ದುಡ್ಡೇ ದೊಡ್ಡಪ್ಪ ಅಂತ ಗಾದೆ ಮಾತೇ ಇದೆ. ದುಡ್ಡಿದ್ಸವನಿಗೆ ಇರುವ ಬೆಲೆ ಬಡವನಿಗೆ ಇರುವುದಿಲ್ಲ. ದುಡ್ಡು ಸಮಾಜದಲ್ಲಿ ನಮ್ಮ ಅಂತಸ್ತನ್ನು ಹೆಚ್ಚು ಮಾಡುತ್ತೆ. ಎಲ್ಲರಿಗೂ ದುಡ್ಡು ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯುವುದಕ್ಕೆ ಸಾಧ್ಯವಿಲ್ಲದಿದ್ದರೂ ನಾವು ಸುಖವಾಗಿ ಬದುಕಲು ದುಡ್ಡು ಬೇಕೇ ಬೇಕು.
ಕೆಲವರು ಎಷ್ಟು ಕಷ್ಟ ಪಟ್ಟರೂ ,ಹಗಲು ರಾತ್ರಿ ಎನ್ನದೇ ದುಡಿದರೂ ಅವರ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಆದರೆ ಇನ್ನೂ ಕೆಲವರು ಅದೃಷ್ಟವಂತರು. ಅವರು ದುಡಿಯದೇ ಇದ್ದರೂ ಅವರು ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಇದು ಅವರವರ ಅದೃಷ್ಟ ಅಥವಾ ಲಕ್ ಎನ್ನಬಹುದು. ಎಲ್ಲರಿಗೂ ಅದೃಷ್ಟ ಕೂಡಿ ಬರಬೇಕೆಂದರೆ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಬೇಕು.
ಆ ಮಹಾಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ನಮ್ಮಲ್ಲಿ ಅನೇಕ ಪೂಜೆ ಪುರಸ್ಕಾರ, ಮಂತ್ರ ತಂತ್ರಗಳಿಂದ ಒಲಿಸಿಕೊಳ್ಳುವುದುಂಟು. ಇದು ಅನಾದಿಕಾಲದಿಂದಲೂ ಬಂದಿದೆ. ಶ್ರೀ ಮಹಾಲಕ್ಷ್ಮಿಯು ಯಾರ ಮನೆಯಲ್ಲಿ ನಿಂತಿರ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಲಕ್ಷ್ಮಿಯ ಅನುಗ್ರಹ ಸಿಕ್ಕರೆ ನಮ್ಮ ಜೀವನ ಸುಗಮವಾಗಿ ಸಾಗುತ್ತದೆ ,ಜೀವನ ಉಲ್ಲಾಸಮಯವಾಗುತ್ತದೆ ಎಂದು ನಮ್ಮ ಅನುಭವಕ್ಕೆ ಬಂದ ಮಾತು.
ನಮ್ಮ ಮನೆಯಲ್ಲಿ ಹಣ ನಿಲ್ಲಲು, ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಪಡೆಯಲು ಕರ್ಪೂರದಿಂದ ಈ ರೀತಿಯಲ್ಲಿ ಮಾಡಿ. ನಿಮ್ಮ ಸಮಸ್ಯೆ ಪರಿಹಾರವಾಗಿ ಜೀವನ ಸುಂದರವಾಗುತ್ತದೆ. ಇದಕ್ಕೆ ಬೇಕಾಗಿರುವುದು ಕರ್ಪೂರ ಮತ್ತು ನಂಬಿಕೆ ಮಾತ್ರ.
ಶ್ರೀ ಮಹಾಲಕ್ಷ್ಮಿಯನ್ನು ದೀಪ ,ಧೂಪ , ಫಲ ,ಪುಷ್ಪಗಳಿಂದ ಪೂಜಿಸಿದ ನಂತರ ನಾಕ್ಕೈದು ಕರ್ಪೂರದ ಬಿಲ್ಲೆಗಳನ್ನು ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಬೇಕು. ನಂತರ ಆ ಬಟ್ಟೆಯನ್ನು ಶ್ರೀ ಮಹಾಲಕ್ಷ್ಮಿಯ ಫೋಟೋದ ಕೆಳಗೆ ಇಟ್ಟು ಪ್ರಾರ್ಥಿಸಬೇಕು. ಲಕ್ಷ್ಮಿಗೆ ಪೂಜೆ , ಹಸುವಿನ ತುಪ್ಪದಿಂದ ನೈವೇದ್ಯ ಮಾಡಬೇಕು.
ನಂತರ ಆ ಕರ್ಪೂರ ಕಟ್ಟಿದ ಕೆಂಪು ಬಟ್ಟೆಯನ್ನು ನೀವು ದುಡ್ಡು ಇಡುವ ಅಲ್ಮೆರಾದ ಒಳಗೆ ಇಡಬೇಕು. ಇದು ಯಾರಿಗೂ ಗೊತ್ತಾಗಬಾರದು. ನೀವು ಕೂಡ ಪದೇ ಪದೇ ತೆಗೆದು ನೋಡಬಾರದು. ಆನಂತರ ನಿಮ್ಮ ಖರ್ಚು ಕಡಿಮೆ ಆಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ.ಈ ರೀತಿಯಲ್ಲಿ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ರೀತಿ ಮಾಡಿ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಿ.