ಸುಂದರವಾಗಿ ಕಾಣಲುದೇಹದ ತೂಕ ಸಮಾನವಾಗಿ ಇರಬೇಕು ಅಂದರೆ ತುಂಬಾ ಹೆಚ್ಚಾಗಿಯೂ ಇರಬಾರದು ಅದರಂತೆ ತುಂಬಾ ಕಡಿಮೆ ಇರಬಾರದು, ಕಡಿಮೆ ತೂಕವಿದ್ದು ಏನೇ ಮಾಡಿದರೂ ತೂಕ ಹೆಚ್ಚಾಗುವುದಿಲ್ಲ ಎನ್ನುವವರು ಇಂದು ನಾವು ತಿಳಿಸುವ ಸುಲಭ ಸರಳ ಮನೆಮದ್ದುಗಳು ಪಾಲನೆ ಮಾಡಿದರೆ, ಅತಿ ಕಡಿಮೆ ಸಮಯದಲ್ಲಿ ನಿಮ್ಮ ದೇಹದ ತೂಕ ಆರೋಗ್ಯಕರವಾಗಿ ವೃದ್ಧಿ ಆಗುತ್ತದೆ.
ದೇಹದ ತೂಕ ಹೆಚ್ಚಿಸಲು ಇಷ್ಟ ಪಡುವವರು ಪ್ರತಿದಿನ ಅನ್ನವನ್ನು ಹೆಚ್ಚಾಗಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ, ಕಾರಣ ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ದೇಹದ ತೂಕವು ಹೆಚ್ಚಲು ಸಹಾಯಕಾರಿ, ಹಾಗೂ ಆರೋಗ್ಯದ ದೃಷ್ಟಿಯಿಂದ ಯೋಚನೆ ಮಾಡು ವುದಾದರೆ ಕೆಂಪು ಅಕ್ಕಿಯನ್ನು ಮತ್ತಷ್ಟು ಒಳ್ಳೆಯದು.
ಹಾಲಿನಿಂದ ತಯಾರು ಮಾಡುವ ಪದಾರ್ಥಗಳಾದ ಪನ್ನೀರ್ ಚೀಸ್ ತುಪ್ಪ ಮತ್ತು ಚಿಕ್ಕನ್ ಹಾಗೂ ಮೀನು ಈ ರೀತಿಯ ಆಹಾರ ಗಳು ದೇಹದ ತೂಕವನ್ನು ಹೆಚ್ಚಿಸಲು ಬಹಳ ಸಹಕಾರಿ, ಅದರಲ್ಲೂ ದೇಹದ ತೂಕವನ್ನು ಬೇಗ ಹೆಚ್ಚಿಸಿಕೊಳ್ಳಲು ಹೆಚ್ಚಿಸುವ ಅವರು ಪ್ರತಿದಿನ ಚೀಸ್ ತಿನ್ನಲು ಶುರು ಮಾಡಿ.
ದೇಹದ ತೂಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮತ್ತೊಂದು ಆಹಾರವೆಂದರೆ ಅದು ಮೊಸರು, ಪ್ರತಿ ದಿನ ಗಟ್ಟಿ ಮೊಸರನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಲ್ಲಿ ದೇಹದ ತೂಕ ಗಣನೀಯವಾಗಿ ಏರಿಕೆಯಾಗುತ್ತದೆ.
ಬಿಳಿ ಬಣ್ಣದ ಬ್ರೆಡ್ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ, ನೀವೇನಾದರೂ ಗೋಧಿ ಬ್ರೆಡ್ ತಿನ್ನುತ್ತಿದ್ದರೆ ಮೊದಲು ನಿಲ್ಲಿಸಿ ಕಾರಣ ಇದರಿಂದ ದೇಹದ ತೂಕ ಮತ್ತಷ್ಟು ಕಡಿಮೆಯಾಗುತ್ತದೆ.
ದ್ರಾಕ್ಷಿ ಹಾಗೂ ಗೋಡಂಬಿಯನ್ನು ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದು ಇದನ್ನು ತಿಂದರೆ ದೇಹದ ತೂಕ ಹೆಚ್ಚಾಗುತ್ತದೆ.
ಆಲೂ ಗಡ್ಡೆ, ಗೆಣಸು, ಅನ್ನ, ಬೆಣ್ಣೆ, ತುಪ್ಪ, ಮೊಟ್ಟೆ, ಸಿಹಿ ಪದಾರ್ಥಗಳು ಹಾಗೂ ತರಕಾರಿಗಳಲ್ಲಿ ಎಲೆಕೋಸು ಹೂಕೋಸು ಬೆಂಡೆ ಈರುಳ್ಳಿ ಬದನೆಕಾಯಿ ಬೀಟ್ ರೋಟ್ ಈ ಆಹಾರಗಳು ಪ್ರತಿದಿನ ತಪ್ಪದೆ ಸೇವಿಸುವ ರೂಢಿ ಮಾಡಿಕೊಂಡಲ್ಲಿ ಗಣನೀಯ ತೂಕದ ಹೇರಿಕೆಯನ್ನು ನೀವೇ ಗಮನಿಸುತ್ತಿರಿ.
100 ಗ್ರಾಂ ಐಸ್ ಕ್ರೀಮ್ ಅಲ್ಲಿ 200 ಗ್ರಾಂ ಕ್ಯಾಲರಿ ಶಕ್ತಿ ಇರುತ್ತದೆ, ಐಸ್ ಕ್ರೀಂ ಬಹಳ ಬೇಗ ಜೀರ್ಣವಾಗುವ ಆಹಾರ, ಆದ್ದರಿಂದ ಐಸ್ ಕ್ರೀಮ್ ತಿನ್ನುವ ಅಭ್ಯಾಸವಿದ್ದರೆ ದೇಹದ ತೂಕ ಹೆಚ್ಚಿಸಲು ಸಹಕಾರಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.