ್ಲಿ ಕಿವಿ ಚುಚ್ಚುವ ಶಾಸ್ತ್ರ ಮಾಡುತ್ತಾರೆ ಮಗುವಿಗೆ ಅನ್ನ ಪ್ರಾಶನ ನೆರವೇರಿಸುತ್ತಾರೆ ಈ ಸಮಾರಂಭದಲ್ಲಿ ತಂದೆ ತನ್ನ ಮಗುವನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ನಾಲಿಗೆಯ ಮೇಲೆ ಓಂ ಎಂದು ಬರೆಯುತ್ತಾನೆ, ಈ ರೀತಿ ಬರೆಯುವುದರಿಂದ ಮಗುವಿಗೆ ಮಾತು ಚೆನ್ನಾಗಿ ಬರಲಿ ಅವನ ವಾಕ್ ಶುದ್ಧಿಯಾಗಿ ಇರಲಿ ಎನ್ನುವ ಆಸೆ, ಬಂಗಾರದ ಆಭರಣ ಅಥವಾ ಉಂಗುರ ತೆಗೆದುಕೊಂಡು ಜೇನುತುಪ್ಪ ಮತ್ತು ತುಪ್ಪದಲ್ಲಿ ನಾಲಿಗೆ ಮೇಲೆ ಓಂ ಎಂದು ಬರೆಯುತ್ತಾರೆ.
ವಾಸ್ತವಿಕತೆ : ಚೌಲ ಮಾಡುವ ಮೊದಲು ಮಗುವಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ ಬಿಳಿ ದೋತರ ಎಂದರೆ ಅಂಚುಗಳು ಇರುವ ವಸ್ತ್ರ ಧರಿಸಿ ತಂದೆ ತನ್ನ ತೊಡೆಯಮೇಲೆ ಕೂರಿಸಿಕೊಳ್ಳುತ್ತಾನೆ, ಆಗ ಮಗುವಿನ ಹಣೆಗೆ ಕುಂಕುಮ ಹಚ್ಚುವ ಕೆಲಸ ತಾಯಿ ಪಾಲಿಗೆ ಬಂದಿರುತ್ತದೆ, ಅವಳು ತನ್ನ ಗಂಡ ಮತ್ತು ಮಗು ಇಬ್ಬರೂ ದೇವರ ಎದುರು ಕುಳಿತುಕೊಳ್ಳುವಂತೆ ಮಾಡುತ್ತಾಳೆ, ಆಗ ಪುರೋಹಿತರು ಒಂದು ವಿಲೆದೆಲೆ ಅಥವಾ ಚಿಕ್ಕ ಬೆಳ್ಳಿತಟ್ಟೆಯಲ್ಲಿ ಜೇನು ತುಪ್ಪ, ತುಪ್ಪ ಹಾಕಿ ಕಲೆಸಿ ತಂದೆ ಕೈನಲ್ಲಿರುವ ಉಂಗುರದಿಂದ ಜೇನುತುಪ್ಪದ ಮಿಶ್ರಣ ತಾಕಿಸಿ ಮಗುವಿನ ನಾಲಿಗೆ ಮೇಲೆ ಓಂ ಎಂದು ಬರೆಯುವಂತೆ ಸೂಚಿಸುತ್ತಾನೆ ಹೀಗೆ ವಿದ್ಯಾಭ್ಯಾಸದ ಮೊದಲ ಪಾಠ ಪ್ರಾರಂಭ ಆಗುತ್ತದೆ.
ವೈಚಾರಿಕತೆ : ಬಂಗಾರ ಸತ್ಯದ ಸಂಕೇತ ತುಪ್ಪದಲ್ಲಿ ಪವಿತ್ರತೆ ಇರುತ್ತದೆ ಹಸು ಹಾಲಿನಿಂದತಯಾರಾಗುವ ತುಪ್ಪ ಪವಿತ್ರತೆ ಗುರುತು ಜೇನುತುಪ್ಪ ಪ್ರಕೃತಿಯಲ್ಲಿ ದೊರಕುವುದರಿಂದ ಮಧುರವಾದ ಸ್ವರ ಸಾಧಿಸುತ್ತದೆ ಹೀಗೆ ನಮ್ಮ ವಾಕ್ ಸುದ್ದಿಯಾಗಿ ಇರಲು ಈ ವಸ್ತ್ರಗಳು ಸಹಕರಿಸುತ್ತದೆ.