ಕಪ್ಪಗಿರುವ ಮುಖವನ್ನು ಬೆಳ್ಳಗೆ ಮಾಡಲು ಮನೆಯಲ್ಲೆ ಸುಲಭ ಉಪಾಯ

0
4017

ಮುಖದ ಬಣ್ಣ ಗೌರವ ವರ್ಣವಾಗಿರಬೇಕು ಅಂತ ಹೆಣ್ಣುಮಕ್ಕಳ ಬಯಕೆ. ಸಾಕಷ್ಟು ಹೆಣ್ಣುಮಕ್ಕಳು ಮುಖಕ್ಕೆ ಬೇಡವಾದ ಪೌಡರ್, ಮೇಕಪ್ ಕಿಟ್ ಗಳನ್ನು ಧರಿಸಿ ಮನೆಯಿಂದ ಹೊರಹೋಗುತ್ತಾರೆ. ಇದರಿಂದ ತಾತ್ಕಾಲಿಕ ಗೌರವ ವರ್ಣ ಪ್ರಾಪ್ತಿ ಆದರೂ ಕೂಡ ಇದರಿಂದ ಮುಖಕ್ಕೆ ಹಾನಿಯಾಗುವುದು ಕೂಡ ಖಂಡಿತ. ಅಪ್ಸರೆಯುತ ತ್ವಚೆಗಾಗಿ ನೈಸರ್ಗಿಕ ಫೇಸ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಕೆಲವು ಮಹಿಳೆಯರು ಮನೆಯಲ್ಲಿ ಮದುವೆ ಅಥವಾ ಇನ್ಯಾವುದೋ ಫಂಕ್ಷನ್ ಬಂದರೆ ಸಾಕು ಬ್ಯೂಟಿ ಪಾರ್ಲರ್ ಗೆ ಹೋಗಿ ಮುಖಕ್ಕೆ ಇನ್ನಷ್ಟು ಫೇಸ್ ಪ್ಯಾಕ್ ಅನ್ನು ಮಾಡಿಕೊಳ್ಳುತ್ತಾರೆ ಇದರ ಬದಲು ಮನೆಯಲ್ಲೇ ಫೇಸ್ ಪ್ಯಾಕ್ ಅನ್ನು ತಯಾರಿಸಿ ನಿಮ್ಮ ಮುಖವನ್ನು ಇನ್ನಷ್ಟು ಹೊಳಪು ವಂತೆ ಮಾಡಿಕೊಳ್ಳಬಹುದು.

ಚರ್ಮದ ಸಹಜ ವರ್ಣವನ್ನು ಪಡೆಯಲು ಮನೆಯಲ್ಲೆ ನೈಸರ್ಗಿಕವಾಗಿ ತಯಾರಿಸಿದ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಬಹುದು ತ್ವಚೆಗೆ ಹಾಲು ಮತ್ತು ಅರಿಶಿನ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಒಂದು ಚಿಕ್ಕ ಚಮಚ ಅರಿಶಿಣಪುಡಿ ಅದಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ನಂತರ ಅರ್ಧ ಗಂಟೆಯ ಬಳಿಕ ಮುಖವನ್ನು ತೊಳೆದುಕೊಳ್ಳಿ ಆದರೆ ಮುಖಕ್ಕೆ ಸೋಪನ್ನು ಉಪಯೋಗಿಸಬೇಡಿ .ಈ ವಿಧಾನ ಚರ್ಮಕ್ಕೆ ತುಂಬಾ ಉಪಯೋಗಕಾರಿ ಮತ್ತು ಅವರ ಮುಖ ಸುಂದರವಾಗಿ ಮತ್ತು ಕಾಂತಿಯುತವಾಗಿ ಹೊಳೆಯುತ್ತದೆ.

ಒಂದು ವೇಳೆ ಚರ್ಮದಲ್ಲಿ ತೆಳುವಾದ ಪದರು ಆವರಿಸಿಕೊಂಡರೆ ಇದು ಸಪ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿರುವುದು ಅದಕ್ಕೆ ಸೂಕ್ತ ಪರಿಹಾರವೆಂದರೆ ಕಡಲೆಹಿಟ್ಟು ಮತ್ತು ಕೊಂಚ ಹಸಿ ಹಾಲನ್ನು ಬೆರೆಸಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಚರ್ಮಕ್ಕೆ ಆವರಿಸಿಕೊಂಡ ಪದರು ಹೋಗಿ ನಿಮ್ಮ ಚರ್ಮ ಕೋಮಲವಾಗುತ್ತದೆ ಮತ್ತು ಮೃದುವಾಗಿ ಇರುತ್ತದೆ.

ನಾವು ಸುಂದರವಾಗಿ ಕಾಣಬೇಕು ಅಂತ ಅದೆಷ್ಟು ಸೋಪುಗಳು, ಫೇಸ್ ಪ್ಯಾಕ್ ಗಳನ್ನು ಹಾಕಿ ಮುಖವನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತೇವೆ . ಅದರ ಬದಲು ಮನೆಯಲ್ಲಿ ತಯಾರಿಸಿ ಮುಖವನ್ನು ಇನ್ನಷ್ಟು ಕಾಂತಿಯುತಗೊಳಿಸಬಹುದು. ಇದಕ್ಕೆ ಇನ್ನೊಂದು ಸುಲಭ ಮನೆಮದ್ದು ಎಂದರೆ ಮೆಂತ್ಯ ಕಾಳಿನ ಪುಡಿ ಎರಡು ಚಮಚ, ಗಂಧದ ಪುಡಿ ಒಂದು ಚಮಚ , ಜೇನು ತುಪ್ಪ ಒಂದು ಚಮಚ , ಹಾಗೂ ಹಾಲು ನಾಲ್ಕರಿಂದ ಐದು ಚಮಚ ಮತ್ತು ನಿಂಬೆರಸ ಒಂದು ಚಮಚ ಇವೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಫೇಸ್ಟ್ ಮಾಡಿಕೊಂಡಿದ್ದು ಗಟ್ಟಿಯಾಗಿದ್ದರೆ ಅದಕ್ಕೆ ಇನ್ನೂ ಸ್ವಲ್ಪ ಹಾಲನ್ನು ಹಾಕಿ ಮೃದುಗೊಳಿಸಿ ನಂತರ ಅದನ್ನು ಹದಿನೈದರಿಂದ ಇಪ್ಪತ್ತು ನಿಮಿಷಗಳ ತನಕ ಅದನ್ನು ಮುಖದಲ್ಲಿ ಇಟ್ಟುಕೊಳ್ಳಬೇಕು.ನಂತರ ಒಣಗಿದ ಮೇಲೆ ಬೆಚ್ಚಗಿನ ನೀರಿನಿಂದ ತೊಳೆಯಿರಿ ಈ ರೀತಿ ತಿಂಗಳಿಗೆ ಎರಡರಿಂದ ಮೂರು ಸಲ ಮಾಡುವುದರಿಂದ ನಿಮ್ಮ ತ್ವಚೆ ಇನ್ನಷ್ಟು ಕಾಂತಿಯುತವಾಗಿ ಹೊಳೆಯುತ್ತದೆ ಮತ್ತು ಬಿಳಿಯಾಗುತ್ತದೆ ಮತ್ತು ನೀವು ಯಾವುದೇ ಬ್ಯೂಟಿಪಾರ್ಲರ್ ಗೆ ಹೋಗುವ ಅವಕಾಶ ಇರುವುದಿಲ್ಲ ನಿಮ್ಮ ಮುಖ ಇನ್ನಷ್ಟು ಹೊಳಪುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here