ಲಾಕ್‌ಡೌನ್‌ನಿಂದಾಗಿ ಅಸ್ಸಾಂನಲ್ಲಿ ಸಂಕಷ್ಟದಲ್ಲಿರುವ ಜನರಿಗೆ ರಜೆಯ ನಡುವೆಯೂ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಿಆರ್‌ಪಿಎಫ್ ಯೋಧರೊಬ್ಯೊಬರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ASI Padmeswar Das of 76 bn @crpfindia @JKZONECRPF @jammusector currently at home in Morigaon (Assam) due to Lockdown has been helping the needy in his village by voluntarily distributing food items to them out from his own savings
For any assistance call 14411. pic.twitter.com/xGcIiRJJfy— CRPF Madadgaar (@CRPFmadadgaar) April 12, 2020
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಬ್ ಇನ್‌ಸ್ಪೆಕ್ಟರ್ ಪದ್ಮೇಶ್ವರ್ ದಾಸ್ (48) ಅವರು, ಉಳಿತಾಯದ ಹಣವನ್ನು ತಮ್ಮೂರಿನ ಬಡವರ ಹೊಟ್ಟೆ ತುಂಬಿಸಲು ವ್ಯಯಿಸುತ್ತಿದ್ದಾರೆ. ಇವರ ಈ ಸಾಮಾಜಿಕ ಸೇವೆಗೆ ಪತ್ನಿ ಮತ್ತು ತಾಯಿ ಕೈಜೋಡಿಸಿದ್ದಾರೆ.
ರಜೆಯ ಮೇಲೆ ಮಾರ್ಚ್ 3ರಂದು ಊರಿಗೆ ಬಂದೆ. ಕೆಲಸಕ್ಕೆ ಹಿಂತಿರುಗಬೇಕಿದ್ದ ಸಂದರ್ಭದಲ್ಲಿಯೇ ಲಾಕ್‌ಡೌನ್ ಘೋಷಣೆಯಾಯಿತು. ಕಾಶ್ಮೀರದಲ್ಲಿರುವ ನನ್ನ ಸೇನಾ ಪಡೆ ಹಿಂತಿರುಗದಂತೆ ಸಂದೇಶ ಕಳುಹಿಸಿತು. ನಾನು ಸೇನಾ ಪಡೆಯ ಜೊತೆಗಿದ್ದರೆ, ಸಹೋದ್ಯೋಗಿಗಳೊಂದಿಗೆ ಅಗತ್ಯವಿರುವವರಿಗೆ ನೆರವು ನೀಡುತ್ತಿದ್ದೆ. ಅದೇ ಕೆಲಸವನ್ನು ನಾನೊಬ್ಬನೇ ಮಾಡಲು ನಿರ್ಧರಿಸಿದೆ’ ಎನ್ನುತ್ತಾರೆ ಪದ್ಮೇಶ್ವರ್.
ಎರಡು ಕೆ.ಜಿ ಅಕ್ಕಿ, ಒಂದು ಕೆ.ಜಿ ಆಲೂಗೆಡ್ಡೆ, ಎಣ್ಣೆ, ಉಪ್ಪು, ಅರ್ಧ ಕೆ.ಜಿ ಈರುಳ್ಳಿಯ 50 ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಅವರು ಸಂಕಷ್ಟದಲ್ಲಿರುವವರಿಗೆ ವಿತರಿಸಿದ್ದಾರೆ.
ಅಧಿಕೃತ ರಜೆಯಲ್ಲಿದ್ದರೂ, ದಾಸ್ ಜನರಿಗೆ ಸಹಾಯ ಮಾಡುತ್ತಿರುವುದು ತಿಳಿದು ಹೆಮ್ಮೆಯಾಯಿತು ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ 76ನೇ ಬೆಟಾಲಿಯನ್ ಕಮಾಂಡೆಂಟ್ ನೀರಜ್ ಪಾಂಡೆ ತಿಳಿಸಿದ್ದಾರೆ.