ಹೀಗೆ ಮಾಡಿದರೆ ಜನ್ಮದಲ್ಲಿ ಬಿಳಿ ಕೂದಲು ಬರುವುದಿಲ್ಲ!

0
5063

ಹೀಗೆ ಮಾಡಿದರೆ ಜನ್ಮದಲ್ಲಿ ಬಿಳಿ ಕೂದಲು ಬರುವುದಿಲ್ಲ..!

ತಲೆ ಕೂದಲು ಬಿಳಿಯಾಗುವುದುಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.  ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಬಿಳಿಕೂದಲಿನ ಸಮಸ್ಯೆ ಇದೆ ಇದಕ್ಕೆ ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ ಹಾಗೂ ಇದಕ್ಕೆ ಇಂತಹದೇ ಅಂತ ಏನು ಕಾರಣ ಇಲ್ಲ.. ನಮ್ಮ ಜೀವನಶೈಲಿ ಆಹಾರ , ಒತ್ತಡ, ಪರಿಸರ ಇನ್ನೂ ಇತರೆ ಕಾರಣಗಳು ಇರಬಹುದು . ಯಾವುದೇ ವಯಸ್ಸಿನವರು ಆದರೂ ಸರಿ ಮನೆಯಲ್ಲೇ ಕುಳಿತುಕೊಂಡು ಸುಲಭವಾಗಿ ಹಾಗೂ ಹಾಗೂ ಸರಳವಾಗಿ ಮನೆಮದ್ದನ್ನು ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ಬಿಳಿ ಕೂದಲು ಬರುವುದಿಲ್ಲ ಹಾಗೂ ಸಮಸ್ಯೆ ಕೂಡ ಇರುವುದಿಲ್ಲ ಅದು ಹೇಗೆಂದು ಮುಂದೆ ನೋಡೋಣ .

ಬಿಳಿ ಕೂದಲು ತಡೆಯಲು ಮನೆಮದ್ದು ಏನೆಂದರೆ ಮೂರರಿಂದ ನಾಲ್ಕು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ಸಿಪ್ಪೆಯನ್ನು ತೆಗೆದುಕೊಳ್ಳಿ ನಂತರ ಒಂದು ಲೀಟರ್ ನೀರನ್ನು ಕುದಿಸಿ ನಂತರ ಆಲೂಗಡ್ಡೆ ಸಿಪ್ಪೆ ನೀರಿನಲ್ಲಿ ಹಾಕಿ ನೀರು ಕಾಲುಭಾಗ ಬಂದಮೇಲೆ ಸ್ಟೋವ್ ಅನ್ನು ಆಫ್ ಮಾಡಿ ಪೂರ್ತಿ ತಣ್ಣಗಾದ ನಂತರ ಅದನ್ನು ಕೂದಲಿಗೆ ಹಚ್ಚಿ. , ರಾತ್ರಿ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ನೀವು ಕೂದಲನ್ನು ತೊಳೆದುಕೊಳ್ಳಿ ಹೀಗೆ ತಿಂಗಳಿಗೆ 5 ರಿಂದ 6 ಸಲ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಹೊರಬರಬಹುದು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿಕೊಳ್ಳಿ ನಂತರ ಆಲೂಗಡ್ಡೆಯನ್ನು ಪೇಸ್ಟ್ ಮಾಡಿಕೊಂಡು ಅದರ ರಸವನ್ನು ಬೇರ್ಪಡಿಸಿ ಅದನ್ನು ತಲೆಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಬಿಳಿಕೂದಲಿನ ಸಮಸ್ಯೆಯಿಂದ ದೂರವಿರಬಹುದು .

ಈಗಿನ ಕಾಲದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬರುವುದು ಸಹಜ ಯಾಕಂದ್ರೆ ಹೆಣ್ಣುಮಕ್ಕಳು ಶ್ಯಾಂಪೂ , ಕಂಡೀಷನರ್ ಹಾಕಿ ಇನ್ನೂ ಕೂದಲನ್ನು ಹಾಳುಮಾಡಿಕೊಳ್ಳುತ್ತಾರೆ. ಸಣ್ಣ ವಯಸ್ಸಿನಲ್ಲಿ ಅವರಿಗೆ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಅದನ್ನು ಯಾವ್ತರ ತಡೆಗಟ್ಟುವುದು ಎಂದರೆ ಮನೆಯಲ್ಲಿ ಸುಲಭವಾಗಿ ಮನೆಮದ್ದನ್ನು ಮಾಡಿ ಹಚ್ಚಿಕೊಳ್ಳಬಹುದು ಅದು ಹೇಗೆಂದರೆ ಸ್ವಲ್ಪ ಮೆಂತೆ ಕಾಳುಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿರಿ ನಂತರ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿದ ಮೆಂತೆಕಾಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ , ಸಮಪ್ರಮಾಣದ ಮೊಸರನ್ನು ಕೂಡ ಅದರಲ್ಲಿ ಬೆರೆಸಿ ನಂತರ ಅದನ್ನು ತಲೆ ಕೂದಲಿಗೆ ಹಚ್ಚಿಕೊಂಡು ಒಣಗಲು ಬಿಡಿ. ಸುಮಾರು 30 ರಿಂದ 40 ನಿಮಿಷಗಳ ನಂತರ ತಣ್ಣೀರಿನಿಂದ ನಿಮ್ಮ ತಲೆ ಕೂದಲನ್ನು ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗುತ್ತದೆ ಅಲ್ಲದೆ ಯಾವುದೇ ವೈದ್ಯರ ಬಳಿ ಹಣವನ್ನು ಸುರಿಸುವ ಬದಲು ಮನೆಯಲ್ಲೇ ಕುಳಿತುಕೊಂಡು ಸುಲಭವಾಗಿ ಬಿಳಿ ಕೂದಲು ಕಪ್ಪು ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here