ಮಗನ ಶವ ನೋಡಲು ಈ ತಾಯಿಗೆ 6 ತಿಂಗಳಾಯಿತು! ಮಲೇಶಿಯಾ ಇಂದ ಮೈಸೂರಿಗೆ ಬಂತು ಈ ಪಾರ್ಸಲ್.

0
4026

ಮೈಸೂರಿನ 24 ವರ್ಷದ ಸುಮಂತ ಎನ್ನುವ ಯುವಕ ಆರು ತಿಂಗಳ ಹಿಂದೆ ಮಲೇಶಿಯಾದಲ್ಲಿ ಮೃತಪಟ್ಟಿದ್ದನ್ನು ಆದರೆ ಆರು ತಿಂಗಳ ಬಳಿಕ ಆತನ ಹುಟ್ಟೂರಿಗೆ ದೇಹ ಬಂದಿದೆ.

ಏನಿದು ಘಟನೆ : ಸುಮಂತ್ ಮಧ್ಯವರ್ತಿಯ ಸಹಾಯದಿಂದ ಮಲೇಶಿಯಾದಲ್ಲಿ ಕೆಲಸಕ್ಕಾಗಿ ಹೋಗಿದ್ದನು, ಮೊದಲಿಗೆ ಮಧ್ಯವರ್ತಿ 35 ಸಾವಿರ ಸಂಬಳ ಕೊಡಿಸುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ ಆದರೆ ಅಲ್ಲಿಗೆ ಹೋದಮೇಲೆ 18 ಸಾವಿರ ಸಂಬಳ ಬರುವ ಕೆಲಸ ಸಿಕ್ಕಿದೆ ಇದರಿಂದ ಬೇಜಾರಾಗಿದ್ದ ಸುಮಂತ್ ಮರಳಿ ಮೈಸೂರಿಗೆ ಬಂದುಬಿಡುತ್ತೇನೆ ಎಂದು ತಾಯಿಯ ಬಳಿ ಹೇಳಿಕೊಂಡಿದ್ದಾರೆ, ಆದರೆ ಅಷ್ಟರಲ್ಲಾಗಲೇ ಅನುಮಾನಾಸ್ಪದ ರೀತಿಯಲ್ಲಿ ಸುಮಂತ್ ಮಲೇಶಿಯಾದಲ್ಲಿ ಮೃತಪಟ್ಟಿದ್ದಾರೆ, ಈ ವಿಚಾರವನ್ನು ಆತನ ಸಹೋದ್ಯೋಗಿಗಳು ತಾಯಿಗೆ ಕರೆಮಾಡಿ ತಿಳಿಸಿದ್ದಾರೆ.

ಮಗನ ಸಾವಿನ ವಿಚಾರ ಕೇಳುತ್ತಿದ್ದಂತೆ ಸುಮಂತ್ ಅವರ ತಾಯಿ ತನಿಖೆ ಮಾಡುವಂತೆ ಹಾಗೂ ಮಗನ ಶವವನ್ನು ಮಲೇಷಿಯಾದಿಂದ ಇಲ್ಲಿಗೆ ತರಿಸಿಕೊಳ್ಳಲು ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಮನವಿ ಮಾಡಿದ್ದರು, ಇದಕ್ಕೆ ಸ್ಪಂದಿಸಿದ ಪ್ರತಾಪ್ ಸಿಂಹ ಅವರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ಕೂಡ ನೀಡಿ ಮಾತನಾಡಿದರು, ಈ ನಡುವೆ ಕರೋನವೈರಸ್ ನಿಂದಾಗಿ ಲಾಕ್ಡೌನ್ ಆದಕಾರಣ ಮೃತದೇಹ ತಾಯಿಯ ಮಡಿಲು ಸೇರಲು ಆರು ತಿಂಗಳ ಸಮಯ ಪಡೆದಿದೆ.

ಕೊನೆಗೂ ಸುಮಂತ್ ತಾಯಿ ಮಗನ ಅಂತ್ಯಕ್ರಿಯೆಯನ್ನು ನೆರವೇರಿಸಿ ಸಮಾಧಾನ ಪಟ್ಟುಕೊಂಡಿದ್ದಾರೆ.

LEAVE A REPLY

Please enter your comment!
Please enter your name here