ಚೀನಾ ದೇಶಕ್ಕೆ ನಡುಕ ವಾಗುವಂತಹ ರಿಪೋರ್ಟ್ ಇಲ್ಲಿದೆ ನೋಡಿ!

0
3785

ಸುಖಾಸುಮ್ಮನೆ ಭಾರತದ ಗಡಿ ಅತಿಕ್ರಮಿಸಿ ಭಾರತೀಯ ಸೇನೆಯ ಹತ್ಯೆಮಾಡಿದ ಚೀನಾ ವಿರುದ್ಧ ಭಾರತದ ಜನಸಾಮಾನ್ಯರು ತಿರುಗಿಬಿದ್ದಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಐ ಎ ಎನ್ ಎಸ್ ಸಿ ವೋಟರ್ ಸಮೀಕ್ಷೆ ವರದಿ ಬಂದಿದ್ದು ಭಾರತದ ನಾಗರೀಕರು ಚೀನಾ ವಿರುದ್ಧ ಹಾಗೂ ಚೀನಾ ದೇಶದ ಸರಕುಗಳ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ.

ಗಡಿಯಲ್ಲಿ ನಡೆದ ಸಂಘರ್ಷದಿಂದಾಗಿ ಚೀನಾದಿಂದ ಬರುವ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣವಾಗಿ ತೇಜಿಸಬೇಕೇ ಈ ಬಗ್ಗೆ ಸಮೀಕ್ಷೆ ನಡೆದಿದ್ದು ದೇಶದ ಶೇಕಡಾ 68.2 ರಷ್ಟು ಜನ ಚೀನಾ ದೇಶದ ವಸ್ತುಗಳನ್ನು ಖರೀದಿಸುವುದಿಲ್ಲ ಎಂದಿದ್ದಾರೆ, ಹಾಗೂ ಈ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ, ಇನ್ನುಳಿದ ಶೇಕಡಾ 31.8 ರಷ್ಟು ಜನ ಇದರಿಂದ ಏನೂ ಆಗಲ್ಲ, ಎಲೆಕ್ಟ್ರೋನಿಕ್ ಉದ್ಯಮ ಮೊದಲಿನಂತೆ ಮುಂದುವರೆಯುತ್ತದೆ, ಎಲ್ಲವನ್ನು ಮರೆತು ಜನ ಮತ್ತೆ ಚೀನಾ ವಸ್ತುಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ಸಮೀಕ್ಷೆ ವಿವರ ನೀಡಿದ್ದು ಮಧ್ಯಮ ವಯಸ್ಸಿನ ಅಂದರೆ 45 ವರ್ಷದಿಂದ 60 ವರ್ಷದೊಳಗಿನ ಜನರು ಶೇಕಡ 75ರಷ್ಟು ಮಂದಿ, 25 ವರ್ಷದಿಂದ 45 ವರ್ಷದ ವಯಸ್ಸಿನ ಶೇಕಡ 66ರಷ್ಟು ಮಂದಿ ಹಾಗೂ 60 ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಶೇಕಡ 29ರಷ್ಟು ಮಂದಿ ಚೀನಾ ವಸ್ತುವನ್ನು ಬಹಿಷ್ಕರಿಸುವುದಾಗಿ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಕೇವಲ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಮಾತ್ರವಲ್ಲದೆ ದೇಶದ ಉಳಿದ ಎಲ್ಲಾ ಶಿಕ್ಷಣಿಕ ವರ್ಗದಲ್ಲಿಯೂ ಚೀನಾ ದೇಶದ ವಿರೋಧಿ ಭಾವನೆಗಳು ದಟ್ಟವಾಗುತ್ತಿದೆ, ಇದೇ ರೀತಿ ಮುಂದುವರಿದರೆ ಇದರಿಂದ ದೇಶಕ್ಕೆ ಯಾವ ರೀತಿಯ ಲಾಭವಾಗುವುದು ಅಥವಾ ನಷ್ಟವಾಗುತ್ತದೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here