ಕರೋನ ನಡುವೆಯೂ ಮದುವೆಯಾಗಲು ಹೋಗಿ ಶವವಾದ ಮದುಮಗ!

0
4264

ಮದುವೆ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಆಡಂಬರದಲ್ಲಿ ಮದುವೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿದೆ, ಇದರ ನಡುವೆಯೂ ಹಲವು ಮದುವೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ ಹಾಗೂ ಈ ಸಮಾರಂಭ ಗಳೇ ಕರೋನಾ ಸೋಂಕು ಅತಿಹೆಚ್ಚು ಹರಡುತ್ತದೆ ಎಂಬುವ ಭಯವನ್ನು ಹುಟ್ಟಿಸಿದೆ, ಇದಕ್ಕೆ ಸಂಬಂಧಿಸಿದ ದುರಾದೃಷ್ಟಕರ ಘಟನೆಯೊಂದನ್ನು ಹೇಳುತ್ತೇವೆ ಮುಂದೆ ನೋಡಿ.

ಬಿಹಾರದ ಪಾಟ್ನಾದಲ್ಲಿ ಕಳೆದ ತಿಂಗಳು ಮದುವೆಯೊಂದು ನಡೆದಿತ್ತು, ಇದು ಕರೋನಾ ಸಂದರ್ಭ ಎಂದು ತಿಳಿದಿದ್ದರೂ ಮದುವೆಯನ್ನು ತಕ್ಕಮಟ್ಟಿಗೆ ಅದ್ದೂರಿಯಾಗಿ ನಡೆಸಲಾಗಿತ್ತು, ಮಧುಮಗ ಸಾಫ್ಟ್ವೇರ್ ಉದ್ಯೋಗಿ ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಕರೋನಾ ಸೋಂಕಿಗೆ ಬಲಿಯಾಗಿರುವುದಾಗಿ ವರದಿಯಾಗಿದೆ, ಇನ್ನು ಈತನ ಮದುವೆ ಜೂನ್ 15ನೇ ತಾರೀಕು ನಡೆದಿತ್ತು ಈತನಿಗೆ ಕರೋನ ಲಕ್ಷಣಗಳು ಕಂಡಿದ್ದು ನಂತರ ಮರಣ ಹೊಂದಿದ್ದಾನೆ ಆದರೆ ಸೋಂಕು ಪರೀಕ್ಷೆಯನ್ನು ನಡೆಸಿ ನಂತರ ಅಂತ್ಯಸಂಸ್ಕಾರ ಮಾಡಲಿಲ್ಲ.

ಮೊದಲಿಗೆ ಮನೆಯವರು ಈತನ ಅಂತ್ಯಸಂಸ್ಕಾರವನ್ನು ಹಾಗೆಯೇ ಮಾಡಿ ಮುಗಿಸಿದ್ದಾರೆ, ಈ ವಿಚಾರ ತಿಳಿದ ಬಳಿಕ ಈತನ ಮದುವೆಗೆ ಹೋಗಿದ್ದ ವರನ್ನೆಲ್ಲ ಪರೀಕ್ಷೆ ಮಾಡಲಾಗಿದೆ ಇದರಲ್ಲಿ ಬರೋಬರಿ 95 ಮಂದಿಗೆ ಕರೋನವೈರಸ್ ಪಾಸಿಟಿವ್ ಬಂದಿದೆ ಎಂದರೆ ನೀವು ನಂಬಲೇಬೇಕು ಹೌದು ಮೊದಲಿಗೆ ಕೇವಲ 15 ಜನರಿಗೆ ಸೋಂಕು ದೃಢ ಪಟ್ಟಿತ್ತು ಬಳಿಕ ಉಳಿದ 70 ಜನರಿಗೂ ಸೋಂಕು ತಗುಲಿರುವುದು ದೃಢವಾಗಿದೆ, ಹಾಗಾಗಿ ಮದುವೆ ಸಮಾರಂಭಗಳಿಗೆ ಜನನಿಬಿಡ ಪ್ರದೇಶಗಳಿಗೆ ಆದಷ್ಟು ಭೇಟಿ ನೀಡದೆ ನಿಮ್ಮ ಆರೋಗ್ಯವನ್ನು ನೀವೇ ಕಾಯ್ದುಕೊಳ್ಳಿ.

LEAVE A REPLY

Please enter your comment!
Please enter your name here